ಪುಟ:ಅರಮನೆ.pdf/೫೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೩೨೫ ಕಡುಕಷ್ಟ.... ಸಮುಸಾರಯಂಬ ಬೇತಾಳವನು ಹೆಗಲಿಗಿಳಿಬಿಟುಕೊಂಡಿದ್ದ ತಿಕ್ಕಲು ಸೊಭಾವದ ಕಾಟಯ್ಯ ನಾಯಕನು ಮುಖದ ಮ್ಯಾಲ ಸೆಲೈವನ ಯಿಳಿ ಬಿಟ್ಟು ತಿರುಪಾಲಯ್ಯ ಪೋಷಿ«ಯ ಮನೆ ಮುಂದಿನ ಪಳುಗಟ್ಟೆ ಮ್ಯಾಲ ಸೂತಕ ಯಂಬ ಕಾರಣಕ್ಕೆ ಕೂತು ಅಯೂರು ಕೇಳಿ ಲೇವಾದೇವಿಗಾರ ನೆದೆಯಲ್ಲಿ ಧರಸಂಕಟವನ್ನುಂಟು ಮಾಡಿದ. ಅಯೂರನ ಯಲ್ಲಿಂದ ತರಲಿ ದೊರೆಯೇ.. ಅನ್ನದಾನ ಛತ್ರನಡೆಸೀ ನಡೆಸಿ ಕಯ್ಕೆ ಕಟ್ಟಯ್ಕೆ.. ಯಂದು ಹೇಳಿ ನೂರು ಪಗೋಡಗಳನು ಕೊಟ್ಟು ಕಳುವಿದನು. ಊಟು ಯದಕಾದೀತು? ಅಳಲಕಾಂತ ಬರೋರ ಯಲಡಕೆ ಖರಿಗಾಗೋದಿಲ್ಲ.... ಕಳ್ಳಗಂಟು ಮಾಡಿಟ್ಟುಕೊಂಡಿರಬಹುದೆಂದೂಹಿಸಿ ನಾಯಕನು ನೀನು ಕೊಡೇ.. ನೀನು ಕೊಡ” ಯಂದು ಸೆರಗೊಡ್ಡಿ ಬೇಡಿಕೊಂಡನು. “ದೇನು ನಿಂದಾ.. ನಿಮ್ಮಪ್ಪಂದಾ ಕೊಡೋಕೆ.. ನಮ್ಮ ತವರು ಮನೆಯೋರು ಹಾಕಿದ್ದು ಕನಪ್ಪಾ ನಾವು ಕೊಡಲ್ಲ. ನೀನು ಪಂಚಲೋಹದ ಪಾತ್ರೇನ ನಮಗ ಕೊಡದಂಗ ಹೆಂಗ ಬಚ್ಚಿಕ್ಕಿದ್ದಿ... ಗ್ರಾಪಕವುಂಟಾ? ಕೊಟ್ರೆಅದೇನು ಸವದುಹೋತಂತ ವಾಡ್ತಿದ್ದಿತುಲ್ಲಾ. ರಾಜರಂತೆ ರಾಜರು.. ನಿನ್ನನ್ನು ಮದುವೆ ಮಾಡಿಕೊಂಡಲಗಾಂನ್ನು ವನವಾಸ ಅನುಭೂಸೋದೇ ಆಯ್ತು.. ವಂದಿನಾದ್ರುಸುಖಪಡಲಿಲ್ಲ ನಾವು.. ನಮ್ಮ ಕರುಮ.. ನೀನೇನು ಮಾಡ್ತಿ? ಅಲಲಲಾ.. ಅತ್ತೆಯೇss. ನಾವು ಕುಂತರೂ ಸೇರಿರಲಿಲ್ಲ, ನಿಂತರೂ ಸೇರಿರಲಿಲ್ಲ, ನಮ್ಮನ್ನ ಸೆರೆಯಾಳುಗಳಿಗಿಂತ ಕಡೆಯಾಗಿ ಕಂಡಳು ಪುಣ್ಯಾತ್ಮಿ... ನಿನ ತಾಯಿ.. ನಿನ ಮಾತು. ಅದೆಂಗ ಹೆಣಾನ ಮೊಣ್ ಮಾಡ್ತೀಯೋ ನಮಗೊತ್ತಿಲ್ಲ ಕನಪ್ಪಾ. ಮೊಣ್ ಮಾಡಿದ ಮ್ಯಾಲ ನಾವೊಂದರಗಳಿಗೆ ಯಿಲ್ಲಿರೋರಲ್ಲ.. ನಾವು ನಮನಮ್ಮ ಮಕ್ಕಳು ಮರಿ ಕಟಕೊಂಡು ನಮನಮ್ಮ ತವರು ಮನೀ ಕಡೇಕ ಹೊಂಟೋಗೋರೇ ಸಯ್ಯ.. ಅಲಲಲಾ.. ಯಂದು ಮುಂತಾಗಿ ತಲಾ ವಬ್ಬೊಬ್ಬರು ತಮ್ಮದೇಲಿ ಬಚ್ಚಿಟ್ಟುಕೊಂಡಿದ್ದ ವಾಗ್ ಬಾಣಗಳನ್ನು ವಂದರ ಹಿಂದೊಂದರಂತೆ ತಮ್ಮ ಪತಿ ಪರಮಾತುಮನತ್ತ ಬಿಟ್ಟು ಘಾಸಿಗೊಳಿಸಿದರು. ಘಾಸಿಗೊಂಡಾತನು ಯಿಲ ಯಿಲಾಂತ ವದ್ದಾಡಿ ಹೋದನು. ಹೊಟೇಲಿರೋ ಸಿಟ್ಟು ರೆಟ್ಟೆಲಿಲ್ಲವಲ್ಲಾ ಯಂದು ಅವುಡುಗಚ್ಚಿ ದವಡೆ ಸಯ್ದ ಮಾಡಿಕೊಂಡನು. ಯಂಥ ಹೆಂಡರವರಪ್ಪಾ ಯಿವರು, ಅನ್ನೋದು ಆಡೋದಿದ್ದರ ಹಾಸಿಗೆ