ಪುಟ:ಅರಮನೆ.pdf/೬೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೫೭೫


ಮೊದಂದರೆ ಹೆಂಗ ಮೋದೀತದು? ಮುದ್ದು ಅಂದಾಡಿದ ಮಾತು ವಂದಾss ಯರಡಾ......... ಯಾ ಕಾಲದಲ್ಲೂ ತನಗ ಯಾರೊಬ್ಬರು ಹಿಂಗ ಹೀಯಾಳಿಸಿ ಅಂದಾಡಿದ್ದಿಲ್ಲ....ತಾನೀಗ ವಂದೇಕಚಿತ್ ಮುದೇದರ ಬಾಯಿಯಿಂದ ಹಿಂಗ ಅನ್ನಿಸಿಕೊಳ್ಳಬೇಕಾಯಿತಲ್ಲ.. ಸಾಪ ಕೊಡಲಕಂದರ ಆ ಮುದೇನು ಸುಮಸುಮಕ ಬಯ್ದಾಡಿಲ್ಲ... ಯಿದ್ದದ್ದು ಯಿದ್ದಂಗ ಹೇಳಯಿತೆ.. ಪುವ್ವಲ ಸಿಮಾಸನದ ಮ್ಯಾಲ ಕೂಕಂಡಿರೋ ತನ ಕಂದಯ್ಯನ ಯದಿಯೊಳಗ ವಂದೇ ವಂದು ಹಿಡಿ ಅಕ್ಕಸರಗಳಿಲ್ಲಾಂದರ ಹೆಂಗ ಯಂದು ತಾಯಿ ಯೋಚಿಸಿದಳಂತೆ.. ತಾನು ತನ್ನ ಮಗೀಗೆ ಅಕ್ಕಸರಾಭ್ಯಾಸವ ಸುರುವು ಮಾಡಿಸಬೇಕೆಂದು ಕ್ರುತು ನಿಚ್ಚಯವಂ ಮಾಡಿದಳಂತೆ.. ಆ ಕ್ಷಣವೆ ತಾನು ಕುಂತಳ ಪ್ರಾಂತದ ಸಮಸ್ತ ಅಗ್ರಹಾರಗಳನುದ್ದೇಶಿಸಿ ಆಗೈ ಮಾಡಲಾಗಿ.... ಬಡೇಲಡಕು ದಿಕ್ಕಿನಗುಂಟ ಅಂಟುಕೊಂಡಿದ್ದ ಯೋಶ, ಕೇನ, ಕಠ, ಮುಂಡಕ, ಮಾಂಡೂಕ್ಯ ಭಾಷ್ಕಳ, ಬ್ರಹ್ಮಬಿಂದು, ವಾಜಸೇನ, ಮುದ್ದಲ, ಅರುಣ ಯಂಬಿವೇ ಮೊದಲಾದ ಅಗ್ರಹಾರ ಗಳಿಂದಲೂ, ಕಾನಾಮಡಗು ದಿಕ್ಕಿನಗುಂಟ ಅಂಟುಕೊಂಡಿದ್ದ ಸನತ್ಕುರ, ನಾರದೀಯ, ವಾರುಣ, ಕಾಳೀ, ವಸಿಷ«, ಸಾಂಬ, ಸವುರ, ಮರೀಚಿ, ಪರಾಸರ, ಹೇತು ಯಂಬಿವೇ ಮೊದಲಾದ ಅಗ್ರಹಾರ ಗಳಿಂದಲೂ, ಗುಂಡು ಮುಳುಗ ದಿಕ್ಕಿನ ಗುಂಟ ಅಂಟುಕೊಂಡಿದ್ದ ಅಗ್ರಹಾರಗಳಿಂದಲೂ ವುಚಥ್ಯಾಚಾರ, ದೀನ್ಸತಮಾಚಾರ್, ಗವುತಮಾಚಾರ ಕುಪಾಚಾರ ಗಾಲವಾಚಾರರೇ ಮೊದಲಾದ ಮೇದಾಂತ ದೇಸಿಕರೂ, ಪುರಾಣಿಕರೂ, ವಯ್ಯಾಕರಣಿಗಳೂ, ಛಾಂದಸಿಗಳೂ, ಯಮುನೆ, ಸರಸೋತಿ, ಗೋದಾವರಿ, ಕಾವೇರಿ, ಸಿಂಧೂ, ನರುಮದೆ, ಗಂಗೆ ನದಿಗಳೋಪಾದಿಯಲ್ಲಿ ಹರಕೋತ ನಡಕೋತ, ನಡಕೋತ ಹರಕೋತ ಕುದುರೆಡವು ಪಟ್ಟಣದ ಅರಮನೆಯ ತಲಬಾಕಲಲಿ ಅಂಜಲೀ ಬದ್ಧರಾಗಿ ನಿಂತು “ತಾಯಿ ಯಾಕ ನಮ್ಮನು ನಿನ್ನ ಸನ್ನಿಧಾನಕ ಬರಲಕಂತ ಆಗ್ನೆ ಮಾಡಿದಿ” ಯಂದು ಕೇಳಿಕೊಂಡಿದ್ದಕ್ಕೆ ಜಗಾನುವಾತೆಯು “ನನ ಕಂದಂಗ ಯಿ ಕಲಿಸಬೇಕರಯ್ಯಾ, ಅರವತ್ನಾಕು ಕಲೆಗಳಲ್ಲಿ ಪಾರಂಪರಾಗತ ನನ್ನಾಗಿ ಮಾಡಬೇಕರಯ್ಯಾ” ಯಂದು ಹೇಳಿದಳಂತೆ... ಆಚಾರರ ಪಯ್ಕೆ ಹಿರೀಕರಿದ್ದ ವುಚಥ್ಯಾಚಾರರು ಸಾಂಬವಿಯ ಪ್ರೀತರವಾಗಿ ಸಾಂಬಯ್ಯನನು ತಮ್ಮ ತೊಡೆ ಮ್ಯಾಲ ಕುಂಡ್ರಿಸಿಕೊಂಡು ಬೊಮ್ಮ