ಪುಟ:ಅರಮನೆ.pdf/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫C೬ ಅರಮನೆ ಚುಡನ ತೊರಡು ಬೀಜಗಳು ಕಳುವಾಗಿದ್ದು ಸರುವ ಯಿದಿತ, ಕಂಡಕಂಡೋರನ್ನ ಹೊಡದು, ಕಯ್ಯಗೆ ಸಿಕ್ಕಿ ಸಿಕ್ಕಿದೋರನ್ನು ಬಡದು ನಾಯಕನು ತನ್ನ ಮಯ್ದೆ ಹಳ್ಳಣ್ಣೆ ಕಾವು ಕೊಡಿಸಿಕೊಳ್ಳುತ ಹಂಗಿದ್ದದ್ದು ಹಿಂಗಾಗಯ್ತಲಾ ಯಂದು ಯಸನ ಮಾಡುತ ಯಿಳಿಯಲಕ ಹತ್ತಿದ್ದನು. ಸಾಕುನಾಯಿಯಾದ ಭೀಮನೇ ತಾನು ಮಲಗಿಕೊಂಡಿದ್ದ ಹೊತ್ತಿನಲ್ಲಿ ತನ್ನ ಕುತ್ತಿಗೇಲಿದ್ದ ಆ ಸಕ್ರಿಸಾಲಿ ಬೀಜಗಳಿಗೆ ಬಾಯಿ ಹಾಕಿ ನುಂಗಿತ್ತು. ಆದಾತನಿಗೆ ಅದರ ಅರಿವಿರಲಿಲ್ಲ. ಹೆಚ್ಚಾದ ಕಾಮತ್ರುಷೆ ತೀರಿಸಿಕೊಳ್ಳಲೋಸುಗ ಭೀಮನು ಸೊಕ್ಕೆ ನಗರದ ಬೀದಿ ಹಾದಿಗಳಲಿ ಅಂಡಲೆಯುತಲಿತ್ತು. ಯಿತ್ತ ಕುದುರೆಡವು ಪಟ್ಟಣದೊಳಗ ರಣ ಬಯಲ ಹವಾಮಹಲಲ್ಲಿ ವಾಸ್ತವ್ಯ ಹೂಡಿದ್ದ ವುವು; °ಲ ರಾಜಪರಿವಾರ ಚಿಂತೆಯ ಕಡಲಲ್ಲಿ ಮುಳುಗಿತ್ತು. ರಾಜಮಾತೆ ಭಯಮಾಂಬೆಯ ಮಯ್ಯಲ್ಲಿ ಸಜ್ಜಿರಲಿಲ್ಲ, ಮಣಿಮಂಚ ಯಂಬ ಹೆಸರಿನ ವರಸಿಗೆ ಬೆನ್ನಂಟಿಸಿ ಅಂಗಾತ ಮಲಗಿಬಿಟ್ಟಿದ್ದಳು, ಮೊನ್ನೆಯಿಂದ ಬಾಯಿ ಬಿದ್ದು ಹೋಗಿತ್ತು, ನಿನ್ನೆಯಿಂದ ಕಯ್ಯಕಾಲು ಆಡಿಸೋದೂ ನಿಂತುಹೋಗಿತ್ತು, ಗುಡ್ಡೆಗಳು ಮೇಲೆಪ್ಪೆಯೊಳಗೆ ಸೇರಿಕೊಂಡುಬಿಟ್ಟಿದ್ದವು, ಮಂಚ ಅಲ್ಲಾಡುವಂತೆ ವುಸುರ ಯಳಕಂತಿದ್ದಳು, ಬಿಡುತ್ತಿದ್ದಳು. ಯೀಗ ಪ್ರಾಣ ಬಿಟ್ಟಾಳು, ಆಗ ಪ್ರಾಣ ಬಿಟ್ಟಾಳು ಅಂತ ಮಣ್ಣಿಗಂತ ಬಂದಿದ್ದ ಬೀಗರು ಬಿಜ್ಜರು ಯದುರು ನೋಡುತ್ತಿದ್ದರು, ಹಿರೇ ಮನುಳ್ಳೋಳು ಪ್ರಾಣ ಬಿಟ್ಟರೇನು ಗತಿಯಪ್ಪಾ? ರಾಜರ ರೀತಿ ರಿವಾಜಿನಲ್ಲಿ ಹೆಣವನ್ನು ಸುಡುಗಾಡಿಗೆ ಸಾಗಿಸೋದೆಂಗ? ಮಣ್ಣು ಮಾಡೋದೆಂಗ? ತಿಥಿ ಶ್ರಾದ್ಧ ಮಾಡೋದೆಂಗ? ಅಯೂರಾವಂದು ಮಂದಿ ಬ್ರಾಂಬಿಗೆ ಮೂಟ ಹಾಕಿ ಪಿಂಡಸಾಂತಿ ಮಾಡೋದೆಂಗ? ಅಂತ ಕಾಟಯ್ಯನೂ, ಅವನ ಸಂಗಡಿಗರೂ ತಲಾ ವಂದೊಂದು ಮೂಲಿ ಹಿಡಿದು ಯಸನ ಮಾಡುತಿದ್ದರು. ಸದ್ಯ ರಾಜವಂಸಕ್ಕೆ ಹತ್ತಿರದ ನೆಂಟನೂ, ಯಿಂಥ ಹತ್ತಾರು ಸಾವನ್ನು ಕಣ್ಣಾರೆ ಕಂಡುಂಡಂಥವನೂ ಆದಂಥ ಸಿಂಗನಮಲದ ಯಂಬಳಗಡಿಗೆಯ ಕುಸ್ಥವರನಾಯಕನು ಪದಭರುಮನಾಯಕರ ಕಾಲದಲ್ಲಿ ಕಾಶೀ ದೇಸದಿಂದ ತರಿಸಿಟ್ಟುಕೊಂಡಿದ್ದ ಗಂಗೋದಕ ತಗಂಬಕ್ರೀಅಂತಿದ್ದನು. ಯಿಲ್ಲದ್ದನು ಯಲ್ಲಿಂದ ಜೋಡಿಸೋದು? ಅದಿರುವ ತಿರುಗುಣಿ ಚಂಬು ಯೇಸೋ ವರುಷಗಳಿಂದ ಯಾರ ಕಣ್ಣಿಗೂ ಬಿದ್ದಿಲ್ಲ. ರಾಜಪರಿವಾರದ ಪಯ್ಕೆ ಯಾರಾದರೊಬ್ಬರು ಹಳೆ ಸಾಮಾನು ಖರೀದಿಸುವ ಪರಂಗಿ ಮಂದಿಗೆ