ಪುಟ:ಅರಮನೆ.pdf/೫೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅಂತ. ಹೇಗಾದರೂ ನಂಬುಕಿ ಬಂತೋ?” ಯಂದು ಜುಲಮೀಲೆ ಹೇಳಿದನು. ಆತನ ವಾಗ್ಝರಿ ಆಲಿಸಿ ಬೆಕ್ಕಸ ಬೆರಗಾಗಿ ಯಲ್ಲಾರು ಪರಸ್ಪರ ಮುಖ ನೋಡಿಕೊಂಡರು, ಪಿಸಿ ಪಿಸಿ ಮಾತಾಡಿಕೊಂಡರು. ಅಳಿಯ ಮಾವಂದಿರ ವಕ್ಕೂಟದ ವಖಾರನಾಗಿದ್ದ ಬೋರಯ್ಯನು “ನಿನ ಮ್ಯಾಲ ನಮಗ ನಂಬುಕೆ ಬಂತಪ್ಪಾ.. ಹೆಂಗ ಮುಡುಸ್ತಿಯೋ ಮುಡುಸು. ವಟ್ಟಾರೆ ಹಾಕೋನು ನೀನೇ, ಬಿಚ್ಚಿ ಕೊಡೋನು ನೀನೆ ಕನಪ್ಪಾ.. ಕಳೇಬರ ನೊಂದು ವುಸುರು ಬಿಡಬಾರದು ನೋಡು, ಬಲ ಸೂಚುಮಿ ಅಯ್ಕೆ ನಮ್ಮ ರಾಜಮಾತೆಯ ಸರೀರವು” ಯಂದು ವಪ್ತಿಗೆ ನೀಡಲು... ಸೀಮಂತಪ್ಪನು ಚಾಜಕ ಅದನು ತಗಂಬರಿ. ಯಿದನು ತಗಂಬರಿಯಂದು ಕೇಳಿ ತರಿಸಿಟ್ಟುಕೊಂಡನು. ಮೂಕಯಿಸುಮಿತರಾಗಿದ್ದ ಮೋಬುಳಾಚಾದ್ಯರ ಸಹಿತ ಯಲ್ಲಾರಿಗೂ ಹುವುಗಳನ್ನು ಯಿತರಿಸಿ... “ನಾನೊಂದೊಂದು ಮಂತ್ರಹೇಳುತ ವಂದೊಂದು ಆಭರಣ ಯೇರಿಸಿದೊಡನೆ 'ಸಮರಯಾಮೀ' ಯಂದೆನ್ನುತ ಹುದ್ದೆಸೆಯುತ್ತಿರಬೇಕು” ಯಂದು ಹೇಳಿ ಹೆಣದೆದುರು ಮಟ್ಟಸ ರೀತಿಲಿ ಕೂಕಂಡನು. - ಓಂ ಹ್ರಾಂ ಕ್ರೀಂ ಚಟ ಚಟಾಯ ನಮಹ.. ಓಂ ಹ್ರಾಂ ಕ್ರೀಂ ಗಟ ಗಟಾಯೇನಮಹ.. ಓಂ ಹ್ರಾಂ ಹೀಂ ಪಟ ಪಟಾಯೇ ನಮಹ... ಯಂಬಿವೇ ಮೋದಲಾದ ನಿಗೂಢ ಮಂತ್ರಗಳನ್ನು ವುಚ್ಚಾರಣಾ ಮಾಡುತ ಆಭರಣಗಳನ್ನೆಲ್ಲ ಕಳೇಬರದ ಪ್ರತಿಯೊಂದು ಅಂಗೋಪಾಂಗಕ ಮುಡಿಸಿದನು. ಜನರೂ ತಮ ತಮ್ಮ ಕದ್ದ ಹುಬ್ಬುಗಳನ್ನು ಸಮಕ್ಷಯಾಮೀ ಯಂದಂದು ಆ ಯಿಶಿಷ್ಟ ಪದಕ್ಕೊಡೆಯರಾದರು.. ಸಾಲಂಕ್ರುತಗೊಂಡ ರಾಜಮಾತೆಯ ಕಳೇಬರವನ್ನು ಸಕಲರು ತಮ್ಮ ಕಣ್ಣುಗಳಲ್ಲಿ ತುಂಬಿಟ್ಟು ಕೊಳ್ಳುತ್ತಿರುವಾಗ್ಗೆ ಶ್ರೀಮಂತಪ್ಪನು “ನೋಡಿರೆಪ್ಪಾ ನಾವು ತೀರಕ್ಯಾತನ ಯಿದ್ಯೆಯಿಂದ ಮಾತಾಯಿಯ ಪಯಿತ್ರಶವವನ್ನು ಆಭರಣಗಳಿಂದ ಅಲಂಕಾರ ಮಾಡಿದ್ದೇವೆ. ತೀರಕ್ರಾತನ ಯಂದರೆ ಆಗಲಿದ ಆತುಮವನ್ನು ಮರಳಿ ಸರೀರದೊಳಗ ತರಬುವುದೇ ಆಗಿದೆ. ಯದರೊಳಗೀಗ ರಾಜಮಾತೆ ಮರಳಿ ಬಂದಿದ್ದಾಳೆ. ನೀವು ಯಿಚ್ಛೆಪಟ್ಟಲ್ಲಿ ಕಳೇಬರವನ್ನು ಯದ್ದು ನಿಲ್ಲುವಂತೆ ಮಾಡಬಲ್ಲೆ! ನೋಡುವಂತೆ.. ಮಾತಾಡುವಂತೆ.. ನಡೆದಾಡುವಂತೆ.. ಬಲಿಷ್ಟರನ್ನು ನೆಲಕ್ಕೊಗೆಯುವಂತೆ ಮಾಡಬಲ್ಲೆ. ಆದರೊಂದು ಮಾತು. ನೀವು ನಿಮ್ಮ