ಪುಟ:ಅರಮನೆ.pdf/೫೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೩೮ ಅರಮನೆ ವಂದೊಂದೆ ಹೆಜ್ಜೆಯನಿಕ್ಕುತ ಪವುಳಿ ಪ್ರವೇಶಿಸಿದನು. ಯಾರೋ ತನ್ನನ್ನು ಶಿಕ್ಷಿಸಲೆಂದು ಆಂಜನೇಯಸ್ವಾಮಿ ಯಿಗ್ರಹದಿಂದ ವಡಮೂಡಿ ಬಂದರೆಂದು ಭಾವಿಸಿದ ಭೀಮನು ತನ್ನ ಅಚಂದ್ರಾರ ಬಾಲವನ್ನು ನಿಗುರಿದ್ದ ಸಿಗ್ನಕ್ಕೆ ಸುತ್ತಿಕೊಂಡು ಕುಂಯ್ ಕುಂಯ್ ಯಂದು ಮಂಗಳ ಪಲಕೂತ ಮೋಡಿ ಹೋಯಿತು. ಗಾಬರಿಗೊ೦ಡು ಬ೦ದು ತಾಳೆಗರಿಗಳೆಲ್ಲ ಅಂಡಾವರನಗೊಂಡಿರುವುದನ್ನು, ಸೋ ತಾಳ ಗರಿಗಳು ಮಾಯವಾಗಿರುವುದನ್ನು, ಅಳಿದುಳಿದ ತಾಳೆಗರಿಗಳಲ್ಲಿ ಕಂದ ಸೀಸ ರುತ್ತಾದಿಗಳು ಕಾಣೆಂಯಾಗಿರುವುದನ್ನು ಕಂಡು ಅಯ್ಯೋ ಯಂದು ಅರಣ್ಯರೋಧನದ ಆರಂಭೋದ್ಧಾರವನ್ನು ಮಾಡಿದನು. ಆ ಕ್ಷಣ ಆತನ ಶಿತಿಕಂಠದೊಳಗ ದುಕ್ಕದ ಕಡಲು ಭೋರ್ಗರೆಯಿತು. ನತದ್ರುಷ್ಟೆ ಚಂದ್ರಮತಿಯು ತನ್ನ ಕಂದ ಲೋಯಿತಾಸ್ವನ ಕಳೇಬರವನ್ನು ಯತ್ತಿಕೊಂಡಂತೆ.. ವಂದೊಂದು ತಾಳೆಯೋಲೆ ಯಸಳನ್ನು ಕಯ್ಲಿ ಹಿಡಕಂಡು ಅಯ್ಯೋ.. ಯಾರೋ ಕುಕವಿಯು ಸ್ವಾನ ರೂಪದಲ್ಲಿ ಬಂದು ತನ್ನ ಕಾವ್ಯವನ್ನು ನುಂಗಿ ನೀರು ಕುಡಿದು ಬಿಟ್ಟನಲ್ಲಾ... ಸಾಂಬವಿಯನ್ನು ಕಾವ್ಯ ನಾಯಕಿಯನ್ನಾಗಿ ಮಾಡಿದ್ದಕ್ಕೇನಾದರೂ ರಾಜಮಾತೆ ಭಮ್ರಮಾಂಬೆಯ ಆತುಮವು ಸುನಕ ರೂಪ ಧರಿಸಿ ಬಂದು ತಿಂದು ಹಾಳುಮಾಡಿರಭೌದೇ ತನ್ನ ತಲೇಲಿದ್ದ ಸಮಸ್ತ ಯಿದ್ವತ್ತನ್ನೆ ಧಾರೆ ಯರೆದು ರಚನೆ ಮಾಡಿದ್ದೆನಲ್ಲಾ... ಕಾವ್ಯ ಕ್ರುಷಿಗೆ ತಕ್ಕುದಲ್ಲದ ಊ ಅಯೋಗ್ಯ ಪಟ್ಟಣದೊಳಗ ನಾನ್ಯಾಕಿರಬೇಕು, ಅಯ್ಯೋ ನನ್ನ ಕರುಮವೇ.. ಯಂದು ಮುಂತಾಗಿ ಆತನಲ್ಲಿ ತಿರುಕ್ಕೊಳವಿನಾಚೆಯು ಪುನರವತಾರ ಯತ್ತಿರುವಾಗ್ಗೆ... ಅತ್ತ ಸದರಿ ಕುದುರೆಡವು ಪಟ್ಟಣದ ಸರಗಿಗಂಟಿಕೊಂಡಂತಿದ್ದ ಕಡುದಮ್ಮನ ಹಳ್ಳದ ಕೊರಕಲಿನಲ್ಲಿ ಯಲ್ಲಾಪ್ರಕೊರಚರಟ್ಟಿಯ ಕಳ್ಳರ ಪಯ್ಕೆ ಮಾ ಮೇಧಾವಿಯೆನಿಸಿದ್ದ ಆಕಾಸ ರಾಮಣ್ಣನೆಂಬ ಜೋರಾಗ್ರೇಸರನು ತನ್ನ ಮೂಾಕು ಮಂದಿ ನಿಷ್ಣಾತ ಚೋರಯಿದ್ಯಾದ್ಯಾಪಕರೊಂದಿಗೆ ಕಳೆದೆರಡು ಮೂರು ದಿವಸಗಳಿಂದಲ್ಲಿ ಬೀಡು ಬಿಟ್ಟಿದ್ದನು. ಆತನಲ್ಲಿಗೆ ಬರಲಕ ಕಾರಣಗಳಿಗೆ ಬರಯಿಲ್ಲ. ಕಳೆದಾರು ಮಾಸಗಳಿಂದ ಸಣಪುಟ್ಟ ಕಳ್ಳತನ ಮಾಡುತ್ತಿದ್ದನಾದರೂ ತನ್ನ ವರಸ್ಸಿಗೆ ಸರಿ ಸಮಾನವಾದ ಹಿಡಿಗಂಟು ಕದಿಯಲಾಗಿರಲಿಲ್ಲ. ಅದೂ ಅಲ್ಲದೆ ಸೊನ್ನದ ಜಮೀಂದಾರ ತಿರುಕಪ್ಪಗವುಡನು ಆತನನ್ನು ಸಕಲ