ಪುಟ:ಅರಮನೆ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮಾದೇವಾ$$ ಗುಡಿಹಿ೦ದಲ ಮೂಳೆ ಮೋಬಯ್ಯನ ಸರೀರದೊಳಗೆ ಸಾಂಬವಿ ವಸ್ತಿ ಮಾಡಿರುವಳೆಂಬ ವರಮಾನವನ್ನು ತನ್ನ ಮಯ್ಯ ಪದರೊಳಗೆ ತುಂಬಿಕೊಂಡು ಗಾಳಿ ಯಿತ್ತಲಿಂದ ಅತ್ತ ಸುಳುದಾಡುತ ಹೋತು, ಕಾಗೆ, ಗುಬ್ಲಿಯೇ ಮೊದಲಾದ ನಿರುಪದ್ರವಿ ಪಕ್ಷಿಗಳು ಆ ವರಮಾನದ ಮೂಟೆಯನ್ನು ತಮ್ಮ ತಮ್ಮ ಹೆಗಲ ಮ್ಯಾಲ ಹೇರಿಕೊಂಡು ಯಿತ್ತಲಿಂದ ಅತ್ತ ಹಾರುತ್ತ ಹೋದವು. ಯೀ ಪರಮಾನ್ನ ಸದ್ರುಸ ಸುದ್ದಿಯನ್ನು ಮಂದಿ ತಮ ಬಾಯಿಯಿಂದ ಖಿನ್ನೊಬ್ಬರ ಕಿವಿಗೆ ಬಡಬಡಿಸತೊಡಿಗದರು. ಬಾಯಿ ಕಿವಿಗಳುಳ್ಳ ಮಂದಿ ಪಯ್ಲಿ ಕೆಲವರು ಮುಖ ಮಾರುನ ಮಾಡಿಕೊಳ್ಳೋದ ಬಿಟ್ಟು, ಯಿಸಲ್ಟನ ಕಾರೈವುಗಳನ್ನು ಆರಂಬರಕ್ಕೆ ಬಿಟ್ಟು ಕೂಸು ಕಂದಮ್ಮ ಗಳನ್ನು ತಮ್ಮ ತಮ್ಮ ಯದೆಗವುಚಿಕೊಂಡು, ಅಂಗಿ, ಪಂಚೆ, ಕುಬುಸಗಳಿಗೆ ಗುಂಡಿ ಹಾಕಿ ಕೊಳ್ಳುತ, ಚಲ್ದಾಣಗಳಿಗೆ ಲಾಡಿ ಬಿಗಿದು ಸರಗಂಟು ಹಾಕುತ, ಬಾಯೊಳಗೆ ಬಾನದುಂಡೆಯನ್ನು ನಮಲೋದು ಮರೆಯುತ, ಕಯ್ಯ ತಿರುಮತ, ಕಾಲು ಬೀಸಿ ಬೀಸಿ ಹಾಕೂತ ಹಾಕೂತ ಥಳಗೇರಿಯ ಗುಡಿ ಹಿ೦ದಲ ಮನೆಗೆ ಯಡತಾಕಿ ಮನೆಮುಂದಲ ಪಳುಗಟ್ಟೆ ಮ್ಯಾಲ ಮಟ್ಟಸವಾಗಿ ಕೂಕಂಡಿದ್ದ ಮೋಬಯ್ಯನನ್ನು ಯಿಸುಮಯದಿಂದ ನೋಡಿ “ಹಾಯ್ ಸಿವನೇ ಸಿವಸಂಕರ ಮಾದೇವಾss” ಯಂದುದ್ಧಾರ ತೆಗೆಯೂತ ತಮ್ಮ ತಮ್ಮ ಮನೆಗಳಿಗೆ ವಾಪಾಸಾಗ ಲಾರಂಭಿಸಿದರು. ವಜ್ರಾಲ ಸೋಲಪ್ಪ ಪುಂಗಿ ಪುಲ್ಲಪ್ಪ, ಮುತ್ತೇರಿ ಮಲ್ಲವ್ವ ಬೋರಯ್ಯರೆ ಮೊದಲಾದ ಹಿರೀಕರು ಗುಡ್ಡದ ಹಿಂದು ಮುಂದುಲ ಗಂಡು ಕಲ್ಲುಗಳಂಗೆ ನೆರೆದು ಮೂಗಿನಿಂದಲೂ ಕಣ್ಣೀರು ಸುರಿಸುತಲಿದ್ದ ಜಗಲೂರೆವ್ವಗೆ ಪರಿಪರಿಯಿಂದ ಸಮಾಧಾನ ಹೇಳುತಲಿದ್ದರು. ಆಜುಡಲವ್ವ ಗಾದೀರಮ್ಮ, ವುಲಿಗೆವ್ವ ಯಲ್ಲಮ್ಮ ಯಲ್ಲಮ್ಮ ಅಲ್ಲೆಮ್ಮರೇ ಮೊದಲಾದ ನಿತ್ಯ ಸುಮಂಗಲೇರು ಅವ್ವನ ಸಾಲಂಕ್ರುತ ಹಡಲಿಗೆಯನ್ನು ತಮ್ಮ ತಮ್ಮ ತಲೆ ಮ್ಯಾಲ ಹೊತ್ತು ಕೊಂಡಲ್ಲಿಗೆ ಬಂದು ಚವುಡಿಕೆಗಳನ್ನು ಮೀಟುತ್ತ “ಸಾಂಬವಿಯ ಮಗನಾದನೇ ನಮಮೋಬ ಜಗದಂಬೆ ಸಿಸುವಾದನೇ” ಯಂದು ಹಾಡೂತ ಪಾಡೂತ ಕುಣಿಯ ತೊಡಗಿದರು. ಥಳಗೇಲ್ಯಾತಿ ಥಳಗೇರಿ ಕಡೇಲಿಂದ ಕಳವಳ, ತಡಸಲ, ಬಳುವಳ, ಕಡುವಲರೆಂಬ ಹೊಲೇರ ಪಡುವಲಯ್ಯನ ಮಕ್ಕಳು ಸುಯ್ಯಂತ ಬಂದು ತಮ್ಮ ತಮ್ಮ ಹಲಗೆ ತಪ್ಪಡಿಗಳ ಮ್ಯಾಲ ಕೋಲಾಡಿಸಲಾರಂಭಿಸಿದರು. ಮುದ್ದ, ಸುದ್ದ, ಗುದ್ದರೆಂಬ ಸಿದ್ದನ ಮಕ್ಕಳಲ್ಲಿಗೆ ಸುಯ್ಯಂತ ಬಂದು 'ಕೂಂಯ್.. ಕುಕುಕೂಂಯ್ss' ಯಂದು