ಪುಟ:ಅರಮನೆ.pdf/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ ಅರಮನೆ ಯಿಂಡಿಯಾವನ್ನು ಗೆದ್ದು ಬಿಡಬಹುದೆಂದು ಯಡ್ಡವರನು ಅಂಥ ನಿರಾಶಾ ಸ್ಥಿತಿಯೊಳಗೂ..... ತಾನು ಕಾಡು ಸೇರಿ ಯಷ್ಟು ದಿನವಾಗಿದ್ದಿರಬೌದೆಂದು ಯಡ್ಡವರು ಲೆಕ್ಕ ಹಾಕಿ ನೋಡಿಕೊಳ್ಳುತ್ತಾನೆ, ಬರೋಬ್ಬರಿ ಯಂಟು ದಿವಸವಾಗಿರುವುದು. ಮೊದಲೇ ಬಲು ಸ್ವಾಭಿಮಾನದ ಮನುಶ್ಯನಾದ ತಾನು ಬರುವಾಗ್ಗೆ ಹಂಗಿದ್ದಾತ.. ಹೊಳ್ಳಿ ಹೊಂಡುವಾಗ್ಗೆ ಹಿಂಗಾಗಿಬಿಟ್ಟಿರುವನಲ್ಲಾ... ಯೀಸೊಂದು ದಿವಸಗಳ ಶ್ರಮವು ಯರವಾಯಿತಲ್ಲಾ... ಕಲೆಬ್ರುಸಾಹೇಬನಿಗೆ ಯೇನೆಂದು ವುತ್ತರಕೊಡಲಿ? ಜೆನ್ನಿಫರಳಿಗೆ ಮುಖವನ್ಯಾಂಗ ತೋರಿಸಲಿ? ಯಂದು ವಳಗೊಳಗೆ ಮರುಗುತ ಅಜೇಯರಾಗಿ ವುಳಿದ ಯಲ್ಲಾಪ್ರರಕೊರಟ್ಟಿ ಕಳ್ಳರ ನೆನಪುಗಳನ್ನು ನಮಲುತ ಭಾರವಾದ ರುದಯದಿಂದ ಕೂಡ್ಲಿಗಿ ಹಾದಿ ಹಿಡಿದನು. ಹಾದಿ ಸವೆದಂತೆಲ್ಲಾ ಹೆಂಡತಿಯ ನೆನಪು ತರಾವರಿ ರೀತಿಯಲ್ಲಿ ಕಾಡಲಾರಂಭಿಸಿತು. ದೂರದ ವುದಕಮಂಡಲದ ವಸತಿ ಸಾಲೆಯಲ್ಲಿ ನೆನಹೂಮನಸ್ಸಿಗೆ ಅಟೆಯಲಾರಂಭಿಸಿತು. ಹೆಂಡತಿ ಯಿಚ್ಚೆಗೆ ಯಿರುದ್ಧವಾಗಿ ತಾನವರನ್ನು ಅಲ್ಲಿಗೆ ಸೇರಿಸಿದ್ದ ಬ್ರಿಟೀಶ್ ಸಂಪ್ರದಾಯದ ಅಚ್ಚುಕಟ್ಟುತನ, ಶಿಸ್ತನ್ನು ರೂಡಿಸಿಕೊಳ್ಳಲಿ ಎಂಬ ಕಾರಣಕ್ಕಾಗಿ.. ತಮ್ಮ ಜೊತೆಗಿದ್ದರೆ ಅವು ಯಿಂಡೀಯತೆಗೆಲ್ಲಿ ಮಾರು ಹೋಗುವಮೋ ಯಂಬ ಆತಂಕದಿಂದಾಗಿ.. ಆದರೆ ಜೆನ್ನಿಫರು ತನ್ನ ವುದ್ದೇಶವನ್ನು ಅರಮಾಡಿಕೊಳ್ಳದೆ ಸಿಡುಕಿದಳು.. ಸಿಡುಕನ್ನು ಮುಂದುವರಿಸಿಕೊಂಡೇ ಬಂದಳು. ಆಕೆಗ್ಯಾಕ ಯಿಂಡಿಯಾ ಅಂದರ ಯಾಕಿಷ್ಟು ಮೋಹಯಂಬುದೇ ತನಗರವಾಗುತ್ತಿಲ್ಲ. ಯಿಂಡಿಯಾದ ಮೂಲೆ ಮೂಲೆಲೆಲ್ಲಾ ತಾನು ಮಾನಸಿಕವಾಗಿ ವ್ಯಾಪಿಸಲು ಹಾತೊರೆಯುತ್ತಿದ್ದಾಳೆ.. ಯಿಂಡಿಯಾದ ಸಂಪ್ರದಾಯ ನಂಬಿಕೆಗಳನ್ನ ತಾನು ಅರಗಿಸಿಕೊಳ್ಳಬೇಕೆಂದು ತಹತಹಿಸುತ್ತಿದ್ದಾಳೆ.. ತಾನು ಯಿಂಡಿಯಾದ ಅಪ್ಪಟ ಗ್ರಾಮೀಣ ಮಹಿಳೆಯಾಗಬೇಕೆಂದು ಪ್ರತಿಕ್ಷಣ ಪ್ರಯತ್ನಿಸುತ್ತಿದ್ದಾಳೆ. ಆಕೆಯ ವಳತೋಟಿಯನ್ನು ನಿಯಂತ್ರಿಸಲು ತಾನು ಮಾಡಿದ.. ಮಾಡುತ್ತಿರುವ ಪ್ರಯತ್ನಗಳು ವಂದೇs ಯರಡೇ?.. ಮಕ್ಕಳನ್ನು ತನ್ನೊಂದಿಗೆ ಬಿಟ್ಟಿದ್ದಲ್ಲಿ ಆಕೆಯ ಭಾವನೆಗಳಿಗೆ ತಾನು ಕಡಿವಾಣ ಹಾಕಬಹುದಿತ್ತೇನೋ?.. ಹಿಂಗss ಯೋಚಿಸುತ್ತ ಸಾಗಿದ್ದ ಯಡ್ಡವರಗೆ ಯಿನ್ನೊಂದು ಗಳಿಗೆಯಲ್ಲಿ ತಾನು ಅತ್ತು ಬಿಡುವೆನೇನೋ ಅನ್ನಿಸಿತು. ದಾರಿಯುದ್ದಕ್ಕೂ ಯಿದ್ದ ಕವುಲರಟ್ಟಿ ಗೊಲ್ಲರಟ್ಟಿ, ಯೇಡಿ ಗುಡ್ಡ, ಬೀಡಿ ಗುಡ್ಡ,