ಪುಟ:ಅರಮನೆ.pdf/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨೨ ಅರಮನೆ ನಿವಾರಿಸಲೋಸುಗ ನಾ ಮುಂದು, ತಾ ಮುಂದು ಅಂತ ಮುನುಗ್ಗಿ ಬಲಿಗೊಳ್ಳುತ್ತಿದ್ದರು.. ಅಥವಾ ತಮ್ಮ ಪ್ರೀತಿಪಾತ್ರರ ಪಯ್ಲಿ ಯಾರಾದರು ಸಾಯ್ಲಿಕ್ಕನಾಗಮ್ಮೆ ಧಾಡಿ” ಯಂದು ಗದರಿಸಿದೊಡನೆ ಹನುಮಪ್ಪನ ಬತೇರಿಯಿಂದ ಕೆಳಗೆ ಬಿದ್ದೋ.. ಜಯ್ಯ ಮುನಿಗಳಂಗ ಸಲ್ಲೇಖನ ರೈತ ಕಯ್ಯೋಂಡೋ ಪ್ರಾಣ ಬಿಡುತ್ತಿದ್ದರು ಅಥವಾ ಬದುಕೋದು ಬಲು ಬ್ಯಾಸರಾಗಯ್ತಿ ಯಿದರಿಂದ ನನರುಂಡ ಕಡಿಯಂದು ಅವರಿವರಲ್ಲಿ ಅಂಗಲಾಚುತ್ತಿದ್ದರು.. ಹೇಳದೆ ಕೇಳದೆ ಅಟ್ಟಂಬಟ್ಟಾರಣೋವಿನ ಗರುಭಸ್ಥಾನ ತಲುಪಿ ಮಟ್ಟಸ ಜಾಗದಲ್ಲಿ ಕೂಕಂಡು ಪುಣ್ಯ ಬರತಯೆ ನಮ್ಮನ್ನ ತಿಂಬೀ ಯಂದು ಕ್ರೂರ ಮುಗಗಳೆದುರು ಬೇಡಿಕಂತಿದ್ದರು ಸಿವನೇ.... ಅದೊತ್ತಟ್ಟಿಗಿರಲಿ.... ಅಗೋ ಅಲ್ಲಿ ಹೊಂಗೆ, ಬೇವು, ವುಂಚಿ ಮರಗಳಾದವಲ್ಲ... ಆ ತೋಪಿನೊಳಗ ಬರುತಲಾನ, ಯಡಕ ಗೊಂಜಾಡರಲಡುವಯ್ಯನೂ, ಬಲಕ ಕಾಡುಗೊಲ್ಲರೀರಯ್ಯನೂ.. ಯಿರುವಂಗದ.. ಪ್ಲಾ...ಹ್ಲಾ... ಅವುದು.. ಆ ಮುವ್ವರು ಬಂದೇ ಬಿಟ್ಟರು.. ರಣಮಹಲ ಸನೀಕ ಬಂದೇ ಬಿಟ್ಟರು.. ಸಿವನೇ, ಹೊಳ್ಳಾಗಿರಿ ಅನಲಿಲ್ಲ.. ದಾರಿ ಬಿಡರಿ ಅನಲಿಲ್ಲ.. ಅಲಲಲಾ ಅಂಬುವಷ್ಟರೊಳಗ.. ಪರ ಯಿರೋಧ ನಿಲುವು ತಳೆವುದರೊಳಗ.. ಯಿವರಿಗೆ ಹೇಳಿ ಕಳುವಿದವರಾರು ಯಂಬ ಅನುಮಾನ ತಾಳುವುದರೊಳಗ.... - ಕಾಡುಗೊಲ್ಲರೀರಯ್ಯನು ಸೀದ ರುದ್ಧ ಶಯ್ಕೆಗೆ ಬಂದು “ಯಕ್ಕಾss ನಾನವ್ವಾ.. ಕಾಡುಗೊಲ್ಲ ವೀರಯ್ಯ.. ಬಂದೀನಿ ನೋಡು..” ಯಂದನಕಂತ ಕಷ್ಟೊಳಗ ವಂಥಟಗು ನೀರನು ತಂದುಕೊಂಡನು. ಅದರ ಹಿಂದೆಯೇ ಬಂದ ಸಾಂಬಯ್ಯನು "ಯವ್ವಾ ನೋಡು” ಯಂದೇಟಿಗೆ ಮುದುಕಿ ತ್ರಾಸು ಪಟ್ಟು ಕಣ್ಣು ಬಿಟ್ಟು ಪಿಳಿ ಪಿಳಿ ನೋಡಿ “ಏಕದಾನಿ.. ಅಯ್ಯೋ ನನ ಪಿಕದಾನಿ ಮಾತಾಡು ತಯ್ತಲ್ಲಾ.. ಯೇನೋ ಅಂದುಕೊಂಡಿದ್ದೆ... ಪಿಕದಾನಿಗೂ ರುದಯ ಅಯ್ತಲ್ಲಾ” ಯಂದು ಯಲ್ಲಾರನು ಗಾಬರಿಗೊಳಿಸಿತು...... ಸಾಂಬಯ್ಯಗ ನಡಕೋತಿದ್ದ ಸೊಸೆ ತಿರುಮಲಾಂಬೆಗೆ ತಮ್ಮತ್ತೆಗೆ ದಯವದ ತಿಕಡಿ ಬಡಕೊಂಡು ದೆವ್ವ ಆದರೇನು ಯಂಬ ಚಿಂತೆ ಕಾಡಲು ಹೇಳುತ್ತಾಳೆ.. “ಯ..ಯಂಥಾ ಅಝಗೇಡಿ ಅದೀಯಲ್ಲ ನೀನು.. ಖುದ್ದ ಸಾಯುಜ್ಯ ಕರುಣಿಸಲಕಂತ ಸಾಂಬವಿಂಯ ಸಿಸುಮಗಗ ಪಿಕದಾನಿ