ಪುಟ:ಅರಮನೆ.pdf/೫೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫೨೩ ಅಂಬುತೀಯಲ್ಲ....” “ಏಕದಾನೀನ ಕನವರಿಸುತ್ತಿರ ಬೌದು.. ಅದಕ್ಯಾಕ ಬೇಸರ ಮಾಡಿಕಂತಿ ಮಗಳೇ... ಮಯ್ಯ ಮ್ಯಾಲ ಕಬುರಿಲ್ಲದಾಕಿ ಆಟು ಮಾತಾಡಿದ್ದೇ ಹೆಚ್ಚು' ಯಂದು ಆಕೆಯ ತಂದಿಯೂ.. “ಅನ್ನೋದನ ಅಂದಾಳ ನಮ್ಮವ್ವ.. ಅಂದ ಮಾತನು ಯೋಗ ವಾಪಾಸು ಪಡೀಲಕ ಬರುತದೇನು? ಸಾಂಬವಿಯೇ ನಮ್ಮವ್ವನ ನಾಲಗೆ ಮ್ಯಾಲ ಕುಂತು ಹೀಂಗ ಮಾತಾಡಿಸಿರಬೌದು.. ತಿಳಕss” ಎಂದು ಗಂಡ ಕಾಟಯ್ಯನೂ... ಅದಕss ನೀನು ಕೂದಲು ಕಳಗೊಂಡು ಬೋಳಪ್ಪನಾಗೀss” ಯಂದು ಮತ್ತೆ ತಿರುಮಲಾಂಬೆಯೂ.. ಪತಿ ಭಕುತಿ ಲುಕ್ಸಾಣಗೊಂಡ ಪರಿಣಾಮವಾಗಿ... - ಕಪಾಳಕ ಬಡದಂಗಾದರೂ ಸಯ್ತಿಸಿಕೊಂಡ ಸಾಂಬಯ್ಯನು “ಮಗಳೇ.....ನ್ಯಾಕ ತಡ ಮಾಡುವಿ.. ಹೆಂಗ ಬಂದಿದ್ಯೋ ಹಂಗ ಬರಿಗಯ್ಲಿ ನನ ಹಿಂದೆ ಹೊಂಟು ಬಂದು ಬಿಡು.. ಯಾಕ ಮಿಜಿ ಮಿಜಿ ಮಾಡುತಿ? ಯಂದಂದು ತನ್ನ ಕಯ್ಯಾರ ವಂದು ಚಿವುಟು ಗಂಗೋದಕ ವನ ಆಕೆಯ ಬಾಯಿಗೆ ಬಿಡಲು ಯತ್ನಿಸಿದನು.... ಆದರೆ ಆ ವಯೋರುದ್ದೆಯು ತನ್ನ ಬಾಯನು ದಿಮ್ಮಗ ಹಿಡಿಯಿತೇ ವಿನಾ ಅಪ್ಪಿ ತಪ್ಪಿ ತೆರೆಯಲಿಲ್ಲ. ತನ್ನೊಂದು ಕಯ್ಯನ ಬಲವಂತದಿಂದೆತ್ತಿ ಬಾಯಿಗೆ ಅಡ್ಡಯಿಟುಕೊಂಡು ತನ್ನ ಕಣ್ಣುಗಳನ್ನು ಯೂಟಗಲ ತೆರೆದು ಮೋಬಯ್ಯನು ದುರುಗುಟ್ಟಿ ನೋಡುತ್ತಲೇ ತನ್ನ ಜೀವವನ ವದಲಿತು ಯಂಬಲ್ಲಿಗೆ ಸಿವ ಸಂಕರ ಮಾದೇವಾss... ನಡೆಯಬೇಕಿದ್ದುದೂ.. ನಡೆಯಬಾರದಿದ್ದುದೂ ನಡೆದು ಹೋಯಿತು.. ಅದೆಲ್ಲ ದಯವ ಸಂಕಲ್ಪ. ಅದೆಲ್ಲಾ ಬರೋಬ್ಬರಿ.. ಆದರೆ ರಾಜಮಾತೆಯ ಭವುತಿಕ ಕಾಯವನು ಸಂಭಾಳಿಸುವುದು.... ಹೆಂಗ? ಹಿಂಗs ನಾಕು ಮಂದಿ ಹೆಗಲ ಮ್ಯಾಲ ಹೊರಿಸಿ ಸಲೀಸಲಾಗಿ ಸುಡುಗಾಡಿಗೆ ಸಾಗಿಸಿ ಗುದ್ದಿನಲ್ಲಿಟ್ಟು ಬರಲಕಂದರ ಆಕೆ ಸಾಮಾನ್ಯ ಮನುಶ್ಯಳೇನು? ಆಕೆ ತಾನು ಬದುಕಿದ್ದಾಗಲೇ ತನ್ನ ಭವುತಿಕ ಕಾಯದ ಯಿಲೇವಾರಿ ಕುರಿತು.. ಸಮಾಧಿಯ ವಾಸ್ತು ಕುರಿತು ಚಿಂತಿ ಮಾಡುತಲಿದ್ದುದು ಯಾರಿಗೆ ತಾನೆ ಗೊತ್ತಿಲ್ಲ?.. ಅದಕ್ಕೆಂದೇ ನುರಿತ ವಾಸ್ತುಸಿಲ್ಲಿಗಳನ್ನೂ.. ಅಪರ ಕರಯಿಸಾರದರನ್ನೂ.. ಅರಮನೆಗೆ ಕರೆಯಿಸಿಕೊಂಡು ಚಿಂತನ ಮಂಥನ