ಪುಟ:ಅರಮನೆ.pdf/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೧೭ ಮುಂದಕೋಗೋದು.. ಹಿಂದ ಹಿಂದ ಹಿಂದಕ ಜರುಗೋದು ಮಾಡುತಲಿದ್ದರು. ಯೀ ನಡುವೆ ರಾಜಾ ಮಾರಾನಾಯಕನ ಆಗ್ನೆ ಮೇರೆಗೆ ಆತನ ಪ್ರಧಾನ ಮಂತ್ರಿಯಾದ ವುಷ್ಟುಲ ನರಸಿಮಾತ್ಯನು ಗ್ರಾಮದಾದ್ಯಂತ ಹಾಕಿಸಿದ್ದ ಟಾಮು ಟಾಮು ಯೇನಿತ್ತೆಂದರೆ “ಭೀಮನೆಂಬ ಸ್ವಾನವು ಅರಮನೆಯೊಳಗಿಂದ ಅವರ ವಸ್ತುವೊಂದನ್ನು ಕಳುವು ಮಾಡಿ ಗಂಟಲಲ್ಲಿ ದಾಚಿಕೊಂಡು ತಪ್ಪಿಸಿಕೊಂಡಿರುತ್ತದೆ. ಚರಾಸ್ತಿಯಾದ ಅದೂ, ಸ್ಥಿರಾಸ್ತಿಯಾದ ಅದರ ಗಂಟಲೊಳಗಿರುವುದೂ ಅರಮನೆಯ ಸೊತ್ತಾಗಿರುತ್ತದೆ.. ಹೊಡೆದು ಬಡಿದು ಅದಕ್ಕಾಗಲೀ, ಅದರ ಗಂಟಲೊಳಗಿನ ಅಮೂಲ್ಯ ವಸ್ತುವಿಗಾಗಲಿ ಹಾನಿ ಮಾಡಿದವರನ್ನು.. ಆ ವಸ್ತುವನ್ನು ಲಪಟಾಯಿಸಿದವರನ್ನು... ಆಸ್ಥಾನವು ದೇಸದ್ರೋಹಿಗಳೆಂದು ಪರಿಗಣಿಸಿ ಮರಣದಂಡನೆ ಶಿಕ್ಷೆಗೆ ಗುರಿ ಮಾಡಲಾಗುತ್ತದೆ. ಕೇಳಲಿಲ್ಲಾಂದೀರಿ.. ಹೇಳಲಿಲ್ಲಾಂದೀರಿ.. ಹುಷಾರ್....” - ಯೀ ಟಾಮು ಟಾಮೇ ಯಿಡೀ ಗ್ರಾಮದ ಲಕ್ಷ್ಯವನ್ನು ಅದರತ್ತ ಸೆಳೆದಿತ್ತು. ರಾಜಾಗ್ನಿಯನ್ನು ಧಿಕ್ಕರಿಸುವ ಯದೆಗಾರಿಕೆ ತೋರಿಸಿತ್ತು.. ಅದು ರಾಜನ ಕಯ್ದೆ ಹಸ್ತಾಂತರವಾಗಬೇಕೋ.. ಬ್ಯಾಡಮೋ ಯಂಬ ಯಿಷಯದಲ್ಲಿ ವಡಕು ಮೂಡಿ ಗ್ರಾಮ ಯಿಬ್ಬಾಗವಾಗಿತ್ತು.. ಯಿಂಥ ವಡಕಿನ ಸಾಯದಿಂದಾಗಿಯೋ, ಚಂಡನ ತರಡು ಬೀಜಗಳ ಮಯಿಮೆಯಿಂದಾಗಿಯೋ ಭೀಮ ಯಾರ ಕಯ್ಯ ಸಿಕ್ಕದೆ ಕಣ್ಣಾಮುಚ್ಚಾಲೆಯಾಟ ನಡೆಸಿತ್ತು. ಅತ್ತ ಅರಮನೆಯಲ್ಲಿ ರಾಜ ಮಾರನಾಯಕನು ಹಲಕುಂದಿ ಮೋಜುಳಾಚಾದ್ಯರ ಸಲಹೆ ಮೇರೆಗೆ ವಂದು ಮೊಳದುದ್ದದ ಬಂಗಾರದ ಸಿಸ್ಮವನ್ನು ಅಂತಃಪುರದ ಕೋಣೆಯೊಳಗೆ ಯೇದಿಕೆ ಮ್ಯಾಲ ನಿಟಾರನೆ ಪ್ರತಿಷ« ಪಿಸಿ ತದೇಕಚಿತ್ತದಿಂದ ಅದನ್ನೇ ನೋಡುತ ಸಿಸ್ಕೋಪಾಸನಾರೊತಾರೂಢನಾಗಿದ್ದನು.. ನಡುನಡುವೆ ಬೊವ್ ಬೊವ್ ಯಂಬ ಧ್ವನಿ ಕೇಳಿಸಿದಂತಾಗಿ 'ಭೀಮ ಸಿಕ್ಕಿತೇನಲೇ' ಯಂದು ಕೂಗುತ್ತಿದ್ದನು.. ಆತನ ರಾಣಿ ವಾಸ ದ ವರು ಲಟ್ಟಿಗೆ ಮುರುದು ತಮಾ ಗ೦ಡ ನನ್ನು ಹೀನಾಯಮಾನಾಯವಾಗಿ ಸಪಿಸುತ್ತಿದ್ದರು. ಗ್ರಾಮದೊಳಗಿದ್ದ ಹಿರೀಕ ಮಂದಿ ಯೇ ತಮ್ಮ ರಾಜನಿಗೆ ಪ್ರಜೆಗಳ ವಳಿತಿಗಿಂತ ತನ್ನ ಸಿಸ್ನವೇ ರಾಜತಾಂತ್ರಿಕ ಸಮಸ್ಯೆಯಾಗಿ ಬಿಟ್ಟಿರುವುದಲ್ಲಾ... ದತ್ತಮಂಡಲ ಪ್ರಾಂತದ ಸಾಯಿರಾರು ಮಂದಿ ಜಮೀನ್ದಾರರನ್ನು ನುಂಗಿ ಅರಗಿಸಿಕೊಂಡಿರುವ ಕಲೆಟ್ರುಮನೋ ಸಾಹೇಬ ಹೇಳದೆ ಕೇಳದೆ ಬಂದು ಯವನ ಸೊಕ್ಕಡಿಸಬಾರದಾ ಯಂದಲ್ಲಲ್ಲಿ ಪೇಚಾಡಿ