ಪುಟ:ಅರಮನೆ.pdf/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಪೂಜೆ ಪುನಸ್ಕಾರ ನಡೆಯಬೇಕೆಂದೂ.. ಬರುವ ಭಕುತರು ಮೊದಲು ತನ್ನ ದರುಸನ ಪಡೆಯಬೇಕೆಂದೂ ಕರಾರು ಯಿಧಿಸಿದನಂತೆ, ಅದಕ ಸಾಂಬವಿಯು ವಪ್ಪಿಕೊಂಡಳಂತೆ.. ಆಮ್ಯಾಲ ಸಣಿ ದೇವನು ನೊರಜಿನ ಡುಬ್ಬದ ಮ್ಯಾಲ ಕೊಕಂಡಲ್ಲಿಂದ..... ಅತ್ತ ಕೂಡ್ಲಿಗಿಯೊಳಗ ತಿಲ್ಲಾನ ತಾಯಕ್ಕ ಯಾವುದೇ ವಂದು ಲೀಜನ್ನು ಆಲಾಪನ ಮಾಡದಷ್ಟು ಕಲ್ಲಾವುಲ್ಲಿಯಾಗಿದ್ದಳು. ವಂದು ಕಾಲಕ್ಕೆ ಪಟ್ಟಣಸ್ವಾಮಿಯಾಗಿದ್ದ ಮನತನದಿಂದ ಬಂದಾತನಾದ ನೀಲಕಂಠಪ್ಪ ಬರೋದು ಬಂದು ಲೋಡಿಗಾತು ಕೂಡಲಿಲ್ಲ.. ವಂದು ಜಾಮು ಕೇಸರಿ ಮಿಶ್ರಣ ಮಾಡಿದ ಹಾಲು ಕುಡಿಯಲಿಲ್ಲ. ತಾಂಬೂಲ ನಮಲಲಿಲ್ಲ. ವಂದು ಚಿಟಿಕೆ ನಸ್ಯ ಯೇರಿಸಲಿಲ್ಲ.. ಯೇರಿಸಿ ಸೀನಲಿಲ್ಲ.. ಸೀತು ಯಂದಿನಂತೆ ರೇಸಿಮೆ ದೋತರದಿಂದ ವರೆಸಿಕೊಳ್ಳಲಿಲ್ಲ. ತಾಯಕ್ಕನ ಕಡೆ ದುರುಗುಟ್ಟಿ ನೋಡಿ ಕಿಟಕಿ ದ್ವಾರಾ ಕೋಣೆಯೊಳಗಿಣಿಕಿ “ಯಿನ್ನೊಂದು ಸಾರಿ ನೀನು ಬಂಗಲೆ ಕಡೆ ಮುಖ ಮಾಡಿದೀ ಅಂದರ ಕಾಲು ಕತ್ತರಿಸಿಬಿಡುತೀನಿ” ಯಂದು ಯಚ್ಚರಿಕೆ ಮಾತುಗಳನ್ನಾಡಿ 'ಅಪ್ಪಾಜಿ ಅಪ್ಪಾಜಿ' ಯಂಬೆರಡು ಸಬುಧಗಳನ್ನು ಬೆನ್ನಫಣಿ ಮಾಲ ಅಂಟಿಸಿಕೊಂಡು ರುಸದಿಂದ ಹೊರಬಂದು ಸಾರೋಟೇರಿ ಹೊರಟು ಹೋದನು.

  • ಕಿಟಕಿಯಿಂದ ತನ್ನ ಕೋಮಲ ಕಯ್ಯಗಳನ್ನು ಹೊರಚಾಚಿ “ಯವ್ವಾ..ಯವ್ವಾ.. ಬಾಗಿಲು ತೆರೆಯೇ.. ನಾನು ಹೋಗದಿದ್ದರ ಅವರೇನೆಂದುಕೊಂಡಾರು.. ನನ ಮ್ಯಾಲ ಜೀವಯಿಟುಕೊಂಡಾರವ್ವಾ.. ಬಾಗಿಲು ತೆರೀತೀಯೋ... ಯಿಲ್ಲಾ ತಲೆ ಬಡಕೊಂಡು ಸಾಯ್ಲೆ” ಯಂದು ಚಿನ್ನಸಾವಿ ಹುದ್ದೊಂದು.. ಬೆಳದಿಂಗಳೊಂದು, ಖುದ್ದ ದುಕ್ಕಿಸುತ್ತಿರುವುದೇನೋ ಯಂಬಂತೆ ಅರಣ್ಯರೋಧನ ಮಾಡುತಲಿದ್ದಳು.

ತೊಡೆವಾಲಿದ್ದ ಬೀಣೆಯನ್ನು ಕೆಳಗೆ ತಳ್ಳುತ್ತ ತಾಯಕ್ಕ.. “ಹೆತ್ತೂ ಹೊತ್ತೂ ಹದಿನೇಳು ವರುಷ ಜ್ಞಾಪಾನ ಜತುನ ಮಾಡಿದೋರಿಗಿಂತ ನಿನ್ನೆ ಮೊನ್ನೆ ಬಂದ ಆ ಪರಂಗಿತವನೇ ನಿನಗ ಹೆಚ್ಚಾದನಲಾ.. ಸೀಕ್ರುಷ್ಣದೇವರಾಯನಂಥ ಗಂಡನ್ನ ಹುಡುಕಿ ಮದುವೆ ಮಾಡಬೇಕೆಂದೇ ನಿನಗ ಚಿನ್ನಸಾನಿ ಅಂತ ಹೆಸರನ್ನಿಟ್ಟೆನಲ್ಲೇ” ಯಂದು ಅನ್ನಲು ತನ್ನ ಮ್ಯಾಲಿದ್ದ ಹತ್ತಾರು