ಪುಟ:ಅರಮನೆ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ತಾವು ಅಲವುಕಿಕವಾಗಿ ಅಂದನಕಂತಿದ್ದುದು ಸಿವ ಸಿವಾ.. ಮೋಬಯ್ಯನು ತಾನು ಸರೀರದೊಳಗದಾನೋ ಯಿಲ್ಲವೋ? ಯಂಬ ಪ್ರಶ್ನೆ ವಬ್ಬೊಬ್ಬರ ಮುಂದ ನೆಲ ಮುಗುಲಿಗೇಕಾಗಿ ನಿಂತುಬಿಟ್ಟಿತು. ಸಮುದ್ರದೊಳಗೆ ನದಿ ನಷ್ಟವಾದಂಗೆ, ನದಿವಳಗೆ ಹೊಳೆ ನಷ್ಟವಾದಂಗೆ, ಹೊಳೆವಳಗೆ ಹಳ್ಳ ನಷ್ಟವಾದಂಗೆ, ಹಳ್ಳದೊಳಗೆ ಬಿಂದು ನಷ್ಟವಾದಂಗೆ, ಬೀಜ ರುಕ್ಷದೊಳಗೆ ನಷ್ಟವಾದಂಗೆ ಆತನು ತನ್ನ ಸರೀರದಿಂದ ನಷ್ಟ ಹೊಂದಿರಬೌದಾ? ತನ್ನ ಸರೀರದಿಂದ ಪರಿತ್ಯಕ್ತನಾಗಿರೋ ಮೋಬಯ್ಯನು ಹೀಗೆಲ್ಲಿರಬೌದು? ಅಲ್ಲಿರಬೌದು? ಯಲ್ಲಿರಬೌದಾ? ಯಲ್ಲಲ್ಲಿ ಯಿರಬೌದಾ? ಯಂದು ಮುಂತಾಗಿ ಯೋಚಿಸುತ್ತಾ.. ಯೋಚಿಸುತ ಭಯ ಭೀತರಾಗುತ್ತಿದ್ದುದು ಸಿವ ಸಂಕರ ಮಾದೇವಾss... ವಟ್ಟಲ್ಲಿ ಪಟ್ಟಣಕ್ಕೆ ಪಟ್ಟಣವು ವಂದು ಬಾಯಾಗಿ, ವಂದು ಕಿವಿಯಾಗಿ ವಂದು ಬವಕೆಯಾಗಿ ಮಾರುಪಾಡಾಗುತ್ತಿರುವಾಗ್ಗೆ... ಅತ್ತ ಕಡಪ ಯಂಬ ಪಟ್ಟಣಕ್ಕೆ ಯಂಟು ಗಾವುದ ದೂರದಲ್ಲಿರೋ ರಾಚೋಟಿ ಯಂಬ ಹೋಬಳಿ ಮಟ್ಟದ ಗ್ರಾಮವುಂಟು. ಆ ಗ್ರಾಮದ ವಂದು ಮೂಲೆಯ ವಂದು ಮುರುಕು ಹೈಪಡಿಯಲ್ಲಿ ಕಿಷ್ಟಯ್ಯ ಚಿನ್ನಮ್ಮಯಂಬ ದಂಪತಿಗಳಿದ್ದರು. ಅವರಿಗೆ ವಂಬತ್ತು ಮಂದಿ ಮಕ್ಕಳು, ಕಿಷ್ಟಯ್ಯನು ಸಣಪುಟ್ಟ ಕಳ್ಳತನ ಮಾಡಿ ಸಂಸಾರ ಸಲಹುತ್ತಿದ್ದನು. ಥಾಮಸು ಮನೋ ಸಾಹೇಬನು ರಾಚೋಟಿ ಜಮೀಂದಾರನಾದ ಕಿರುಕಲ ಕೋನ ರೆಡ್ಡಿಯ ಗಾದೆಯನ್ನು ಕಬಜಾ ಮಾಡಿ ಆತನ ವಡೆತನದಲ್ಲಿದ್ದ ಮೂರು ಸಾಯಿರದಾಂಯುಂಟುನೂರಾ ಮುವತ್ತೊಂದು ಯಕರೆ ಜಮೀನಿನ ಪಯ್ಕೆ ಯಡೂವರೆ ಸಾಯಿರ ಯಕರೆ ಭೂಮಿಯನ್ನು ಅದೇ ಗ್ರಾಮದ ಭೂಹೀನರಿಗೆ ಹಂಚಬೇಕೆಂದು ತೀರುಮಾನಿಸಿದನು. ಅಂಥ ಭೂಹೀನರ ಪಯ್ಕೆ ವಬ್ಬನಾಗಿದ್ದ ಕಿಷ್ಟಯ್ಯನು ಕಲೆಬ್ರುಸಾಹೇಬನೆದುರು ಯಿನಯ ಪೂರಕವಾಗಿ ನಿಂತು “ಅಯ್ಯಾ, ನಾನು ಮಕ್ಕಳೊಂದಿಗೆ ನಿದ್ದೇನೆ.. ದುಡಿದುಂಬಲಕ ಭೂಮಿಯಿಲ್ಲದ ಕಾರಣಕ ಕಳ್ಳತನ ಮಾಡಿ ಸಂಸಾರ ಸಲುವುತ್ತಿದ್ದೇನೆ.. ತಾವು ನನಗೂ ವುಳುಮೆ ಮಾಡಲಕ ಜಮೀನು ಮಂಜೂರು ಮಾಡಿದಲ್ಲಿ ಕಳ್ಳತನ ಬಿಟ್ಟು ವ್ಯಯಿ ಮುರುದು ದುಡಿವುತ ಗವುರವದಿಂದ ಬದುಕುವೆನು” ಯಂದು ಅಹವಾಲು ಸಲ್ಲಿಸಿದನು. ಅದನ್ನು ಕೇಳಿ ಮನೋ ಸಾಹೇಬನ ಕರುಳು ಕರಗಿತು. ಹಂಗಿದ್ದರೆ ಸರೆಯಂದು ಕುಂತ