ಪುಟ:ಅರಮನೆ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಅರಮನೆ ಗಂಡನ ಸರೀರದೊಳಗೆ ತೂರಂಡಿರೋದು ಘನಘೋರ ಅಪರಾಧ.. ನಿನಗೆ ನಾನು ಸರಣೋಗುವುದೆಂದರೇನು? ನೀನೆಂಗ ನನ ಗಂಡನ ಸರೀರದಿಂದ ಹೊರ ಹೋಗೋದಿಲ್ಲೋ ನಾನು ನೋಡ್ತೀನಿ” ಯಂದು ಗುಡು ಗುಡುಗಿದಳು.. ಸರೀರವು ತನ್ನ ನೋಟ ಮಾತ್ರದಿಂದ ಆಕೆಯನ್ನು ಮನೆಯಿಂದ ಹೊರತಳ್ಳಿತೆಂಬಲ್ಲಿಗೆ... ಅತ್ತ ಕಡಪಾ ಯಂಬ ಪಟ್ಟಣದೊಳಗೆ ಥಾಮಸು ಮನೋ ಸಾಹೇಬನು ನೀನು ನಿನ್ನ ಕುಟುಂಬ ಸಲುವಲು ಮುನ್ನೂರೆಕರೆ ಯಿಟ್ಟುಕೋ ಯಂದು ಚಿನ್ನೋಬುಳ ರೆಡ್ಡಿಗೂ, ನೀನು ನಿನ್ನ ಕುಟುಂಬ ಸಲುವಲು ಮುನ್ನೂರಕೆರೆ ಯಿಟ್ಟುಕೋ ಯಂದು ವುಯಾವುಲ ಕೇಸುವರೆಡ್ಡಿಗೂ ಹೇಳಿ ನಿಗದಿ ಪಡಿಸುತ್ತಿರುವಾಗ್ಗೆ... ಈ ಪದ ತಿಮ್ಮಾರೆಡ್ಡಿ ಮತ್ತಾತನ ಸಂಗಡಿಗರು ನರಸಿಮ್ಯಸ್ವಾಮಿಗೆ ಪೂಜೆ ಸಲ್ಲಿಸಿ ರಣಯೀಳ್ಯ ಪಡೆಯಲಕೆಂದು ಕದಿರಿಯತ್ತ ಪ್ರಯಾಣ ಬೆಳೆಸಿರುವಾಗ್ಗೆ.... ಅತ್ತ ಜರುಮಲಿ, ಮೂರಂಚಲ್ಲಿ ನುರಿತ ಬೇಟೆಗಾರರೂ, ನಿಷ್ಣಾತ ಗೂಢಾಚಾರರೂ ಆದಂಥ ಗುತ್ತಪ್ಪ, ವತ್ತೆಪ್ಪರೆಂಬ ಅವಳಿ ಸೋದರರು ನಿಚ್ಚಾಪುರದ ಕಡೆ ಹೊಂಟಿದ್ದ ಪಾರಿವಾಳವನ್ನು ಬಾಣ ಗುರಿಯಿಟ್ಟು ಕೆಡವಿ ಅದರ ಕಾಲ ವುಂಗುಟಕಿದ್ದ ಪತ್ತರವನ್ನು ಬಿಚ್ಚಿ ಅಕ್ಕರಗಳನ್ನು ನೋಡಿ ತಿಕಮಕರಾಗಿರುವಾಗ್ಗೆ.... ಅತ್ತ ಜೊನ್ನಗಿರಿಂರು ರಾಜ ಕದಿರೆ ಪ್ಪ ನಾಯಕನೆದುರು ಹಾಜರುಪಡಿಸಲೆಂದು ಮದ್ದಿ ಕೇರಿ ಸಂತ್ರಸ್ತರನ್ನು ಸಕರು ದರಗುಟ್ಟಿಯಳದೊಯ್ಯುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಯೋಮಾಂಬೆಯು ಪಿಕದಾನಿ ಹಿಡಿಯೋ ಮೋಬಯ್ಯನನ್ನು ನೀನು ಕರೆದುಕೊಂಡು ಬಾ, ನೀನು ಕರೆದುಕೊಂಡು ಬಾ ಯಂದು ವುಂಡುವುಪವಾಸಿ ಬಳಸಿ ಬೆಮ್ರಚಾರಿಗಳಂತಾಗಿದ್ದ ವಂದಿಬ್ಬರು ಸಮ್ಮಿಕರನ್ನು ಥಳಗೇರಿಗೆ ಕಳುವಿ ಬಂದನೋ ಬಾರನೋ ಯಂಬ ನಿರೀಕ್ಷೆಯಲ್ಲಿರುವಾಗ್ಗೆ.. ರಾಜಕುಮಾರ ಕಾಟಯ್ಯ ನಾಯಕನು ತನ್ನ ಗುದದ ಬೊಕ್ಕೆ ಯಿಲಾಜು ಮಾಡಿಕೊಳ್ಳುವ ಸಲುವಾಗಿ ತಾನು ಪಗಡೆಯಾಟ ದಲ್ಲಿ ಗೆದ್ದದ್ದಂಥಾ ಮಾಯಾವಿ ಪಂಚಲೋಹದ ಗಿಂಡಿಯೊಳಗೆ ನೀರು ತುಂಬಿಕೊಂಡು ಹೊರಕಡೀಕಂತ ಕಡುದಮ್ಮನ ಹಳ್ಳದ ಸಾಲಿನ ಕಡೇಕ ಗುಟ್ಟಾಗಿ ಹೋಗುತ್ತಿರುವಾಗ್ಗೆ ಸಿವ ಸಂಕರ