ಪುಟ:ಅರಮನೆ.pdf/೫೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೬೩ ದಂಡಿನಿಂದ ನಾನು ವಾಪಾಸು ಬರಬೌದು... ಬರದಂಗಯಿರಬೌದು” ಯಂದು ಖಡಾಖಂಡಿತ ನುಡಿಬಿಟ್ಟನು. ಮುದುಕಿ ಆ ತನ್ನ ಮೊಮ್ಮಗನನ್ನು ನೋಡಿದ್ದು ಅದೇ ಕೊನೆ ಸಲ... ಹೋದೋನು ಹೋಗಿ ಯೇಸು ವರುಷಾದವು? ಯೇನು ಕಥೆ? ಮುದೇದು ಬಟಾಬಯಲವ್ವ ದಿವಸಕ್ಕೊಂದೆರಡು ಸಲವಾದರೂ ಮುದ್ದಣ್ಣನ ಬತೇರಿ ಯೇರೋದು.. ಹುಬ್ಬಿಗೆ ಕಯ್ಕ ಅಂಟಿಸಿ ಸುತ್ತಾನ್ನಾಕಡೆ ನೋಡೋದು.. ಯಿಳಿಯೋದು ದಂಡಿನಲ್ಲಿದ್ದೋರ ಮನೆಗಳನ್ನೆಡತಾಕೋದು.. ನಮ್ಮ ಕಾಳಗಯ್ಯ ಯಲ್ಲಾದನ? ಹೆಂಗಾದನ? ಯಂದು ಕೇಳೋದು.. ಗುಡ್ಡು ಸೇರಿಕಂಬುವುದು.. ಅದು ಯೇನು ವುಂಬುವುದೋ? ಯೇನು ಕುಡುಕಂಬುವುದೋ? ಮೋಣಿ ಮಂದಿ ಮದ ಮದಲು ಸತ್ತಯ್ಯಾ! ಬೂದುಕಯ್ತಾ ಯಂದು ನೋಡಕಂತ ಯಿದ್ದರು. ಮುದೇದೇ.. ವುಪಾಸಯಿದ್ದು ಮೋಣೀನ ಕೊಲ್ಲತೀ ಯಾಕ? ತಕ್ಕಾ ಮಲ್ಲು ತುತ್ತು ಮುಂಬು ಯಂದು ಅದಯಿದನು ಅದರ ಮುಂದಕ ತಳ್ಳುತಯಿದ್ದರು. ಕಾಲ ಸವೆತೂ ಸವೆತೂ.. ಹಗಲೆಲ್ಲ ಸಾಯೋರಿಗೆ ಅಳೋರು ಯಾರು? ಬರುಬರುತ್ತಾ ಗುಡುಲೊಳಗ ಯಿಣುಕಿ ನೋಡೋದೂ ಬಿಟ್ಟರು.. ವಂದು ಮಾತನು ಆಡೋದು ಬಿಟ್ಟರು. ಹಿಂಗಾಗಿ ಅದು ತಾನಾತು, ತನ್ನ ಗುಡುಲಾತು ಯಂಬಂತೆ ವುಳುಕೊಂಡುಬಿಟ್ಟಿತು.. ಮೋಣೀಯ ಲೆಕ್ಕ ಬುಕ್ಕದೊಳಗ ಯಲ್ಲೂ ಯಿರದಿದ್ದ..... ಅದು ವಬ್ಬಂಟಿಯಾಗಿರಲಿಲ್ಲ.. ತನ್ನೆದೆಯೊಳಗಿಂದ ಯಿತಿಹಾಸದ ತಿಪ್ಪೆ ಸೇರಿರೋ ಮಕ್ಕಳು ಮೊಮ್ಮಕ್ಕಳನು ಯೀಚೆ ಕಡೇಕ ಯಳದು ಯದುರಿಗೆ ಕುಂಢಿಸಿಕೊಂಡು ಅಲಲಲಾಂತ.. ಯಿಲಲಾಂತ ಮಾತಾಡಿಕಂತಿತ್ತು ನನ್ನೊಬ್ಬಳನ ಯಾಕ ಬುಟ್ಟಿಯಲೋ ಬಾಡಖಾವ್' ಯಂದು ಯಮಧರುಮ ರಾಜನನ್ನು ಬಯಕಂತಿತ್ತು. ಹೀಂಗೇ ಯಿರುತ್ತ ಯಿರಲಾಗಿ ವಂದಿವಸ.. ವಂದು ಗಳಿಗೆ ಹೊತ್ತಲ್ಲಿ ಅದರ ಗುಡುಲೊಳಗೆ ಕಾಲಿಟ್ಟಾತ ವಾಲಿಕಾರ ಮೋಲಾಡಯ್ಯನಾಗಿದ್ದ. ಕಯ್ಯ ಕಾಲಾಡಧಾಂಗ ವರಸಿಗಂಟಿ ಮಲಕ್ಕಂಡಿದ್ದ ಅದರ ಸನೀಕ ಹೋಗಿ “ಭೇss.. ಯ್ಯೋಮ್ ಬಟಾಬಯಲವ್ವ ಭೇss.” ಯಂದು ಕೂಗೀs ಕೂಗಿ ಅದರ ಕಷ್ಟೊಳಗ ಯತ್ತರಕ. ಕರಗ ಮೂಡಿದ. ಆಗ ಅದು ಮೊಣಕಯ್ಯ ಪುಟುಗಿಯಿಂದ ಮುಂಡವನ್ನು ಮ್ಯಾಲಕೆತ್ತಿ ತಿಬ್ಬಳಿಸಿ ನೋಡುತು. ಆತನೇ ಯೀತನೆಂದು ಅಂತೂ ನೆಪ್ಪು ಮಾಡಿಕಂಡು ಬಂದಿರುವನಲ್ಲಾ ಯಂದಂದಕಂತು.