ಪುಟ:ಅರಮನೆ.pdf/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೩೯ ಗವುರವದಿಂದ ತನ್ನ ವಾಡೆಗೆ ಬರಮಾಡಿಕೊಂಡು ಯೇಕಾಂತದಲ್ಲಿ ಸತ್ಕಾರ ಮಾಡಿ ಪ್ರಸನ್ನಗೊಳಿಸಿ “ನೋಡು ರಾಮಣ್ಣ... ನೀನು ನನ್ನೊಡಹುಟ್ಟಿದಾತನಿದ್ದಂಗೆ ಅವುದಲ್ಲೋ.. ನನ್ ಮಗಳು ಪಾರೊತಿ ನಿನ್ ಮಗಳು ಯಿದ್ದಂಗೆ ಅವುದಲ್ಲೋ..” ಯಂದು ಕೇಳಿದ್ದಕ್ಕೆ ರಾಮಣ್ಣನು ಭಾವ ಪರವಶಗೊಂಡು “ಅವುದು ಧಣಿ ಅವುದು' ಯಂದು ಹೇಳುತ ಕಂಠಬಿಕ್ಕೊಂಡನು. ಕಣ್ಣಲ್ಲಿ ಸೆರೆ ನೀರು ತಂದುಕೊಂಡನು. ಆಗಿದ್ದು ಗವುಡನು “ಹಂಗಾ ಕೇಳಪಾ ರಾಮಣ್ಣ ಬರೋ ಪುಷ್ಯಮಾಸದಲ್ಲಿ ನೆಲುಕುದುರೀ ಜಮೀಂದಾರು ಸಕ್ಕರಪ್ಪಗವುಡನ ಯೇಕಮಾತ್ರ ಪುತ್ರಅಂದಾನಿ ಗವುಡನ ಜೋಡಿ ಲಗ್ಗುನ ಮಾಡಲಕಂತ ಮಾಡೀನಿ. ಬೀಗರು ಆದು ಬೇಕು, ಯಿದು ಬೇಕೂಂತ ಮಸ್ತು ಕೇಳ್ಯಾರ... ಕಾಲಕಾಲಕ್ಕೆ ಮಳೀ ಬೆಳೀ ಕುಸುದು ನನ ಕಯೂ ಆಡದಂಗ ಆಗಯ್ತಿ ತಮಾ... ನಿಮ್ಮತ್ತಿಗೇನೂ ಬಲು ಜುಲುಮಿ ಮಾಡುತಾಳೆ, ಲಗ್ಗುನಾನ ಮುಂದಕ ಹಾಕಿದರ ತಾನು ಕೆರೇನೋ, ಬಾವೀನೋ ನೋಡ್ಕಂತೀನಂತಾಳ ಮಗಳು. ಮೊದಲೇ ನಮ್ಮದು ಧಾಂ ಧೂಂ ಅಂತ ಖರಡು ಮಾಡೋ ಮನನ, ಕಮ್ಮಿ ಬಿಗಿಹಿಡಿಯಾಕ ಬರಂಗಿಲ್ಲ. ಯೇನು ಮಾಡೋದಪ್ಪಾ? ಯಿದಕ ನೀನೇ ಎಂದು ದಾರಿ ತೋರಿಸಬೇಕು. ಪಾರೋತಿ ಮ್ಯಾಲ ನಿಂಗೆ ಕನುಕರ ಯಿರೋದೆ ಆದರ ನೀನು ವಂದಡೇವು ಬಂಗಾರನ ವಾರೋಪಕ್ಕೊಳಗ ತಂದುಕೊಡಬೇಕಪ್ಪಾ. ಯಿದಕ ಯೇನು ಮಾಡುತೀ? ಹೆಂಗ ಮಾಡುತೀ ನೋಡು? ನಿನ್ನೆಗಲ ಮ್ಯಾಲ ವಯ್ಲಿ ಹಾಕೀನಿ” ಯಂದು ತನ್ನ ಧೋನೀನ ಗದ್ದದ ಮಾಡಿಕೊಂಡು ಹೇಳಲು ರಾಮಣ್ಣನ ಕರುಳು ಚುರುಕ್ಕಂತು. “ಆಯ್ತು ಧಣಿ.... ನೀನೇನು ಯಸನ ಮಾಡಬ್ಯಾಡ' ಯಂದು ಧಯರ್ ತುಂಬಿ..... ಸೀದ ಯಲ್ಲಾಪ್ರಕೊರಚರಟ್ಟಿಗೆ ಬಂದು ತನ್ನ ಶಿಷ್ಯರೊಂದಿಗೆ ಸಮಾಲೋಚಿಸಿದನು. ಸಂಪ್ರದಾಯದ ಪ್ರಕಾರ ಕುಲದೇವತೆಯಾದ ಪೋಲಾರಮ್ಮನ ಮಯ್ಯ ತುಂಬ ತರಾವರಿ ಹುಟ್ಟು ಮುಡಿಸಿ, “ತಾಯಿ... ನೀನೇ ದಾರಿ ತೋರಿಸಬೇಕವ್ವಾ” ಯಂದು ಬೇಡಿಕೊಂಡನು. ವಂದು ಗಳಿಗಾತು, ಯರಡು ಗಳಿಗಾತು, ಮೂರನೇ ಗಳಿಗೆಯಲ್ಲಿ ಸೋಲಾರಮ್ಮ ವಾಯುವ್ಯ ದಿಕ್ಕಿಗೆ ಹುವುದುರಿಸಿ ದಾರಿ ತೋರಿದಳು, ಆ ಕೂಡಲೆ ಸಣುಮಾಡಿ ಕಾನ್ನೋನ್ಮುಖನಾದನು. ಆ ದಿಕ್ಕಿಗೆ ನಿಷ್ಣಾತ ಗೂಡಾಚಾರರನ್ನು ಕಳುವಿದನು. ಅವರು ತರಾವರಿ ಯೇಷಾಂಡಬರ ಧರಿಸಿ ವಂದೊಂದು ಗ್ರಾಮವನ್ನು