ಪುಟ:ಅರಮನೆ.pdf/೫೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೮ ಅರಮನೆ ಹೊಕ್ಕು ಜಡ್ಡು ಹಿಡಿದು ಮಲಗಿದ್ದ ಪೆದರೆಡ್ಡಿಯ ಯೋಗಕ್ಷೇಮ ಯಿಚಾರಿಸಿದ್ದೂ ಅಲ್ಲ... ಅವನತಮುಖನಾಗಿದ್ದ ಕೇಸುವರೆಡ್ಡಿಯ ಮಯ್ದಡವಿ “ಗಾಡ್ ಬೆಸ್ ಯು ಮಮ್ ಚಲ್ಲಡ್” ಯಂದೂ ಹರಸಿದನು. ವುರಾಲುವರ ಕುಟುಂಬದೊಂದಿಗೆ ದಕ್ಷಿಣಾತ್ಯ ಸುಗ್ರಾಸ ಭೋಜನ ಸವಿದು ಯೇಳಾ ಪಟ್ಟಿ ಪ್ರಕಾರ ಚಿನ್ನೋಬುಳವನ್ನು ತಲುಪಿದನು.... ರೆಡ್ಡಿ ನಾಯ್ಡು ಸಮುದಾಯದ ಆರಾಧ್ಯ ದಯವವಾದ ನರಸಿಮ್ಮ ದೇವರು ನೆಲಗೊಂಡಿರುವ ಪರಮ ಪಯಿತ್ರಕ್ಷೇತ್ರವದು. ವಂದು ಕಾಲಕ್ಕೆ ಯಿತ್ತ ಯಿಜಯನಗರದರಸರಿಂದಲೂ.. ಅತ್ತ ಕಾಕತೀಯ ರಾಜರುಗಳಿಂದಲೂ ಸೇವಿಸಿಕೊಂಡಿರುವಂಥಾ ದೇವರದು. ವಬ್ಬೊಬ್ಬ ರಾಜರು ಕಟ್ಟಯಿಸಿರುವ ಗೋಪುರಗಳು, ಆ ದೇವಾಲಯದ ಯಂಟೂ ದಿಕ್ಕಿನಲ್ಲಿ ಗಗನಚುಂಬಿಯಾಗಿ ಸಿಖರ ಚಾಚಿಕೊಂಡವೆ... ಆ ದೇವರು ಬಹಿರಂಗವಾಗಿ ಸಸ್ಯಾಹಾರಿಯಾಗಿದ್ದು ಆಂತರಂಗಿಕವಾಗಿ ಮಾವುಸಾಹಾರಿಯಾಗಿರುವುದು. ನಾಸ್ತಿಕರನ್ನು ವುರಿಗಣ್ಣು ಬಿಟ್ಟು ಸುಡುತ ತನ್ನ ಖ್ಯಾತಿ ಹೆಚ್ಚಿಸಿಕೊಂಡಿರುವುದು. ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೊಲೆ ಸುಲಿಗೆಗಳನ್ನು ಘೋಷಿಸಿಕೊಂಡು ಬಂದಿರುವುದು. ಕೊಲೆ ಮಾಡಿಸೋರು ಮಾಡೋರೆಲ್ಲ ಅದಕ ಅಡ್ಡಬಿದ್ದು ಆಸೀರವಾದ ಪಡಿತಾ ಬಂದಿರುವರು. ವಳ್ಳೆಯವರು, ಕೆಟ್ಟವರೆಲ್ಲ ಅದರ ನಾಮ ಜಪಿಸಿಕಂತ ಮಲಗುವುದು, ಯಚ್ಚಾಗುವುದು ಮಾಡುತ್ತಾರೆ.. ಸುತ್ತನ್ನಾಕಡೆಮಂದಿ ಚಿನ್ನೋಬಳ ಯಿರೋ ದಿಕ್ಕಿನತ್ತ ಕಾಲು ಹಾಕಿ ಮಲಗುವುದಿಲ್ಲ, ವಂದು ಮಾಡುವುದಿಲ್ಲ, ಯರಡು ಮಾಡುವುದಿಲ್ಲ..... - ಆ ಹೆಸರು ಯದೊಡನೆ ಗಡಗಡನ ನಡುಗುತಾರ.. ಅಂಥ ವುಗಕ್ಷೇತ್ರವನ್ನು ದತ್ತಮಂಡಲದ ಕಲೆಬ್ರುಸಾಹೇಬನು ಬೇಕೆಂದೇ ತಡವಿಕೊಂಡನು. ಅರಕರೂ, ಧರುಮಕರರೂ “ಬ್ಯಾಡ ಸ್ವಾಮೀ ಬ್ಯಾಡ. ಯಿದನು ತಡವಿಕೊಂಡಲ್ಲಿ ನೀವು ರಗುತಕಾರಿ ಸಾಯುತೀರಿ” ಯಂದು ಗಿಳಿಗೆ ಹೇಳಿದಂಗ ಗಲಗಲಾಂತ ಹೇಳಿದರು. ಅದಕಿದ್ದು ಮನೋ ಸಾಹೇಬನು ಅತಿಮಾನುಷ ಸಗುತಿಯನ್ನು ವಂದು ಕಮ್ಮಿ ನೋಡೇಬಿಡುವುದೆಂದು ನಿರರಿಸಿದನು. ಕಿರಸ್ತಾನನಾದ ಆತನು ದೇವುಳ ಪ್ರವೇಶಿಸುವುದನ್ನು, ದಯವವನ್ನು ಯಿರುದ್ದ ಹಾಕಿಕೊಳ್ಳುವುದನ್ನು ರಗುತಕಾರಿ ಸಾಯೋದನ್ನು ನೋಡಲಕೆಂದು ಸಾಯಿರಾರು ಸಂಖ್ಲಿ ಭಕುತಾದಿ ಮಂದಿ ನೆರೆದಿರುವಾಗ್ಗೆ...