ಪುಟ:ಅರಮನೆ.pdf/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೦ ಅರಮನೆ “ಯಿವರೆಲ್ಲ ಕಟ್ರಲೇ ವದ್ದು ಬಾಯಿ ಬುಡುಸಲೇ” ಯಂದು ತನ್ನ ಸಮ್ಮಿಕರಿಗೆ ಆಗ್ನೆ ಮಾಡುತ್ತಿರುವಾಗ... ಯಿತ್ತ ಕುದುರೆಡವು ಪಟ್ಟಣದ ರಣ ಬಯಲೊಳಗಿದ್ದ ಹವಾಮಹಲಿನಲ್ಲಿ ತನ್ನ ರಾಜಪರಿವಾರದ ಸಮಸ್ತ ಮಂದಿಯನ್ನು ಯದುರಿಗೆ ಕುಂಢಿಸಿಕೊಂಡು ರಾಜಮಾತೆಯು “ಯೇನರಪ್ಪಾ.. ಯೇನರವ್ವಾ. ಅಲಬಝನ ಕಂಯ್ಯ ಕಿಸಿಯಲಕಾಗಲಿಲ್ಲ.. ಯಡ್ಡವರನ ಕಯ್ಯ ಕಿಸಿಯಲಕಾಗಲಿಲ್ಲ. ನಮ್ಮ ಕುದುರೆಡವು ಆ ಥಾಮಸು ಮನೋನ ಲೆಕ್ಕದಾಗಿದ್ದಂಗಿಲ್ಲ... ಬುಕ್ಕುದಾಗಿದ್ದಂಗಿಲ್ಲ.. ಆತ ಬಂದು ಕಿಸಿಯೋದು ಆಟರಾಗಯ್ತಿ.. ನಿಮ್ಮನ್ನ ಸಲಮೋ ಸಕ್ತಿ ನನ್ನಲ್ಲಿಲ್ಲ.. ಯಲ್ಲಾರು ನಿಮಗೆಂಗ ತೋಚುತಯ್ದೆ ಹಂಗ ಬದುಕೀ.. ಆದರೆ ಯೀ ಮರೊಳಿಗಿದ್ದು ಮಾತ್ರನಿಮ್ಮ ಹಿರೇರು ಸಂಪಾಸಿರೋ ಗವುರವಾನ ಮಣ್ಣುಗೂಡಿಸಬ್ಯಾಡ್ರಿ.. ದಿಕ್ಕು ದಿಕ್ಕಿಗೊಬ್ಬೊಬ್ಬರಂತೆ ಹೊಂಟೋಗಿಬಿಡ್ರಿ.. ಆದ್ರ ಪಿಕದಾನಿ ಮೋಟಯ್ಯನೆದುರು ಮಾತ್ರಕಯ್ಯ ಚಾಚಬ್ಯಾಡಿ, ಟೇ ನಾನ್ನಿಮ್ಮನ್ನ ಕೇಳಿಕೊಳ್ಳೋದು.. ನಂಗೆ ಬದುಕೀ ಬದುಕೀ ಸಾಕಾಗಯ್ತಿ.. ಕುಂತ್ರೆಂತದ್ದೇಳೋಕಾಗ್ತಾಯಿಲ್ಲ... ಯದ್ರೆಕುಂದುರೋಕಾಗ್ತಾಯಿಲ್ಲ... ಕೆಮ್ಮು ದಮ್ಮು ಬಾದಿಸಲಿಕ್ಕತ್ತಯ್ತಿ.. ನಾನು ಮದು ಚಲೋ ದಿನ ನೋಡ್ಕೊಂಡು ಕಣ್ಣುಮುಚ್ಚಲಾಕಂತ ಮಾಡೀನಿ” ಯಂದು ಹೇಳುತ ಕೊಕ್ ಕೊಕ್ ಅಂತ ಕೆಮ್ಮುತಿರುವಾಗ್ಗೆ.. ತನ್ನೆದೆಯೊಳಗ ಖ್ಯಾತ ಕಲ್ದಾಟಂಗಳಿದ್ದರೂ ಕವಿ ಅಯ್ಯಾಳಿಯು ಅಂಜಿಕೆಯಿಂದಲೇ ನಡೆದನು. “ಯಿದೇ ಅರಮನೆ ಸ್ವಾಮೀ... ಯಿಲ್ಲಿಂದ ಅಲ್ಲಿವರೆಗೆ ಅಯ್ಕೆ” ಯಂದು ನಿಗೂಢಯ್ಯ ಅಂದಾಗ ಕಕ್ಕಾವಿಕ್ಕಿಯಾದನು. ಅರಮನೆ ಜಾಗದಲ್ಲಿ ಅರಮನೆಯಿರಲಿಲ್ಲ. ಕಾವಲು ಭಟರ ಅಟಾಟೋಪ ಯಿರಲಿಲ್ಲ. ಅಲ್ಲಿದ್ದದ್ದು ಕೇವಲ ನೂರಾರು ದನಕರುಗಳ ಅಂಬಾss ಅಂಬಾss ಯಂಬ ನಿನಾದ.. ಅಲ್ಲಲ್ಲಿ ಸಾಧು ಸಂತ ಮಂದಿ ತಂಬಾಕು ಸೇದುತ್ತ, ತಂಬೂರಿಗಳ ಸ್ತುತಿ ಸರಿಪಡಿಸಿಕೊಳ್ಳುತ್ತ ಕೂತಿದ್ದರು.. ಅಲ್ಲಲ್ಲಿ ಕೆಲವರು ಹರಕೆ ತೀರಿಸುವ ಸಲುವಾಗಿ ತಮ್ಮ ತಮ್ಮ ಸರೀರಗಳನ ದಂಡಿಸಿಕೊಳ್ಳ ತೊಡಗಿದ್ದರು. ಮೂಕ ಯಿಸುಮಿತಗೊಂಡಿದ್ದ ಅವಯ್ಯನನ್ನು ನಿಗೂಢಯ್ಯ ಪಟ್ಟಣ ಸೋಮಿಗಳ ಸಮಕ್ಷಮ ಸಾದರಪಡಿಸಿದನೆಂಬಲ್ಲಿಗೆ ಸಿವಸಂಕರ ಮಾದೇವಾss.. ವಳತನ, ಹೊರಗುತನಗಳೆರಡನ್ನೂ ಕಳಕೊಂಡಿದ್ದ ಅರಮನೆಯೊಳಗೆ ತನ್ನ ವಾರಕಯಿರುವುದಾ? ಪರಿವಾರಕ ಯಿರುವಾದಾ? ಬರೀ ಬಯಲ