ಪುಟ:ಅರಮನೆ.pdf/೫೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫ರ್C ಅಂದರೆ ಅಲ್ಲಿ ಜಿಗಿದಾಡುತ್ತಿದ್ದನು. ಬಾರಪ್ಪಾ... ಬಾ ಕಂದಾ.. ಯಂದು ಪ್ರತಿಯೊಂದು ಮನೆಯೋರು ಅಂಗಲಾಚುತ್ತಿದ್ದರು. ಆತ ತಮ್ಮನೆಗೆ ಬಂದಲ್ಲಿ ವಳೇದಾಯದ ಯಂಬ ಕಾರಣದಿಂದ... ಆತನೊಳಗೆ ತಾಯಿ ಅಡಗಿರುವಳೆಂಬ ಕಾರಣದಿಂದ.. ಅದು ಪಡೆವ ಆನಂದ, ಅದು ಪಡೆವ ಸಿಸು ಸಹಜ ಅನುಭವವನ್ನು ತಾಯಿಯೂ ಅನುಭವಿಸುತ್ತಿರುವಳು ಯಂಬ ಕಾರಣದಿಂದ... ಸಾಂಬಯ್ಯಗ ಯೋಗ ಕಾಲು ಬಂದಂಗ... ಜಾವ ಜಾವಕ ಹಾಲು, ಜೇನಿವೇ ಮೊದಲಾದ ದ್ರವ ಪದಾಲ್ದಂಗಳ ಕೊಟ್ಟೂ ಕೊಟ್ಟೋ ತಾಯಂದಿರ ರೆಟ್ಟೆಯಿಳಿದು ಹೋಗ್ಯಾವ, ಆನೆ ವಡಲಿಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂಗ.. ಗುಟ್ಟಾಗಿ ಅವಯ್ಯನೂ ಪಟ್ಟಣ ಸೋಮಿಗಳನ ತರುಬಿ ತಾನು ಸಿಸುವೆಂದು ಅಭಿನಯಿಸಿ ಅಭಿನಯಿಸಿ ಸಾಕಾಗಿ ಹೋಗಿರುವುದೆಂದೂ, ತಾನೂ ದೊಡ್ಡನಾಗುವೆಂದೂ, ಯಲ್ಲರಂಗೆ ತಾನೂ ವುಣ್ಣುವೆನೆಂದೂ ಬ್ರತಿಮಾಲು ತಲಿದ್ದನು. ಅದಕಿದ್ದು ಅವರು ಅಷ್ಟು ಲಗೂನ ನೀನು ದೊಡ್ಡವನಾದಿ ಅಂದರ ಲೋಕಕ್ಕೆ ಅನುಮಾನ ಬರುತದ: ಅದಕ ನೀನು ಸ್ವಾಭಾವಿಕವಾಗಿ ದೊಡ್ಡವನಾಗಬೇಕಯಾಯಂದು ಪರಿಪರಿಯಿಂದ ಹೇಳುತ್ತ ಬಂದಿದ್ದರು. ಆದರಾವಯ್ಯ ವಂದೇ ಹಟೀಗೆ ಬಿದ್ದದ್ದು ಅರಮನೆಯ ಆಡಳಿತ ವರದವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅದಕ ಅವರೇ ಸಾಂಬಯ್ಯಗ ಅನ್ನ ಪ್ರಾಶನವನ ಲಗೂನ ಮಾಡಿಸಬೇಕೆಂಬ ನಿಲ್ಲಯಕ್ಕೆ ಬಂದು ಬಿಟ್ಟರು. ಶಿಷ್ಟ ಮಂದಿಯ ಬಾಯಿಯಿಂದ 'ಅನ್ನ' ಯಂದುದುರುವ, ಪರಿಶಿಷ್ಟ ಮಂದಿ ಬಾಯಿಯಿಂದ 'ಬಾನ' ಯಂದುದುರವ ಅನ್ನಯಂಬುದು ಸಾಮಾನ್ಯ ಸಬುಧವಾss ಅದು ಷಡಾಕ್ಷರೀ ಮಂತ್ರಗಳ ಪಯ್ಲಿ ಅದೂ ವಂದು.. ಪ್ರಾಣ, ಶ್ರದ್ದೆ, ಆಕಾಶ, ವಾಯು, ಜ್ಯೋತಿ, ನೀರು, ಭೂಮಿ, ಯಿಂದ್ರಿಯ, ಮನಸು, ಯೋಗ್ಯ, ತಪಸ್ಸು, ಯಂತ್ರ ಕರ್ಮ, ಲೋಕ, ನಾಮಗಳೆಂಬ ಷೋಡಷ ಕಲೆಗಳ ಪಯ್ಲಿ 'ಅನ್ನ' ಯಂಬುದೂ ವಂದು, ಸಚರಾಚರಗಳ್ಯಾವತ್ತೂ ಅನ್ನದಿಂದಲೇ ಹುಟ್ಟುತ್ತಾವ, ಅನ್ನದಿಂದಲೇ ಜೀವಿಸುತ್ತಾವ, ಸತ್ತು ಅನ್ನವನ್ನೇ ಪ್ರವೇಶಿಸುತ್ತಾವ. ಪ್ರಾಣಿಗಳಲ್ಲಿ ಅನ್ನವೇ ಜೇಷ«, ಅನ್ನವೇ ಸರಸ್ವ ಅನ್ನ ಅವುಷಧ, ಅನ್ನವನ್ನು ಪ್ರಾಣಿಗಳೆಲ್ಲ ತಿನ್ನುತ್ತಾವ, ಅನ್ನವು ಪ್ರಾಣಿಗಳನ್ನು ತಿನ್ನುತ್ತದೆ, ಅನ್ನವನ್ನು ಭುಂಜಿಸುವವನು ಅನ್ನದಾನಿಯಾಗುವನು, ಪುಥವಿ ಅಂದರ ಅನ್ಯ ಅನ್ನ ಅಂದರೆ ಪುಥವಿ, ಆ ಪ್ರೇಮ ಕೊಡುವುದರಿಂದ ಅನ್ನವು 'ವಿ' ಯಂದೆನ್ನಿಸಿಕೊಳ್ಳುವುದು,