ಪುಟ:ಅರಮನೆ.pdf/೫೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೪೭ ರೆಡ್ಡಿಯು ಮಿಸೆಯನ್ನು ಕೆಳ ಮುಖ ಮಾಡಿಕೊಂಡು ತಾನು ತನ್ನ ಜೀವಿತಾವಧಿಯಲ್ಲಿ ಯಾರಿಗೂ ಮರಣದಂಡನೆ ಯಿಧಿಸಿಲ್ಲ ಯಂದು ಹೇಳಿದನು. “ಓಹೋ ಅಲಾಗೋ' ಯಂದು ಮನೋನು “ರಾಯಪಾಡು ಪೋತನ್ನ, ದೂರಾನಪಲ್ಲಿ ಯಂಟರಾಮುಡು, ಯದ್ದುಲ ದೊಡ್ಡಿ ಮದಕೇರಪ್ಪ” ಹಿಂಗ ವಂದರ ಹಿಂದೊಂದರ ಪ್ರಕಾರ ಹೆಸರು ಹೇಳುತ್ತ ಹೋಗಿದ್ದನು. ರಯ್ಯ ಕೂಲಿ ಸಂಘ ಕಟ್ಟಿ ಹೋರಾಟ ಮಾಡುತ್ತಿದ್ದ ರಾಯಪಾಡು ತನ್ನನನ್ನು, ಸವರೀಯರು ವುಪಯೋಗಿಸೋ ಬಾವಿಯಿಂದ ನೀರು ಸೇದಿದಿ ಯಂಬ ಕಾರಣಕ್ಕೆ ಯಂಟರಾಮುಡನನ್ನು, ತನ್ನ ಮಗನನ್ನು ವೆಟ್ಟಿಚಾರಿಗೆ ಬಿಡಲಿಲ್ಲ ಯಂಬ ಕಾರಣಕ್ಕೆ ಮದ್ದಿಕೇರಪ್ಪನನ್ನು ರೆಡ್ಡಿಯು ಗಲ್ಲಿಗೇರಿಸಿದ್ದು ಗುಟ್ಟಾಗಿರಲಿಲ್ಲ.. ಯಿಂಥ ಯಷ್ಟೋ ಸಂಗತಿಗಳನ್ನು ಪತ್ತೆದಾರರ ದ್ವಾರಾ ಸಂಗ್ರಹಿಸಿಟ್ಟುಕೊಂಡೇ ಮನೋ ಸಾಹೇಬನು ಅಲ್ಲಿಗೆ ದಯಮಾಡಿಸಿದ್ದನು. ಅಲ್ಲದೆ ಯಷ್ಟೋ ಮಂದಿ ವುಯ್ಯಾಲವಾಡ ಪ್ರಾಂತದ ಆಜುಬಾಜೂಕಿದ್ದ ಪ್ರಜೆಗಳು ರೋಸಿ ಕಲೆಟಿಗೆ ದೂರು ಸಲ್ಲಿಸಿದ್ದರು. ಯಲ್ಲೇಲ್ಲಿದ್ದರೋ ಅಲ್ಲಲ್ಲೇ ಕಲೆಬ್ರುರೆಡ್ಡಿಯ ಮ್ಯಾಲ ಯೇನು ಕ್ರಮ ಕಯ್ಯಗೊಳ್ಳುವನೆಂದು ಚಾತಕ ಪಕ್ಷಿಗಳಂಗೆ ಕಾಯುತ್ತಿದ್ದರು. ಜಲಜಲಾಂತ ಬೆವರತೊಡಗಿದ್ದ ರೆಡ್ಡಿಗೆ ಮನೋನು ಕಂಪನಿ ಸರಕಾರವು ನಿಮ್ಮ ಸುಪರೀಲಿರೋ ಯಿಪ್ಪತ್ತೆರಡು ಸಹಸ್ರಯಕರೆ ಜಮೀನನ್ನು ಭೂಹೀನರಿಗೆ ಹಂಚಬೇಕೆಂದು ನಿರರಿಸಿದಲ್ಲಿ ನೀವೇನು ವುತ್ತರ ಕೊಡುತ್ತೀರಿ ರೆಡ್ಡಿಗಾರು.. 0ರಂದು ಹೂವಿನೆಸಳನ್ನೆಸೆದಂತೆ ಕೇಳಿದ್ದಕ್ಕೆ ಅರಿಭಂರಕರನೂ.. ನಿರಂಕುಸಮತಿಂ ಅದುವರೆಗೆ ಆಗಿದ್ದ ಬುಡ್ಡವೆಂಗಳ ರೆಡ್ಡಿಯ ಸುಪುತ್ರಕೊರಡಾ (ಕೊರಡಿನಿಂದ ದಿನಕ್ಕೊಬ್ಬರನ್ನಾದರೂ ಥಳಿಸುತ್ತಿದ್ದರಿಂದಾಗಿ) ನರಸಿಮ್ರಾ ರೆಡ್ಡಿಯು ಆರು ಮೊಳಾವರೆ ಯದ್ದಾತ ಚೋಟುದ್ದ ಆದಾಗ್ಯ.... ಯಿತ್ತ ಗಂಟಲಲ್ಲಿ ಕಂದ, ಸೀಸ, ರಗಳ ಸಾಂಗತ್ಯ ರುತ್ತಾದಿಗಳಿಂದ ತನ್ನ ಗಂಟಲಲ್ಲಿದ್ದ ಚಂಡನ ತರಡು ಬೀಜಗಳಿಗೆ ಅಲಂಕಾರ ಮಾಡಿಕೊಂಡಿದ್ದ ಭೀಮನು ಸುಡುಗಾಡಲ್ಲಿ ಆಕಾಸ ರಾಮಣ್ಣನಿಂದ ಸಮುಸ್ಕಾರ ಮಾಡಿಸಿಕೊಂಡಿದ್ದ ರಾಜಮಾತೆ ಭಮ್ರಮಾಂಬೆಯ ಸಮಾಧಿಯನ್ನು ಗೆಬರಲಕ ಹತ್ತಿತ್ತು. ಹವಾಮಹಲಿನಿಂದ ಸದರೀ ಕಳೇಬರವನ್ನು ಹೊತ್ತು ತಂದಿದ್ದ ರಾಮಣ್ಣನು ಸೊತಹಾ ಕ್ರಿಯಾ ಮನುಷ್ಯನಾಗಿದ್ದುದರಿಂದ ಸಕಲ ಯಿದ್ಯಾಪಾರಂಗತನಾಗಿದ್ದ ಜಂಬನಿಂದ ಅಪಕರುಮ ಮಂತ್ರಹೇಳಿಸಿ ಸಕಲಗವುರವಗಳಿಂದ ಮಾ