ಪುಟ:ಅರಮನೆ.pdf/೫೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೩೧ ಯಿತ್ತ ವಲ್ಲದ ಮನಸ್ಸಿನಿಂದ ಪಂಚ ಪತ್ನಿಯರು ಯಿದು ನಂದು, ಯಿದು ತಂದು ಯಂದು ವಂದೊಂದಾಗಿ ಆಭರಣಗಳನ್ನು ತಮ ವಲ್ಲಭನ ಮುಂದೆ ಕುಪ್ಪೆ ಹಾಕತೊಡಗಿದ್ದ ದ್ರುಸ್ಯವು ಕಂಗಳ ದಾಹ ತೀರಿಸುವಂತಿತ್ತು. ತಮ್ಮ ಮೂಗಿಗಂಟಿದ್ದ ಮುಕಬಟ್ಟು ಕೊಳ್ಳಾಗಿನ ತಾಳಿ ಸರವೊಂದನ್ನು ಬಿಟ್ಟು ಸಮಸ್ತವನ್ನೆಲ್ಲ ಕೊಟ್ಟಾದ ಮ್ಯಾಲ “ಯಿವು ನಮ್ಮ ವಡವೆ ಅಷ್ಟೇ ಅಲ್ಲ... ನಮ್ಮ ಪ್ರಾಣ ಯಂದು ತಿಳಕಾ, ಯೇನಾರ ಹೆಚ್ಚು ಕಡಿಮೆ ಆದರ ನೀನೇ ಜವಾಬುದಾರ, ಹೆಣದ ಮೆರವಣಿಗೆ ಮುಗಿಯುತ್ತೆ ಬಿಚ್ಚಿ ಕೊಡಬೇಕು” ಯಂದು ಕರಾರು ಯಿದಿಸಿದರು. ಅದಕ್ಕಾತನಿದ್ದು “ಯಿಲ್ಲ ನಾನೇನು ಮಾಡ್ಲಿ... ಹೇಂಗೋ ನೀವೆಹಿಂದ ಮುಂದ ಯಿರುತೀರಲ್ಲ... ಜಬರದಸ್ತೀಲೆ ಬಿಚಿಗ್ಯಾವಂತಿರಿ” ಎಂದು ಹೇಳಿದನು. ಮಾವಂದಿರು ಸಹಿತ ನಾಕಾರು ಮಂದಿ ಹಿರೀಕರೆಲ್ಲ ಸೇರಿ ಪಂಚನಾಮ ಕಾರ್ ನಡೆಸಿ ವಂದು ಕಡೀಕೆ ಟುಕ್ಕು ಮಾಡಿಟ್ಟುಕೊಂಡರು... ಆ ಆ ಆಭರಣಗಳ ಕುಪ್ಪೆಯನ್ನು ಕಳೇಬರದ ಮುಂದೆ ಯಿಡಲಾಯಿತು. ನೋಡುಗರಿಗೆ ರಾಜಮಾತೆ ಎಂದರಚಣ ಕಣ್ಣು ತೆರೆದು ನೋಡಿ ಮುಚ್ಚಿದಂತೆ, ಅದರ ಅಂಗಾಂಗಗಳು ಕಂಪಿಸಿದಂತೆ, ಧರಿಸಲು ಹಾತೊರೆಯುತ್ತಿರುವಂತೆ ಭಾಸವಾಯಿತು. “ಯೇಟೊಂದು ಆಸೆ ಯಿಟ್ಟುಕೊಂಡಯ್ತಲ್ಲಾ ಮುದ್ಯಾಕಿ” ಯಂದು ಸಮೂಹ ವಮ್ಮನಸ್ಸಿನಿಂದ ಗೊಣಗಿಕೊಳ್ಳುತ್ತಿರುವಾಗ್ಗೆ... ಕಳೇಬರದ ಕಿವಿಗೆ ಯಾವ ವಡವೆ, ಕೊಳ್ಳಿಗೆ ಯಾವ ವಡವೆ, ಮುಂಗಯ್ಯಗೆ ಯಾವ ವಡವೆ ಧರಿಸುವುದೆಂಬ ಅನುಮಾನ ಹುಟ್ಟಿ ನಿನಗೆ ಗೊತ್ತುಂಟಾ? ನಿನಗೆ ಗೊತ್ತುಂಟಾ ಯಂದು ಕೇಳುತ್ತಿರುವಾಗ್ಗೆ.. ನಂಗೊತ್ತಿಲ್ಲ... ತಂಗೊತ್ತಿಲ್ಲ... ಯಂದನೇಕರು ಹೇಳುತ್ತಿರುವಾಗ್ಗೆ. ಅಸಾಮಾನ್ಯ ಕಳೇಬರದ ಮಯ್ಯ ಮುಟ್ಟುವ ಧಯಯ್ಯ ನಮಗಿಲ್ಲ... ತಮಗಿಲ್ಲ ಯಂದನೇಕರು ಹೇಳುತ್ತಿರುವಾಗ್ಗೆ.. ದುರಿಗೆ ಕುಂತು ನಿಂತಿದ್ದ೦ಥಾ ಜನಸಮೂಹದೊಡಲಾಗಿಂದ ವಬ್ಬಾನೊಬ್ಬ ಮನುಷ್ಯನು ಯದ್ದು ನಿಂತು “ನೋಡ್ರಪ್ಪಾ. ನಮದು ಸ್ವಾಸ್ತಿ ವಳದೆರೆ ಯಂಬ ಗ್ರಾಮವು, ಮೋರಿಂಗೆರೆ ಪರಗಣ ಸೀಮೆಯೊಳಗಯ್ತಿ. ನಾವು ಮಾಸ ಬ್ಯಾಡರ ಕುಲದ ವುಚ್ಚ ಪೀಠದೋರು, ನಮ್ಮ ಮೊರಾಗ ನಾವೇ ಕಾರ್ ಕಟ್ಟೆ ನಡಸೋರು, ನಾವಿದ್ದ ಕಡೇಕ ಕಳವು ಸುಲಿಗೆ ನಡೆಯೋದಿಲ್ಲ.. ಆ ದ್ಯಾವರು ನಮಗೆ ಕೊಡೋದು ಕೊಟ್ಟು