ಪುಟ:ಅರಮನೆ.pdf/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರ್೪೫ ಹೊರಡಬೇಕೆಂಬುವಷ್ಟರೊಳಗ ಹಿ೦ದಲ ರಾತ್ರಿ ತಾನೊಂದು ಕಣಸು ಕಂಡನಂತೆ. ಆ ಕಣಸೊಳಗ ವಡಮೂಡಿದ ಮುತ್ತಯ್ದೆ ಯೋಲ್ವಳು 'ಮಗನೇ ಅಯ್ಯಾಳಿ, ನಾನು ಕಣಪ್ಪಾ ಸಾಂಬವಿ' ಅಂದಳಂತೆ. ಅದಕ ಯಿವಯ್ಯನು 'ಸಾಂಬವಿ ಅಂದರ ನನ ಕಲ್ಪನನ ಬ್ಯಾರೆ ಹೊತ್ತು ಕಣವ್ವಾ.. ನೀನು ನೋಡಲಕ ಮಾಮೂಲು ರಸ್ತಾಪಿ ಹೆಣುಮಗಳಂಗದಿ.. ನೀನ್ಯಾಕೆ ಬರಾಕ ಹೋದೆವ್ವಾ ನನ ಕಣಸೊಳಗ? ಅಂದಂನಂತೆ.. ಅದಕ ಆಕೆಯು 'ನೀನು ಕವಿ ಅದೀ ಅಂತ ಬಂದೆನಪ್ಪಾ ಅಂದಳಂತೆ.. ಅಂತೂ ತನ್ನ ಖ್ಯಾತಿಯು ದೇವಲೋಕಕ್ಕೂ ತಲುಪಿರುವುದು ತನ್ನ ಸುಕ್ರುತವು ಯಂದು ಬಗೆದ ಯಿವಯ್ಯನು 'ತಾಯಿ ಸಾಂಬವಿ ನನ್ನಿಂದೇನಾಗಬೇಕವ್ವ?” ಯಂದು ಕೇಳಿದನಂತೆ.. ಆಗ ಆಕೆಯು “ತ್ರಿಕಾಲಗ್ನಾನಿಯಾಗಿರುವ ನಿನಗ ಹೇಳುವುದೇನಯ್ಯಪ್ಪಾ.. ನಾನು ಗುಡಿಹಿಂದಲ ಮೂಳೆ ಮೊಬ೦ಯ್ಯನೆಂಬ ನಿತ್ರಾಣ ಮನುಷ್ಯನ ಮಂಯೊಳಗ ಸೇರಿಕೊಂಡಿರುವುದೇ ಪರಪಾಟಾಗ ನೋಡು.. ನನ್ನ ಹೆಸರು ಹೇಳಿಕೊಂಡು ಅಲ್ಲಿನ ಮಂದಿ ತಮ್ಮ ಬ್ಯಾಳಿ ಬೇಯಿಸಕೊಳ್ಳಲಕ ಹತ್ಯಾರ.. ಮೋಬಯ್ಯನ ತಮ ಕೀಲುಗೊಂಬೆ ಮಾಡಿಕೊಂಡಾರ.. ಸಾಮಾಜಿಕರೇನೋ ಯೊಗ ಸದ್ಯಕ ಕವಲೆತ್ತುಗಳಂಗ ತಲೆ ಅಲ್ಲಾಡಿಸ್ತಿದಾರ. ಆದರ ಕಾಲ ಸುಮ್ಮಕ ಬಿಡುವುದೇನು? ಮುಂದ ನನಗೆ ಲೋಕಾಪವಾದ ಬರಂಗಿಲ್ಲೇನು?” ಎಂದು ನಿಟ್ಟುಸಿರುಬಿಟ್ಟಳಂತೆ... ಅದಕ ಯೊ ಕವಿವಯ್ಯನು ಅವುದು ತಾಯಿ ಅವುದು.. ಯಿ ಕುಂತಳಸೀಮೆ ಹಿಂಗ ಗೊತ್ತು ಗುರಿಯಿಲ್ಲದಾಂಗ ಹೊಂಟದ ತಾಯಿ.. ಗಾಂಜಾ ಸೇದೋ.. ಹೆಂಡ ಕುಡಿಯೊ ಅವಧೂತ ಮಂದಿ ನಿನ್ನ ಹೆಸರಲ್ಲಿ ಮಾಡಬಾರದ ಕೆಲಸ ಮಾಡುತ್ತಿರುವುದು ನನಗೂ ಗೊತ್ತದ.. ಆದರೇನು ಮಾಡಲಾ.. ಯೋಗ ಸದ್ಯಕ ನಮ್ಮ ಸಮಾಜ ಹಂಗs ತಯಾರಾಗಯ್ಯ. ಯಂದನಂತೆ. ಆಗ ಆಕೆಯು “ನೀನು ನೋಡಲಕ ಬಡಪಾಯಿ ಪ್ರಾಣಿಯಂಗ ಕಾಣುತಿ.. ಆದರೆ ನಿನ್ನ ತಲಿಯೊಳಗ ಕ್ರಾಂತಿಕಾರಕ ಆಲೋಚನೆಗಳದಾವ.. ಅಲ್ಲದ ನೀನು ಕಂಡರಿಯದ, ಕೇಳರಿಯದ ಕವಿ ಅದೀ.. ವಂದು ಕಾಲದಲ್ಲಿ ಕಾಳಿದಾಸನ ವಲಿದಂಥವಳಾದ ನಾನು ಯೋಗ ನಿನಗ ವಲಿದಿರುವೆನು ನೋಡು. ನೀನು ನಿನ್ನ ಕುರುತು ನಿಕ್ರುಷ« ಭಾವನೆ ಮಾಡಿಕೋಬ್ಯಾಡ. ನಿನ್ನೆದೆಯೊಳಗ ಮಸಿಯ ಕಡಲುಂಟು ಬಿದಿರು ಮೆಳೆ ಕಾಡಿನೋಪಾದಿಯಲ್ಲಿ ಲೆಕ್ಕಣಿಕೆಗಳು ಲೆಕ್ಕವಿಲ್ಲದಷ್ಟುಂಟು, ಪೆಂಡೆ ಪೆಂಡೆ ಹಾಳೆ ಕಾಗದವುಂಟು.. ನೀನು ತಡಮಾಡದೆ ನಾನು ನೆಲೆಗೊಂಡಿರುವ ಕುದುರೆಡವಿಗೆ ಹೊಂಟು ಬಂದು ನನ ಮ್ಯಾಲ