ಪುಟ:ಅರಮನೆ.pdf/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೮೭ ಹರಿದಾಡಬಲ್ಲರು.. ಯಿಲಿಚಮ್ಮನಂಗೆ ಸಂದು ಗೊಂದುಗಳೊಳಗೆ ಸಲೀಸಾಗಿ ತೂರಿಕೊಳ್ಳಬಲ್ಲರು.. ನೋಡುನೋಡುವಷ್ಟರಲ್ಲಿ ವಬ್ಬರು ಯಿಬ್ಬರಾಗಬಲ್ಲರು.. ಯಿಬ್ಬರು ನಾಕುಮಂದಿ ಆಗಬಲ್ಲರು.. ಯಿ ಯಿಲ್ಲೆಂದರಲ್ಲಿ.. ಅಗೋ ಅಲ್ಲಂದರಲ್ಲಿ ಮೂಡಿ ಹಿಡಿಯ ಬಂದಣ್ಣಗಳಿಗೆ ಚಳ್ಳೆಹಣ್ಣು ತಿನಿಸಬಲ್ಲರು.. ತಮ್ಮ ಕಣೋಟದ ಛಾವಿಯಿಂದ ತಿಜೋರಿ, ಕಬ್ಬಿಣ ಪೆಟಾರಿಗಳನ್ನು ತೆರೆಯಬಲ್ಲರು. ತಮ್ಮ ಅಂಗಯ್ಯಗಳನ್ನಾಡಿಸಿ ಯದ್ದವರನ್ನು ಮಲಗಿಸಬಲ್ಲರು.. ಮಲಗಿದ್ದವರನ್ನು ಯಬ್ಬಿಸಬಲ್ಲರು.. ಯೇನು ನೋಡಿದಿವಿ.. ಯೇನು ಬಿಟ್ಟಿವಿ ಯಂಬುದನ್ನು ಮರೆಯೋ ಹಂಗ ಮಾಡಬಲ್ಲರು.. ತಮ್ಮ ಯಿಚ್ಚಾಸಕ್ತಿಯಿಂದ ಹಗಲನ್ನು ರಾತ್ರಿಯನ್ನಾಗಿಯೂ.. ರಾತ್ರಿಯನ್ನು ಹಗಲನ್ನಾಗಿಯೂ ಪರಿವರಿಸಬಲ್ಲರು. ಯಿದಕ್ಕೆಲ್ಲ ಅವರಿಗೆ ಅವರ ಕುಲದೇವತೆಯಾದ ಪೋಲಾರಮ್ಮನ ಆಶೀರುವಾದವುಂಟು.. ತನ್ನ ಭಕುತರು ಯಷ್ಟು ಕಳ್ಳತನ ಮಾಡುತ್ತಾರೋ ಆಕೆಗಷ್ಟು ಸಂತೋಸವು, ಕಳ್ಳತನ ಮಾಡದ ಸೋಮಾರಿಗಳನ್ನಾಕೆ ಸುಮ್ಮನೆ ಬಿಡುವಾಕೆಯಲ್ಲ.. ಯೇಳೇಳು ಕೆರೆಯ ನೀರು ಕುಡಿಸುತಾಳ.. ರವುರವ ನರಕ ಪ್ರಾಪ್ತ ಆಗುವಂತೆ ಮಾಡುತಾಳ.. ಗಾದರಿಮಲೆ, ನುಂಕಮಲೆ, ಸಂಡೂರುಗೆಡ್ಡೆಂರು ಕಾರೀಕಮಲೆ ವಳಿತದೊಳಗಿರೋ ಮೂರುಗಳ ಜಮೀಂದಾರರು, ಬಡ್ಡಿ ಲೇವಾದೇವಿ ಸೀಮಂತರು ಯಲ್ಲಾಪ್ರಕೊರಚಟ್ಟಿಯ ಕಳ್ಳರೊಂದಿಗೆ ಕೊಡುಕೊಳ್ಳೋದು ಯೆಟುಕೊಡಿರುವರೆಂಬುದು ಅನೇಕರಿಗೆ ಗೊತ್ತಿಲ್ಲದ ಸತ್ಯಸಂಗತಿಯು, ಯಲ್ಲಾಪ್ರಕೊರಚರಟ್ಟಿ ಅಂಬುದು ಹೆಸರಿಗೆ ಮಾತ್ರಹರಪನಹಳ್ಳಿಯನ್ನು ಮುಚ್ಚಂಗಿಯಿಂದಲೂ.. ವುಚ್ಚಂಗಿಯನ್ನು ಹರಪನಹಳ್ಳಿಯಿಂದಲೂ.. ಬೇರೆ ಮಾಡುವ ಪೋಲೇರಮ್ಮನ ಹಳ್ಳದ ಯಡದಂಡೆಯ ನಿತ್ಯ ಹರಿದ್ವಣ್ಣ ಕಾಡಿನ ನಟ್ಟನಡುವೆ ಅದ ಅಂದರೆ ಅದ.. ಯಿಲ್ಲ ಅಂದರೆ ಯಿಲ್ಲ.. ವರುಷದ ಮುನ್ನೂರಾ ಅರವತ್ನಾಕು ದಿನಗಳ ಕಾಲ ಸುಂಟರಗಾಳಿ ತುಂಗ ಯಿಡೀ ಭೂಮಂಡಲ ಸುತ್ತಾಡುವ ಆ ಕುಸಲಕರುಮಿಗಳು ಆ ಮುನ್ನೂರಾ ಅರವತ್ತಯ್ಯನೇ ದಿನ.. ಅಂದರ ಸೀಗೇ ವುಣ್ಣುಮಿಯ ಯಡ ಬಲ.. ಅಂದರ ಮೇಲೇರಮ್ಮ ಮೂಲಾನಕ್ಷತ್ರದಲ್ಲಿ ತನ್ನ ಗುಡಿಗೆದುರುಗಡೇಕಿರೋ ಬುಡುಮೆ ಕಲ್ಲೊಳಗೆ ಕಾಣಿಸಿಕೊಂಡು ತನ್ನ ಭಕುತಾದಿ ಮಂದಿಯ ಯಿಷ್ಠಾರ ಪೂರಯಿಸೋ ದಿನ. ಅಸಂಗ್ರಹ ಯಂಬ ತತ್ವವನ್ನು ಬಿಡಿಸಿ ಹೇಳುವ ದಿನ ಅವರೆಲ್ಲ ಯೆಲ್ಲೇ ಯಿದ್ದರೂ.. ಸೆರೆಮನೆಗಳಲ್ಲಿದ್ದರೂ