ಪುಟ:ಅರಮನೆ.pdf/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨೬ ಅರಮನೆ ಮ್ಯಾಲಾಡಲಿ.. ಅದು ಬಿಟ್ಟು ನಾಕು ಮಂದಿ ಸಮಚ್ಚಮ ಆಡಿ ಕಚ್ಚಿ ಹಿಡಿದ ಗಂಡನ ಮರುವಾದಿ ಕಳೆಯೋದೇನು?... ತನಗೇನು ಯಿವೀಸು ಮಂದೀನ ಮಾಡಿಕೊಳ್ಳಬೇಕೆಂಬ ವುದ್ದೇಶ ಸರುವಥಾ ಯಿರಲಿಲ್ಲ. ವಬ್ಬಾಕಿಯೇ ಸಾಕು ಯಂದು ತಾನು ಬಡಕೊಂಡಿದ್ದುಂಟು. ಅದಕಿದ್ದು ತನ್ನ ಮಲತಾಯಿಯು “ನಿಂಗೊತ್ತಿಲ್ಲಪ್ಪಾ.. ರಾಜಮನತನದೋರೆಂದರ ಯೇಸು ಹೆಂಡರಿರುತ್ತಾರೋ ಆಟು ವಳೇದು. ಅನುವು ಆಪತ್ತಿಗಾಗೋ ಬೀಗರು ಬಿಜ್ಜರು ಯಿರಬೇಕಪ್ಪಾ. ವಬ್ಬೊಬ್ಬ ಹೆಂಡತಿ ನೂರು ಕಾಲಾಳಿಗೆ ಸಮ. ನೀನೊಂದೆ ಸುಮಕಿರು” ಯಂದು ಮೂಲೆಮುರುಕಟ್ಟಿನಲ್ಲಿ ಹೆಂಡರನ್ನು ಹುಡುಕಿ ತನ್ನ ಕೊಟ್ಟಿಗೇ ಕಟ್ಟಿಹಾಕಿದ್ದಳು. ಆಕೆಯ ವುದ್ದೇಶ ಮಲ ಮಗ ಕಾಟಯ್ಯನ ಸೊಕ್ಕು ಮುರಿಯೋದೆ ಆಗಿತ್ತು. ಆತ ಮೌನ ಮುರೀತಿದ್ದ... Jನು ಕ ಥಿ? ಕಾಮಿನಾಳು ಜಮೀಂದಾರುಯಂಟಯ್ಯನ ಸಪ್ತಮ ಸುಪುತ್ರರೇಣುಕಿಯನ್ನು ಆರನೇ ಸಲ ತಗುಲಿ ಹಾಕಬೇಕೆಂದು ಆಕೆ ಯೋಚಿಸಿದ್ದುಂಟು. ಅದಕ್ಕೆ ತಾನು “ಮೋಗತ್ತೋ ಮೋಗು. ಯೀ ಅಯಿದು ಮಂದಿ ಹೆಂಡ್ರುಕ ವದ್ದಾಡೋದೇ ಮಸ್ತು ಆಗಯ್ತಿ ಉನ್ಮಾಕೇನೆಲ್ಲಿ ಸಂಭಾಳಿಸ್ಥಿ?” ಯಂದು ತಾನು ನಿರಾಕರಿಸಿದ್ದುಂಟು. ಅಬ್ಬಾ! ತನ ಅಯಿದು ಮಂದಿ ಹೆಂಡಿರೇ! ಗಂಟಿ ಸವುಡಿಯರೆ ಯಂದು ರವುಸದಿಂದ ಅವುಡುಗಚ್ಚಿದ. ದ್ರವುಪದಿಯ ವಸ್ತರಾಪಹರಣವನ್ನು ದುಶ್ಯಾಸನನು ಮಾಡುತ್ತಿದ್ದಾಗ ಪಾಂಡವರು ತಲೆತಗ್ಗಿಸಿ ಕೂಕಂಡಿದ್ದರಲ್ಲ... ಹಂಗೆ ಕೂಕಂಡಿದ್ದ ತನ್ನ ಅಯ್ದು ಮಂದಿ ಹೆಣುಕೊಟ್ಟ ಮಾಮಂದಿರ ಕಡೀಕ ಕೆಕ್ಕರುಗಣ್ಣಿಂದ ನೋಡಿದ. ಅವರ ಪಯ್ಕೆ ವಬ್ಬರಾದರು “ಗಂಡ ದೇವಿದ್ದಂಗರಾ. ಯದುರುತ್ತರ ಕೊಡಬಾರು? ಯಂಬ ವಂದೇ ವಂದು ಮಾತು ಅಂದಿದ್ದಲ್ಲಿ ತನಗೇಟೋ ಸಮಾಧಾನ ಆಯ್ತಿತ್ತು. ಆರಂಥೋರಿದ್ದಾರಿವರು? ಹೊಟ್ಟೆಗೇನು ತಿಂಬುತ್ತಿದ್ದಾರು? ವಂಚೂರಾರ ಅರುವು ಯಿರಬಾರದೇನು? ಯಿದ್ದಲ್ಲಿ ಅಂದಾಡಿ ತೋರಬಾರದಿತ್ತೇನು? ಯಿವರು ತನಗೆ ಆಗೊಮ್ಮೆ ಯೀಗೊಮ್ಮೆ ಸಾಂಯ ಮಾತೇಯಿಲ್ಲ ಅಂದರ ದೇವರು ಮೆಚ್ಚಾಕಿಲ್ಲ. ಯವರು ಪಾವಲಿ ಭಾಗ ಕೊಟ್ಟಂತೆ ಮಾಡುತ್ತಿದ್ದುದು, ಅದಕ್ಕೆ ಬದಲಾಗಿ ಮೂರು ಪಾವಲಿ ಭಾಗವನ್ನು ತಮ್ಮ ಪುತ್ರಿಯರ ಸಾಯದಿಂದ ಕದ್ದು ಮುಚ್ಚಿ ಹೊತ್ತೊಯ್ಯುತ್ತಿದ್ದುದೂವುಂಟು. ಹೆತ್ತ ತಂದೆ ಬ್ಯಾರೆ ಅಲ್ಲ... ಹೆಣುಕೊಟ್ಟ ಮಾವಂದಿರು ಬ್ಯಾರೆ ಅಲ್ಲ.. ಅಂತ ತಾನು ಗೊತ್ತಿದ್ದೂ ಗೊತ್ತಿಲ್ಲದವನಂಗೆ ಸುಮ್ಮಕ ಯಿರುತ್ತಿದ್ದುದೂ ವುಂಟು.