ಪುಟ:ಅರಮನೆ.pdf/೫೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೯೭ ನೋಡುತೀ ಯಾಕ ಯಂದು ಕೇಳುವುದೆಂತು? ಕೇಳಲಾರದೆ ಮಂದಿ ವದ್ದಾಡುತಲಿತ್ತು.... ಅವರ ಯೋ ತೆರನ ವಾಟನ್ನು ಸಣ್ಣೀರಾದಲ್ಲಿ ಹೇಳುವುದೋ? ಮತ್ತೇಭ ಯಿಕ್ರೀಡಿತದಲ್ಲಿ ಹೇಳುವುದೋ? ಯಂದೀವಯ್ಯ ಯೋಚಿಸುತಲಿದ್ದುದನ್ನು ಗೂಢಾಚಾರರು ಗಮನಿಸದೆ ಯಿರಲಿಲ್ಲ.. ಕಾಲಕಾಲಕ್ಕೆ ಅರಮನೆಗೆ ವರದಿ ಮಾಡುತ್ತಿರದೆ ಯಿರಲಿಲ್ಲ.. ಯಿನ್ನೇನೀವಯ್ಯನು ತಮ್ಮರಮನೆಗೆ ಬೆನ್ನು ಮಾಡಿ ಬಹಿರೈಸೆಯ ಹಾದಿಗುಂಟ ಕಾಲು ಹಾಕಿದ ಯನ್ನುವಷ್ಟರಲ್ಲಿ ನಿಲುವಂಜಿ ನಿಗೂಢಯ್ಯ ನೆಂಬ ಗೂಢಾಚಾರನು ಅಡ್ಡ ನಿಂತು “ಸ್ವಾಮಿ... ಕುದುರೆಡವು ತನಕ ಬಂದು ಅರಮನೆ ಕಡೆಗೆ ಬೆನ್ನು ಮಾಡಿದರೆಂದರೆ ನೀವು ಸರಸ್ಕೊತಿಯ ವರಪುತ್ರರು ಯಂಬ ಅನುಮಾನ ನಮಗೆ ಬಂದಯ್ಕೆ.. ತಲೆ ಮ್ಯಾಲಿರುವುದನ ತಲಿಮ್ಯಾಲ ಯಿಟುಕೊಂಡು ಅರಮನೆಗೆ ಬಂದು ಪಟ್ಟಣ ಸೋಮಿಗಳ ಮಾರಗ ದರುಸನದಲ್ಲಿ ಪೀಠಾಧಿಪತಿ ಸಿಸು ಸಾಂಬಯ್ಯನ ದರುಷನ ಪಡಕೊಂಡು ಪುನೀತರಾಗಬೇಕು ನೋಡಿರಿ” ಯೆಂದು ಜಬರಲೆ ಹೇಳಿದ್ದಕ... ಅಂಯಾಳಿಂರು “ನಾವು ಅಕ್ಕಸರದ ಸಾಯದಿಂದ ಅರಮನೇನ ನೋಡುವವರೇ ಹೊರತು ಮುದ್ದಾಂ ಬಂದು ನೋಡುವವರಲ್ಲ.. ನಾವಿದ್ದಲ್ಲಿಗೆ ಅರಮನೆ ನಡಕೋತ ಬರುತಯ್ಕೆ.. ಯಿದೆಲ್ಲ ನಿಮ್ಮಂಥ ಮಾಮೂಲು ಗೂಢಾಚಾರರಿಗೆ ಅಗ್ಗವಾಗುವಂಥದ್ದಲ್ಲ. ದಾರಿ ಬಿಡು” ಯಂದನು. ಅದಕ್ಕೆ ನಿಗೂಢಯ್ಯನು 'ಅರಮನೆ ತಾನಿದ್ದಲ್ಲೇ ಯಿರಬೇಕು ಯಂಬ ಕಾರಣಕ್ಕೆ ನೀವು ಬರೋ ಜರೂರತ್ತಮ್ಮೆ ನೋಡಿ.. ವಳೇ ಮಾತಲಿ ನೀವು ಬರಲಿಲ್ಲಾಂದರ ನಾವಾss.” ಯಂದು ಹೇಳುತ್ತಲೇ ನಾಲ್ಕಾರು ಮಂದಿ ಭಟರನ್ನು ತೋರಿಸಿದನು. ವುದಯೋನ್ಮುಖ ಅವಧೂತರಂತಿದ್ದ ಅವಯ್ಯಾರ ಕಯ್ಯ ವಂದೇ ವಂದು ಆಯುಧ ಯಿರಲಿಲ್ಲ.. ಆದರೆ ಅವರು ಯಾರೇ ಆಯುಧಕ್ಕಿಂತ ಕಡಿಮೆ ಯಿರಲಿಲ್ಲ... - ಅಯ್ಯಾಳಿಯು ಅರಮನೆ ಕಡೇಕ ಮುಖ ಮಾಡಿದನೆಂಬಲ್ಲಿಗೆ ಸಿವಸಂಕರ ಮಾದೇವಾss.. ಅತ್ತ ಕೂಡ್ಲಿಗಿ ಪಟ್ಟಣದೊಳಗ ಯಾರ ಬಾಯಿ ತೆಗೆದು ನೋಡಿದರೂ ಕುದುರೆಡವಿನ ಅಲವುಕಿಕ ಯಿದ್ಯಾಮಾನಂಗಳು... ಅವುಗಳಲ್ಲಿ ಭೋ ಪಾಲು