ಪುಟ:ಅರಮನೆ.pdf/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫೪೩ ರಂದು ತಾವಿದ್ದ ಕಡೇಕ ಸೀಮಂತನಿಗಾಗಿ ಹುಡುಕಾಡಿತು. ಯಷ್ಟೋ ಸೀಮಂತ ಯಂದು ಕೂಗಾಡಿತು. ನೀನು ನೋಡಿದ್ಯಾ? ಯಂದವರಿವರನ್ನು ಕೇಳಾಡಿತು. ಅವಯ್ಯ ಮಡಿವುಡಿ ಮಾಡಿಕ೦ಬರಲಕಂತ ಹೊಳೀಗ ಹೋಗಿರಬೇಕು, ಅವಯ್ಯ ಬ್ರಾಮ್ಮಿ ಮೂರದಲ್ಲಿ ಚೂರು ಪಾರು ತಪಸ್ಸು ಗಿಪಸ್ಸು ಮಾಡಲಕಂತ ಯಾದಾರ ಮರದಡೀಕ ಹೋಗಿರಬೇಕು ಯಂದನಕಂತ ತಮಗೆ ತಾವೇ ಸಮಾಧಾನಪಟುಕೊಂಡರು. ಆತ ಯೀಟೊಂದು ಬಂಗಾರ ಧರಿಸಿರೋ ಕಳೆಬರಾನ ಬುಟುಕೊಟ್ಟು ಹೋಗ್ಯಾನಲ್ಲ ಯಂದು ಬ್ಯಾಸರ ಮಾಡಿಕೊಂಡರು. ಆತನ ಕಮ್ಮಿ ಬಲು ಸುದ್ದಯ್ತಪ್ಪಾ ಸಾಂಬವಿಯ ಕ್ರುಪೆ ಆತನ ಮ್ಯಾಲ ಯಿದ್ದಂಗಯ್ತಿ. ಆತನನ್ನ ನೋಡಿದರ, ಆತನ ಬಾಯಿಯಿಂದ ಹೊಂಡೋ ಮಾತು ಕೇಳಿದರ ತಂಗಳಂಬಳಿ ವುಂಡೇಟು ಸಂತೋಸಾಗತಯ್ಕೆ ಯಂದು ಆತನನ್ನು ಬಲು ಕೊಂಡಾಡಿದರು. ವಂದು ಗಳಿಗಾತು.. ಯರಡು ಗಳಿಗಾತು.. ಮೂರು ಗಳಿಗೇನೂ ಹೋತು.. ಬೆಳಗಿನ ಜಾವದ ಪೂಜೆ ಮಾಡಲಕಂದರಾತನ ಸುಳಿವಿಲ್ಲ. ಯಾರು ಯೇನಂದರೋ? ಬ್ಯಾಸರ ಮಾಡಿಕೊಂಡು ಹೋದಂಗಯ್ತಿ.. ಆತ ಮರಳಿ ಬರೋ ಲಚ್ಚಣಾ ಯಿಲ್ಲ. ಮುಂದಿನ ಕಾರ್ ನಡೆಸಿಕೊಡೋದು ಯಾರು?.. ಕಾಟನಾಯಕನಿದ್ದಾನಲ್ಲ. ಮಾವಂದಿರು ಬಲವಂತ ಮಾಡಿದರು.. ಯಷ್ಟು ಲಗೂನ ಹೆಣ ಯತ್ತುತ್ತಾರೋ ಅಷ್ಟು ಲಗೂನ ತಮ್ಮ ತಮ್ಮ ಆಭರಣ ತಮಗೆ ದೊರಕುತಾವೆಂಬ ಭಾವನೆಯಿಂದ ಹೆಂಡರು ಮಾಡಿದ ಬಲವಂತದಿಂದಾಗಿಯೋ? ಶವ ಸಮುಸ್ಕಾರದ ಕಾರ ಕಟ್ಟಲೆ ಮುಗಿಸಿ ಸಾಣಾ ಮಾಡಿ ಅಳಾರಾಗಬೇಕೆಂಬ ಭಾವನೆಯಿಂದಾಗಿಯೋ? ಕಾಟಯ್ಯ ಬಚ್ಚಲ ಮನೆಗೆ ಹೋಗಿ ನಾಕು ಚಂಬು ನೀರನ್ನು ಮಯ್ಯ ಹಾಕ್ಕೊಂಡು ಮಡಿ ವುಡಿಯಿಂದ ಹೆಣದ ಸನೀಕ ಬಂದ. ಅದರ ಮುಖ ನೋಡಲಕ ಧಯರ ಸಾಲದೆ ವಂದು ಗಿಂಡಿ ನೀರು ಚುಮುಕಿಸಿದ, ಹೆಣ ಮಿಸುಕಾಡಿದಂಗಾತು.. ನೊಸಲಿಗೆ ಯಿಬತ್ತಿ ಗೀಟೆಳೆದ.. ಹೆಣ ಮಿಸುಕಾಡಿದಂಗಾತು.. ಕರ ಪ್ರರದ ಆರತಿ ಬೆಳಗಿದ, ಹೆಣ ಮಿಸುಕಾಡಿದಂಗಾತು.. ಅದೆಲ್ಲ ತನ್ನ ಭ್ರಮಾ ಅಂದುಕೊಂಡ. ಹೊರಗಡೆ ಯಿವಾನ ಸಿಂಗಾರ ಮಾಡುತ್ತಿರುವುದೇನು? ಬಾಜಾ ಬಜಂತ್ರಿ ಬಾರಿಸುತ್ತಿರುವುದೇನು? ಹೆಂಗಸರು ಸೋರ ತತ್ತರಿಸಿ ದುಕ್ಕೆ ಮಾಡುತ್ತಿರುವುದೇನು? ಹೆಣ್ಣೆನ್ನದೆ, ಗಂಡೆನ್ನದೆ ಮಂದಿ ನಾಮುಂದು