ಪುಟ:ಅರಮನೆ.pdf/೫೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫೮ ಅರಮನೆ ಚತುರೋಪಾಯಗಳನ್ನೂ ಯಿವರಿಸಿದರು. ಅದೇ ಸದರಿ ಪಟ್ಟಣದ ತನ್ನ ಮನೆಯೊಳಗೆ ತಾಯಕ್ಕ ತನ್ನ ಮಗಳು ಚಿನ್ನಾಸಾನಿಯನ್ನು ಯದುರಿಗೆ ಕೂಡ್ರಿಸಿಕೊಂಡು ಹೆನ್ರಿಯನ್ನು ಮರೆತುಬಿಡೂ.. ಮರೆತುಬಿಡು, ನೀನು ನನ್ನ ಮಾತು ಕೇಳದಿದ್ದಲ್ಲಿ ನಾನು ಯಿಷ ಪ್ರಾಸನ ಮಾಡಿ ಸತ್ತು ಹೋಗುವೆನು ಯಂದು ಖಡಾಖಂಡಿತವಾಗಿ ಹೇಳುತಲಿದ್ದಳು. ನೂರಾರು ಸುಂದರ ಕನಸುಗಳಲ್ಲಿ ಮುಳುಗೇಳುತಲಿದ್ದ ಆ ಕಮಲಮುಖಿಯು ಬುದ್ದಿವಾದವನ್ನು ಯಡಗಿವೀಲಿ ಕೇಳಿ ಬಲಗಿವಿಯಿಂದ ಬಿಡುತಲಿದ್ದಳು. ತಾನಲ್ಲಿಂದ ಪರಾರಿಯಾಗಲು ಹರ ಸಾಹಸ ಮಾಡಿರದೆ ಯಿರಲಿಲ್ಲ. ಹತ್ತಾರು ಮಂದಿ ಪಯಿಲುವಾನರು ಹಗಲಿರುಳು ತನ್ನನ್ನು ಕಾಯುತ್ತಿರುವುದರಿಂದ ತಪ್ಪಿಸಿಕೊಳ್ಳುವುದಷ್ಟೇ ಯಾಕೆ ಅಂಗಳ ತುಳಿಯುವುದೂ ಸಾಧ್ಯವಾಗಿರಲಿಲ್ಲ. ತನ್ನ ಪ್ರಿಯತಮ ಹೆನಿಯು ತಬಲಾವಾದಕ ಪರಸುರಾಮ ಬಾವು ಮೂಲಕ ಕಳವಿನಿಂದ ಕಳಿಸಿಕೊಟ್ಟಿರುವ ಪ್ರೇಮಪತ್ರವು ರವಿಕೆಯೊಳಗೆ ಸ್ತನದ್ವಯದ ನಡುವೆ ಕಾಮನ ಬಿಲ್ಲಾಗಿ ಮೂಡಿ ತುಂಟಾಟ ಆಡುತ್ತಿರುವುದು... ಚಿನ್ನಾಸಾನಿ ವಂದು ಕ್ಷಣ ಕಣ್ಣುಮುಚ್ಚಿ ತೆರೆದಳು. ಯಷ್ಟು ತಾನು ಮಾತಾಡಿದರು ತನ್ನ ಮಗಳು ಪ್ರೇಮದ ಹೆಸರೆತ್ತಿ ಹೆತ್ತೊಡಲಿಗೆ ಕಿಚ್ಚಿಡಲಿಲ್ಲ. ಮನಸ್ಸನ್ನು ಬದಲಾಯಿಸಿಕೊಂಡಂತಿದೆ. ತಾಯವ್ವ ಮಗಳ ಮುಖಕ್ಕೆ ಯರಡೂ ಕಯ್ಯಗಳನ್ನು ಹಚ್ಚಿ ಲಟ್ಟಿಗೆ ತೆಗೆದಳು. “ನೀನು ರಾಗದಿಂದೊಡಮೂಡಿರೋ ಮಧುರ ರಾಗ ಕಣವ್ಯಾ. ಪ್ರೇಮ ಗೀಮ ಅಂತ ತಲೆಗೆ ಹಚ್ಚಿಕೊಂಡು ನಿನಗೆ ನೀನೇ ಮೋಸ ಮಾಡಿಕೋಬ್ಯಾಡ. ವಯಸ್ಸಿಗೆ ಮನಸ್ಸನ್ನು ಬಲಿಗೊಡಬ್ಯಾಡ” ಯಂದು ಪರಿಪರಿಯಿಂದ ಹೇಳಿ ಖೋಲಿಗೆ ಕಳುವಿದ ನಂತರ... ತಮ್ಮ ಮನೆದೇವರ ಹೆಸರಿನಲ್ಲಿ ತುಪ್ಪದ ದೀವಿಗೆ ಹಚ್ಚಿದಳು. ಕಾವಲಿದ್ದ ಪಯಿಲುವಾನರ ಸಂಖ್ಯೆಯನ್ನು ಕಡಿತಗೊಳಿಸಬೇಕೆಂದು ವಂದುಕ್ಷಣ ಯೋಚಿಸಿದಳು. ಕರೆದೊಡನೆ ನಾಟ್ಯ ಗತಿಯಲ್ಲಿ ಬಂದ ನಟರಾಜನ ಕಿವಿಯಲ್ಲಿ ಬಾಯಿ ಯಿರಿಸಿ ತಾಯವ್ವ.... ಅತ್ತ ಮನೋಸಾಹೇಬನು ತನ್ನ ಸಿಂಹಸದ್ರುಶ ನೋಟ ಮಾತ್ರದಿಂದ ಮದ್ದಿಕೇರಿಯ ಕದಿರೆಪ್ಪನನ್ನು ವಂದೇ ಸಲಕ್ಕೆ ಚಿತ್‌ಮಾಡಿಬಿಟ್ಟನು... ಅಲ್ಲೇ ನಾಕಾರು ದಿನ ವುಳಕೊಂಡು ಕಲೆಬ್ರುಸಾಹೇಬನು ಜನರ