ಪುಟ:ಅರಮನೆ.pdf/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೧ರಿ ಅರಮನೆ ಬಲ ಕೊಡುವುದರಿಂದ 'ರಂ' ಯಂದೆನ್ನಿಸಿಕೊಳ್ಳುವುದು, 'ವೀರಂ' ಯಂದರ ಬ್ರಹ್ಮನು, ಆದ್ದರಿಂದ ಭೋಜನವು ಬ್ರಹೋಪಾಸನೆ ಸಮವಾದುದು, 'ಅನ್ನ' ಉಣ್ಣುವುದರಿಂದ ಮಾನವನು ಯಲ್ಲರಿಗೂ ಪ್ರಿಯನಾಗುವನು, ಆಶ್ರಯದಾತನೂ ತಾನಾಗುವನು.. ಅನ್ನಮಯ ಪುರುಷನಿಗೆ ಚೈತನ್ಯದಾಯಕವಾದುದು ಅನ್ನವೇ. ಆದ್ದರಿಂದ ಅದರ ವುಣ್ಣುವಿಕೆಯನ್ನು ಶಾಸ್ರೋಕ್ತವಾಗಿ ಆರಂಭಿಸಬೇಕಿರುವುದು ಸಾಂಬಯ್ಯಾ.. ಸ್ವಲ್ಪ ದಿನ ತಡಕೊಳ್ಳಪ್ಪಾ.. ಯಂದು ಮುಂತಾಗಿ ಜಡೆತಾತ ಹೇಳಿದುದನು ಕೇಳಿಸಿಕೊಂಡ ಸಾಂಬಯ್ಯನು 'ಅರೆ ಅವುದಲ್ಲಾ' ಯಂದು ವುದ್ದಾರ ತೆಗೆದನು.. ಫಲಾನ ಯಿ೦ಥ ದಿವಸ ಸಾಂಬಯ್ಯಗೆ ಅನ್ನ ಪ್ರಾಶನ ಮಾಡಿಸಲಾಗುವುದೆಂಬ ಪ್ರಕಟಣೆ ಅರಮನೆಯಿಂದ ಹೊರ ಹೊಂಟೊಡನೆ.... ಕುದುರೆಡವು ರಾಜ್ಯದ ಕರುಣೆಯ ಕಂದ ಸಾಂಬಯ್ಯಗೆ ಅನ್ನಪ್ರಾಸನ ಯಂಬ ಯಿಧಿಷರುವಕ ಆಚರಣೆ ಮಾಡಿಸಲಾಗುತ್ತದೆ ಯಂಬ ವರಮಾನವು ಯಾವ ಮಾದಿಯಿಂದಲೋ ಸುತ್ತನ್ನಾಕಡೀಕೆ ಹಬ್ಬಿತು. ಸಾಸ್ತ್ರಿಗಳು, ಪಂಡಿತೋತ್ತಮರು ಅನ್ನಪ್ರಾಸನ ಮಾಡಿಸೋ ಯಿಸಯದಲ್ಲಿ ತಮಗೆ ತಾವೇ ಸಾಟಿಯಂದು, ಪುರಾಣೋಪನಿಷತ್ತುಗಳನ್ನು ತಮ್ಮ ತಮ್ಮ ನಾಲಗೆ ಯಂಬ ವ್ಯಾಸಪೀಠದ ಮಾಲಿಟ್ಟುಕೊಂಡು ಸದರಿ ಪಟ್ಟಣಕ್ಕೆ ಬಿಜಯಂಗಯ್ದರು. ಜೋಳದನ್ನ, ನವಣಕ್ಕಿ ಅನ್ನ, ನೆಲ್ಲಕ್ಕಿ ಅನ್ನಕುಚಲಕ್ಕಿ ಅನ್ನ, ಬಿದುರಕ್ಕೆ ಅನ್ನ ಬೆಬಿಡದಕ್ಕೆ ಅನ್ನ ಹಿಂಬಿಡದಕ್ಕಿ ಅನ್ನ ಛಲದಕ್ಕಿ ಅನ್ನ ಬಲದಕ್ಕಿ ಅನ್ನ ಬಿಲದಕ್ಕಿ ಅನ್ನ ಕುಲದಕ್ಕಿ ಅನ್ನ ಪಂಚವರುಣದಕ್ಕಿ ಅನ್ಯ ಕಂಚುವರುಣದಕ್ಕೆ ಅನ್ಯ ಮಿಂಚು ಮಿಣುವಕ್ಕಿ ಅನ್ನ, ಹೊನ್ನಕ್ಕಿ ಅನ್ನ, ಚಿನ್ನಕ್ಕಿ ಅನ್ನ, ಕರುಣಕ್ಕೆ ಅನ್ನ ಯಿಂಥಪ್ಪ ಮೊದಲಾದ ಪಂಚಯಿಂಸತಿ ನಮೂನೆಯ ಅನ್ನವನ್ನು ತಪತಪಾಲೆಯೊಳಗೆ ಕಟ್ಟಿಕೊಂಡು, ಗಟ್ಟಿಬ್ಯಾಳಿ, ಸಪ್ಪನ್ನ ಬ್ಯಾಳೆ, ಖಾರದ ಬ್ಯಾಳಿ, ಸೀಬ್ಯಾಳಿ, ಪನುಕನ ಪಲ್ಯದ ಸಾರು, ಹುಳುಪಾಕನ ಪಲ್ಯದ ಸಾರು, ಗಡುಸೊಪ್ಪು, ಬದನೇಕಾಯಿಪಲೈವು, ಕರಿಂಡಿ, ಕೆಂಪಿಂಡಿ, ಹಸುರಿಂಡಿ, ಮಜ್ಜಿಗೆ ಮೆಂಚಿನಕಾಯಿ, ಹತ್ತಾರು ನಮೂನೆ ಬಾಳಕ, ಝಣಕ ಕೆನೆಮೊಸರು, ಸೀಮೊಸರು, ಹುಳಿಮೊಸರು ಹಪ್ಪಳ ಸಂಡಿಗೆಯೇ ಮೊದಲಾದ ಕಲೆಸಿಕೊಳ್ಳುವ, ನೆಂಜಿಕೊಳ್ಳುವ ಚವೀಸು ನಮೂನೆಯ ಖಾದ್ಯಗಳನ್ನು ಕೊಳಗ ಕೊಳಗಗಳಲಿ ತುಂಬಿಕೊಂಡು, ಹೆಂಡರು ಮಕ್ಕಳು, ಬೀಗರು ಬಿಜ್ಜರು, ನೆಂಟರು ಗಿಂಟರು,