ಪುಟ:ಅರಮನೆ.pdf/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨೮ ಅರಮನೆ ಹಿಡದು ಕಾಟ ಕೊಡಲಕೇಬೇಕು.. ಕಟಗಂಡ ಗಂಡನ್ನ ವುರುಸಿಗಂಡು ತಿನ್ನೋ ಯಿವುರು ಸುಮ್ಮಕ ಬದುಕಬಾರು. ಯಲ್ಲಲ್ಲೋ ಯಿದ್ದವರನು ತಂದು ನನ ಕುತ್ತಿಗೀಗ ಗಂಟು ಹಾಕಿದೆ.. ಅರಮನೇನ ತುಂಬಿಸಿಕಂಡೀ, ನಿನರುಣಾನ ಸತ್ತಮ್ಯಾಲಾದರು ತೀರಿಸಬೇಕೆಂಬ ಗ್ಯಾನಾ ಅಯ್ತಾ ಯೀ ಲವುಡೇರಿಗೆ?..” ಯಂದು ಮುಂತಾಗಿ ಆಡ್ಯಾಡಿಕೋತ ಅಬ್ಬರಿಸಿ ಅಳತೊಡಗಿದನು. ಹಿಂಗ ತಮಗ ಅಳಲಕ ಬರೋದಿಲ್ಲಾಂತ ಸದರಿ ಪಟ್ಟಣದ ಪ್ರಸಿದ್ದ ಅಳುಗಾರಿಯರೆಂದೆನ್ನಿಸಿ ಕೊಂಡಿದ್ದ ಬಾಲವ್ವ, ಬೀಳವ್ವ, ಬಲತವ್ವ, ಹಿತಲವ್ವ ತಿಕ್ಕಡೆವರೇ ಮೊದಲಾದ ಮುದೇರು ತಮ್ಮ ತಮ್ಮ ಮೂಗುಗಳ ಮಾಲ ಬೊಟ್ಟಿಟ್ಟುಕೊಂಡರು ಆಚ್ಚರದಿಂದ.. “ಅರಮನೆ ಗಂಡುಸರೇ ಹಿಂಗ ಛಂದಾಗಿ ಆಳುತಾರಂದ ಮ್ಯಾಲ. ನಮಗ್ಯಾತರ ಕೆಲಸಯ್ತಿ.. ಬತ್ರೆವ್ವಾ ಬರಿ” ಯಂದು ಮೂಳೆವ್ವ ಹೇಳುತ್ತಲೇ ವುಳಿಕೇರು ಆಕೆಯ ಹಿಂದೆ ನಿಂತರು. ಅವರು ಅಳೋದೆಂದರ ವಂದು ಗರೂಡ ಪುರಾಣವಾಚನಕ್ಕೆ ಸಮಯಂದೂ, ಅವರ ಅಳು ಕೇಳುತಾ ಕೇಳತಾ ಆತುಮವು ವಂದು ಜೊಂಪು ನಿದ್ದೆ ತೆಗೆದು ಪ್ರಸನ್ನಗೊಳ್ಳುವುದೆಂದೂ ಸದರಿ ರಾಜ್ಯದೊಳಗ ಎಂದು ನಂಬಿಕೆ ನೆಲಗೊಂಡಿತ್ತಷ್ಟೆ. ಅದಕಿದ್ದು ಯಲ್ಲವರು ಹೊಂಟೋತಾರೆಂದು ಯದರಿದ ಗೀರಯ್ಯನು ಸಡನ್ನ ಯದ್ದೋಗಿ... “ನೀವಿಂಗ ಹೊಂಟೋದರೆಂಗರವ್ವಾ..? ರಾಜಮಾತೆಯ ಮಾರಿ ನೋಡಿರಿ.. ಕೊಡೋದು ಕೊಡುತಾರ, ತಗೋಳೋದು ತಗವಂತಿರಿ” ಯಂದು ಧಯರ ಹೇಳಿ ತರುಬಿ ಕುಂಡರಿಸಿ ಅವರ ಮುಂದಕ ಯಲಡಕೆ ಚೀಲ ದಬ್ಬಿದನು. ಅವರೂ ಸೇರಿಕಂಡಂತೆ ಮಲ್ಲಾರು ಕಾಟಯ್ಯನಂಥ ರಾಜಕುಮಾರನೂ ವಂದಲ್ಲಾ ವಂದಿವಸ ಅತ್ತೇ ತೀರುತ್ತಾನೆಂದು ತಿಳಿದುಕೊಂಡರು. ಅವರ ಆಚ್ಚರಕ್ಕೆ ಯಿನ್ನೊಂದು ಕಾರಣಯಂದರೆ ತನ್ನ ಸೊಂತ ತಾಯಿ ಮೋಬುಳಾಂಬೆ ಸಾಯಲಕ್ಕೆ ದೊಡ್ಡಮ್ಮ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದಳೆಂಬ ಯಿಷಯ ತಿಳಿದುಕೊಂಡ ಛಣದಿಂದ ರಾಜಕುಮಾರ ಕಾಟ ನಾಯಕನು ಭಮ್ರಮಾಂಬೆಯನ್ನೂ.. ಯಾವಾತನ ಸರೀರದೊಳಗ ಹರಿತಿರಬೌದಾದ ರಗುತವು ನಾನಾ ನಮೂನೀ ಅನುಮಾನಗಳಿಗೆ ಆಸುಪದ ಮಾಡಿಕೊಡುತ್ತದೋ ಆ ಸರೀರವಂತನು ಹಕ್ಕುದಾರ ಹೆಂಗಾದಾನು ಯಂದು ಭಮ್ರಮಾಂಬೆಯು ಮಲಮಗ ಕಾಟನಾಯಕನನ್ನೂ ವಳಗೊಳಗೆ ಯಾವತ್ತೂ ಸೇರಿದುದಿಲ್ಲ. ಪರಸ್ಪರ ಪ್ರೀತಿ, ಪ್ರೇಮ, ಮಮಕಾರ ಯಿರುವಂತೆ