ಪುಟ:ಅರಮನೆ.pdf/೫೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೫೭ ಪ್ರತಿಷ« ಕಾಪಾಡಬೇಕು. ಆಕೆಯನ್ನು ಗೆಲ್ಲದ ತಾನು ಕುಂತಳ ವೇಂಟೆಯ ವಗಿಗಳನ್ನು ಗೆಲುವೆನೇನು? ತಾನೆಂದರೆ ಕುಂಪಣಿ ಸರಕಾರ.. ಕುಂಪಣಿ ಸರಕಾರ ಯಂದರೆ ತಾನು.. ಆ ತಾಯಕ್ಕ ತನ್ನನ್ನು ದಿಕ್ಕರಿಸುತ್ತಿರುವಳೆಂದರೆ ಕುಂಪಣಿ ಸರಕಾರವನ್ನೇ ಧಿಕ್ಕರಿಸುತ್ತಿರುವಳೆಂದೇ ಅಲ್ಲ, ಆಕೆಯನ್ನು ಮಣಗಿಸದಿದ್ದಲ್ಲಿ ತಾನು ಕುಂತಳ ಸೀಮೆಯನ್ನು ಮಣಗಿಸಬಲ್ಲೆನೇನು? ಹಿಂಗ ಯೇಕ ಪ್ರಕಾರವಾಗಿ ಯೋಚಿಸುತಲಿದ್ದ ಹೆನಿಸಾಹೇಬನು ಎಂದು ಸಲ ಕೆಂಪಾನು ಕೆಂಪಗೆ, ಯಿನ್ನೊಂದು ಸಲ ಬೆಳ್ಳಾನು ಬೆಳ್ಳಗೆ ಆಗುತಲಿದ್ದನು.... ಸಯ್ಯದ ವಂದು ತುಕುಡಿಯನ್ನು ಕಳುವಿ ಆ ಮನೆಯನ್ನು ದೊಮಸ ಮಾಡಿ ಚಿನ್ನಾಸಾನಿಯನ್ನು ಬಿಡಿಸಿಕೊಂಡು ಬರಬೇಕೆಂದೂ ಯೋಚಿಸದೆ ಯಿರಲಿಲ್ಲ ತಾನು. ಅದಕು ಮೊದಲು ಸಲಹೆ ಪಡೆಯ ಬೇಕೆಂದು ನಿರರಿಸಿ ಸಿರಕಾಳಿ ಯಂಕೋಬಸಾಸ್ತ್ರಿಯವರನ್ನು ಬಂಗಲೆಗೆ ಬರ ಮಾಡಿಕೊಂಡನು. ತಮ್ಮಿಂದ ನಮಸ್ಕಾರ ಮಾಡಿಸಿಕೊಂಡೋರಿಗೆ ಶ್ರೇಯಸ್ಸಲ್ಲಯಂಬ ಕಾರಣಕ್ಕೆ ಬಂದವರೆ ಹೆನ್ರಿಸಾಹೇಬನಿಗೆ ಆಸೀನುವಾದ ಮಾಡಿ ವುಚಿತಾಸನದಲ್ಲಿ ಪಾಂಡಿತ್ಯವೂಲ್ಲ ಮುಖಮುದ್ರೆಯಲ್ಲಿ ಕುಳಿತುಕೊಡರು. ಕ್ಷೇಮಲಾಭ ಯಿಚಾರಿಸಿ ಆದಮಾಲ “ನಮ್ಮನ್ನು ಬರಮಾಡಿಕೊಂಡ ಕಾರಣಯೇನು?” ಯಂದು ಕೇಳಿದರು. ನತ್ಯಗಾತಿ ಚಿನ್ನಸಾನಿಯನ್ನು ತಾನೂ.. ತನ್ನನ್ನು ಆಕೆಯೂ ಗಾಢವಾಗಿ ಪ್ರೇಮ ಮಾಡಿಕೊಳ್ಳುತ್ತಿರುವ ಕುರಿತು.. ಅದಕ್ಕೆ ಅಡ್ಡಿವುಂಟುಮಾಡುತ್ತಿರುವ ತಿಲ್ಲಾನ ತಾಯಕ್ಕ ಮತ್ತಾಕೆಯ ಕುಟುಂಬದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಬುಗುಡೇ ನೀಲಕಂಠಪ್ಪನ ಬಗ್ಗೆ ಅಮೂಲಾಗ್ರವಾಗಿ ಯಿವರಿಸಿದನು. ಸಮೀಪ ದ್ರುಸ್ಟಿ, ದೂರದ್ರುಸ್ಟಿವುಳ್ಳಂಥವರಾದ ಸಾಸ್ತ್ರಿಗಳಿಗೆ ಯಿದು ತಿಳಿಂರದ ಯಿಷಯವಾಗಿರಲಿಲ್ಲ. ಆದರೆ ಅವುಪಚಾರಿಕವಾಗಿ ಪ್ಲಾ..ಹೂ.. ಹಾಗೋ... ಅವುದೋ ಯಂಬಂಥ ವುದ್ದಾರ ವಾಚಕಗಳನ್ನು ವುದುರಿಸುತ್ತ ಅಪಾರ ಯೇದರಾಶಿಯಿಂದ ತುಂಬಿದ್ದ ಮಸ್ತಿಷ್ಕವನ್ನು ಅಲ್ಲಾಡಿಸುತಿದ್ದರು. ಶ್ರಮಪಟ್ಟು ವಂದು ಅಪರೂಪದ ವಾಕ್ಯವನ್ನು ಸಂಯೋಜಿಸಿಟ್ಟಿಕೊಂಡಿದ್ದ ಹೆನ್ರಿಯು “ಸಾಸ್ತ್ರೀಜೀ...” ಯಂದು ಆರಂಭಿಸಿ ಬಲಪ್ರಯೋಗದ ಸಾಧಕ ಬಾಧಕಗಳ ವಳಿತು ಕೆಡುಕಗಳ ಬಗ್ಗೆ ಸಲಹೆ ನೀಡುವಂತೆ ಕೇಳಿಕೊಂಡನು. ಸಾಸ್ತ್ರಿಗಳು ವಂದು ಹೆಣ್ಣಿನ ಯಿಷಯದಲ್ಲಿ ಬಲಪ್ರಯೋಗ ಮಾಡುವುದರಿಂದ ಕುಂಪಣಿ ಸರಕಾರದ ವರಸ್ಸು ಕುಂದುವುದೆಂದು ಹೇಳಿದರು. ವ್ಯಾಜ್ಯ ಸಂಬಂಧೀ