ಪುಟ:ಅರಮನೆ.pdf/೫೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೫೯ ಬೇಕುಬೇಡಗಳನ್ನು ಕುಂದುಕೊರತೆಗಳನ್ನು ಯಿಚಾರಿಸಿದನು. ಶಾಲೆ, ರಸ್ತೆ ಮತ್ತದರ ಯಿರುಮಗ್ಗುಲು ತಾನು ತನ್ನ ಕಯ್ಯಾರ ಮರವಾಗುವಂಥ ಗಿಡಗಳನ್ನು ನೆಟ್ಟನು. ನೀರು ಬೀಳುವಂಥ ಬಾವಿಗಳನ್ನು ತೋಡಿಸಿದನು. ಮದ್ದಿಕೇರಿ ಪಕ್ಕದಲ್ಲೆ ಕಸಾಪುರ ಯಂಬ ಕುಗ್ರಾಮಯಿತ್ತಲ್ಲ.. ಜಮೀಂದಾರರು ಸೂಚಿಸುವಂಥಾ ಯಕ್ತಿಗಳನ್ನು ಖನಿ ಮಾಡುತ ಹೊಟ್ಟೆ ಹೊರೆಯುತ್ತಿದ್ದ ಮಂದಿ ಯಿತ್ತಲ್ಲಾ... ಅದು ಗುಂಪು ಗುಂಪಾಗಿ ಬಂದು ತಮ್ಮನ್ನು ಮಾಘ ಮಾಡಬೇಕೆಂದು ಕಲೆಟನ ಕಾಲು ಹಿಡಿದು ಬೇಡಿಕಂತು.. ಅವರಿಗೆ ಬುದ್ದಿ ಹೇಳಿ ಮಾಫ್ ಮಾಡಿದಾತನು ಅವರ ವುದರಂಭರಣಕಂತ ತಲಾಕೊಂದೊಂದಿಷ್ಟು ಜಮೀನು ಮಂಜೂರು ಮಾಡಿ.. ಗುಲ್ಲಾರ ಬಾಯಿಯಿಂದ ಹೊಗಳಿಸಿಕೊಳ್ಳುತ.. ಯಂಕಪ್ಪನಾಯುವಿನ ವಳಿತದೊಳಿದ್ದ.. ತಂಟೆಕೋರರಿಂದಲೇ ತುಂಬಿದ್ದ ಕಪ್ಪಟಾಳು ಯಂಬ ಗ್ರಾಮದ ಕಡೇಕ ಪ್ರಯಾಣ ಹೊಂಟಿರುವಾಗ್ಗೆ... ಅತ್ತ ಆಕಾಸರಾಮಣ್ಣನು ಸೊನ್ನದ ಜಮೀಂದಾರು ತಿರುಕಪ್ಪಗವುಡನ ಮುಂದೆ ತಂದಿದ್ದಂಥ ತರಾವರಿ ಆಭರಣಗಳನ್ನು ಸುರುವಿ "ಗವುಡಾ... ನಿನ್ನ ಮಗಳು ಬ್ಯಾರೆ ಅಲ್ಲ... ನನ ಮಗಳು ಬ್ಯಾರೆ ಅಲ್ಲ ಅಂತ ಹೇಳಿದ್ದೆಲ್ಲ.. ಅದಕ ತಂದೀನಿ.. ತಕ್ಕಳಪ್ಪಾ” ಯಂದು ಹೇಳುತ ಹೊಂಟು ನಿಂತನು. ಅದಕಿದ್ದು ಗವುಡನು “ನಿನ್ನುಪಕಾರ ಮರೆಯೋದಿಲ್ಲ ತಮ್ಮಾ. ಮದುವೆ ಮುಗುಸಿ, ನಿನ ಮಗಳಿಗೆ ಆಸೀರುವಾದ ಮಾಡಿ ಹುಗ್ಗಿ ವುಡುಕಂಡು ಹೋಗು” ಯಂದು ಬಲವಂತದಿಂದ ತರುಬಿದನು. ಸದ್ಯಕ ಯಿದನು ವುಟ್ಟುಕೋ.. ಅದನು ವುಟ್ಟುಕೋ ಯಂದು ತನ್ನ ಖಾಸಾ ಕಪಾಟಿನಿಂದ ತೆಗೆದು ಕೆಂಪು ಬಣ್ಣದ ದೋತರ, ಅರುಷಣ ಬಣ್ಣದ ಅಂಗಿ, ನೀಲಿ ಬಣ್ಣದ ರುಮಾಲು ಕೊಟ್ಟನು. ಆತನಿಗೊಂದೇ ಅಲ್ಲದ ಆತನ ವುಳಿಕೇ ಮಂದಿಗೂ ಸಹ.. 'ಯಾರಾದರು ಕೇಳಿದರೆ ನೀನು ಮರಬದ ಝೀರಣ್ಣಗವುಡ ಯಂದು ಅನಪ್ಪಾ ನೀನು ಕೊಡದಗುಡ್ಡದ ಸಂಬ್ಲಿಂಗ ಗವುಡ ಯಂದು ಅನಬೇಕಪ್ಪಾ' ಯಂದು ತಲಾ ವಬ್ಬೊಬ್ಬರಿಗೆ ವಂದೊಂದು ಯಿದದ ನಾಮಕರಣ ಮಾಡಿ ಅವರಿಗಿರಲಕ ವಂದು ಬಿಡದಿ ಮನೆ ಮಾಡಿ ಕೊಟ್ಟಿಟ್ಟುಕೊಂಡನು. ಅವರ ಪಯ್ಕೆ ಯಿದ್ದಂಥ ಚೋರಸಾಸ್ತ್ರಕೋಯಿದನಾದ ಸಂಬನು “ಯಣ್ಣಾ ಅಪಸಗುನವಾಗಲಿಕ್ಕತ್ಯಾವೆ.. ಬೆಳ್ಳಗಿರೋದನ್ನೆಲ್ಲಾ ಹಾಲೆಂದು ನಂಬುವುದು ಥರವಲ್ಲ, ಹೊಂಟುಬಿಡಾಣು” ಯಂದು ಪರಿಪರಿಯಿಂದ ಹೇಳಿದ್ದಕ್ಕಿದ್ದು ಆಕಾಸ ರಾಮಣ್ಣನು ವುದಾಸೀನದ ಮಾತುಗಳನ್ನಾಡಿದನು.