ಪುಟ:ಅರಮನೆ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕಹಳೆ ಮೊದತೊಡಗಿದರು. ನೋಡು ನೋಡುತ್ತಿದ್ದಂತೆ ಗವುಳೇರ ಮೋಣಿ ಕಡೇಲಿಂದ ಪೆಟಿಗೆಪ್ಪ ತಾಳಪ್ಪ, ದಿಮುಡೆಪ್ಪ ಗಂಟೆಪ್ಪ, ತಪಡೆಪ್ಪ ಮೊದಲಾದ ಶ್ರೀದೇವಿ ಭಜನಾಮಂಡಳಿ ಯವರು ನಮ್ಮವ್ವ ತಾಯಿ ಜಗದಂಬಾ, ಜಗದಂಬಾ ಯಂದು ಯೇರಿಕೆ ದನಿಯಲ್ಲಿ ಭಜನಾ ಮಾಡುತ್ತ ಬಂದರು. ಅರೆಗಳಿಗೆ ವಳಗ ಯೀಯಲ್ಲ ಗಲಾಟೆ ಗದ್ದಲ ಗವುಜಗದಿಂದಾಗಿ ವಬ್ಬರ ಮಾತು ಯಿನ್ನೊಬ್ಬರಿಗೆ ಕೇಳಿಸದಂಗಾತು. ಜಗಲೂರ ವ್ವ “ನನ್ನ ಗ೦ಡನ ಸರೀರವನ್ನು ಆಕ್ಕರಮಿಸಿಕೊಂಡಾಕೆ ಯಾವಾಗೇ ಆಗಿಲ್ಲ. ಅವು ರಂಡ್ಯಾಗ್ಲಿ”ಯಂದು ಮುಂತಾಗಿ ಯೇರಿಕೆ ದನಿಯಲ್ಲಿ ಆವಾಜು ಹಾಕದಿದ್ದಲ್ಲಿ ಗುಂಪು ಸಂತೆಯಾಗದೆ ಯಿರುತ್ತಿರಲಿಲ್ಲ, ಸಂತ ಜಾತುರೆಯಾಗದೆ ಯಿರುತ್ತಿರಲಿಲ್ಲ. ಅನುವು ಆಪತ್ತಿನಲ್ಲಿ ತಾವಾಗೋರು ಯಂಬ ಕಾರಣಕ್ಕೆ ಅಲ್ಲಿ ವುಳುಕೊಂಡಿದ್ದ ಮಂದಿ ಪಯ್ಕೆ ಹಿರೀಕನಾದ ಗೊಡ್ಡಯ್ಯನು “ಯಸನ ಯಂಬ ಬೆಂಕಿಗೆ ಮಯ್ಯ ಕಾಸ ಬ್ಯಾಡಪ್ಪಾ.. ಯಾವಾಗ ನಿನ್ನ ಗಂಡ ನಿಸೂರು ಯಿದ್ದನವ್ವಾ ಮಗಳೆ.. ಅಯ್ದಗೇಡಿಯಂಗ ಆಡುತ್ತಿದ್ದನಲ್ಲಾ.. ಅದರಂಗ ಅವರ ಅವ್ವ ಯಂಬ ಅಯ್ದು ಬಡಕೊಂಡಿರಬೌದು.. ಅದು ಯವತ್ತಲ್ಲ ನಾಳೆ ಬುಟ್ಟೋಯ್ತದೆ.. ನಿನ ಗಂಡ ನಿನಗೆ ದಕ್ಕೇ ದಕ್ಕುತಾನ.. ಗುಡ್ಡದಂಥಾ ಮನುಶೋಳಾದ ನೀನು ಅನ್ವೇಗ ಬ್ಯಾಡ ತಾಯಿ ಅಳೋಗಬ್ಯಾಡಾss” ಯಂದು ಮುಂತಾಗಿ ಬುದ್ದಿ ಹೇಳುತ್ತಾ ಹೇಳುತಾ ಮನ್ಯಾಗೆ ಬದುಕಯ್ಕೆ. ವದಕನಯೆ ಯಂದನಕಂತ ಕುಂಡಿ ಅಡಿಯಿದ್ದ ವಲ್ಲಿಯನ್ನು ಕೊಡವಿ ಹೆಗಲ ಮ್ಯಾಲ ಹಾಕ್ಕೊಂಡು ಅಲ್ಲಿಂದ ಹೊತಾ ಹೋದನು... ಯಷ್ಟೋ ಹೊತ್ತಿನವರೆಗೆ ವುರಿಸುತ್ತಾ ಅಸ್ತವಾಗುತಾಯಿದ್ದ ಮಂದಿ ಕ್ರಮೇಣ ಕರುಗುತಾ ಬಂತು. ಯನ್ನು ವುಳುಕೊಂಡಿದ್ದವೆಂದರೆ ವುಪಾಸನಾ ರೊತಾರೂಢವಾಗಿದ್ದ ಮೂರಾಕು ನಾಯಿಗಳು, ಅಯಿದಾರು ಮಂದಿ ಅವ್ವನ ಸತ್ಯುಳ್ಳ ಸರಣಾರು, ತನ್ನವ್ವ ಮಾಡುತಲಿದ್ದ ದುಕ್ಕದ ರೇಶಿಮೆ ನೂಲಿನ ಗುಂಟ ನಡೆದು ಬಂದು ಸೂರ ಆಟು ದೂರದಲಿ ನಿಂತು ಸಕಲೋಂದು ಯಿದ್ಯಾಮಾನವನ್ನು ಗಮನಿಸುತಯಿತ್ತು. ಅದು ತನ್ನವ್ವನ ಕಣ್ಣಳಗೂ ನೀರಿದೆಯಲ್ಲಾ ಯಂದು ಅಚ್ಚಯ್ಯ ಭರಿತ ದುಕ್ಕವನ್ನನುಭೋಸುತಲಿತ್ತು ಮಂದಿ ಮುಕ್ಕಾಲು ವೀಸಿ ಕರುಗುವುದನೇ ಯದುರು ನೋಡುತ ನಿಂತಿದ್ದ ಅದು ಬಲು ಚೂಚುಮವಾಗಿ ವಂದೊಂದೆ ಹೆಜ್ಜೆಯನಿಕ್ಕುತ ಹಿಂದೇಸಿಂದ ಅಂಜುತ, ಅಳುಕುತ ಬಂದು ತನ್ನ ಮಾತ್ರುಸೊರೂಪಿಣಿಯ ವದನದ ಮಾನವತೆಯನ್ನು