ಪುಟ:ಅರಮನೆ.pdf/೬೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫೭೭ ನೋಡಲಕೊಂದು ಛಂದ ಯಿದ್ದವಂತೆ.... ಸತ ಸಹಸ್ರಕೋಟಿ ದೀಪಗಳ ಕುಡಿಗಳಾಗಿದ್ದವಂತೆ.. ಸತ ಸಹಸ್ರಕೋಟಿ ಚಿಟ್ಟೆ ಪತಂಗಗಳಾಂಗ ಯಿದ್ದವಂತೆ, ಪರಮಾತುಮನೊಳು ಐಕ್ಯ ಆಗಲಕಂತ ಹೊಂಟು ಬಂದ ಸತ ಸಹಸ್ರಕೋಟಿ ಜೀವಾತುಮ ಗಳಾಂಗಿದ್ದವಂತೆ.. ಯವ್ವಾ ನಾನು ಕನ್ನೂಡ, ಯವ್ವಾ ನಾನು ತೆಲುಗು, ನಾನು ಇಂಗಲೀಸು, ನಾನು ಮಲಯಾಳಿ, ನಾನು ಅರವ, ಯಂದು ಮುಂತಾಗಿ ತಮಗೆ ತಾವ ಪರಿಚಯಿಸಿಕೊಂಡವತೆ, “ಆಹ್ಲಾ.. ನನ ಕಂದಯ್ಯಗ ವಲಿಯದ ನೀವು ಯೊ ಭೂಮಿ ಮ್ಯಾಗ ಯಾಕೆ ಯಿರುವಿರಿ?” ಯಂದನಕಂತ ತಾಯಿ ಅವನ್ನೆಲ್ಲಾ ಯಲ್ಲೇ ಯಲ್ಲು ಗುಕ್ಕು ಮಾಡಿ ಬಾಯೊಳಗ ಯಿಟುಕೊಂಡು ಬಿಟ್ಟಳಂತೆ..... ಆದಮ್ಯಾಲೂ ಸಾಂಬವಿಯ ಕೋಪ ತಮಣಿಯಾಗಲಿಲ್ಲವಂತೆ. ಮಾನವ ಕೋಟಿಯ ಯದೆ ಗಂಟಲುಗಳೊಳಗ ರೂಪಯಿರದ ಅಕ್ಕಸರಗಳೆಂದರೆ ಭಾವನೆಗಳು, ಸಂಬೋಧನೆ ವಾಚಕಗಳು ಯಿದ್ದವಲ್ಲಾ.. ಅವಕ್ಕೂ ಹಾಜರಾಗುವಂತೆ ಆಗ್ನೆ ಮಾಡಿದಳಂತೆ.. ಊರೇಳು ಲೋಕಗಳೊಳಗ ಸತಸಹಸ್ರಕೋಟಿ ಗಂಟಲೊಳಗಿಂದ, ಯೆರೆಮಿದಿಳುಗಳೊಳಗಿಂದ ಭಾವನೆಗಳು ವುತಾರಗೊಂಡು ಮನೋ ಯೇಗದಲ್ಲಿ ಸಾಗಿ ಆಕೆಯ ವಡಲು ತುಂಬಿದವಂತೆ. ಛಣಾರದಲ್ಲಿ ಲೋಕ ಲೋಕವೆಲ್ಲ ಅಕ್ಕಸರ ಭಾವನೆಗಳಿಂದ ವಂಚಿತಗೊಂಡು ಅಂಯೋಮಯ ವಾದವಂತೆ ಸಿವನೇ. ಅವರವರು ಯಿವರವರಿಂದಲೂ ತಮ್ಮ ತಮ್ಮ ಪಂಚೇಂದ್ರಿಯಂಗಳ ನಿಗರಾವಣೆ ಯಿಂದಲೂ ದೂರವಾದರಂತೆ.. ವಬ್ಬೊಬ್ಬರು ವಂದೊಂದು ನಡುಗಡ್ಡೆಯಾದರಂತೆ. ಅಂತರ್ ಪಿಚಾಚಿ ಗಳಂತಾಗಿ ಬಿಟ್ಟರಂತೆ. ನರಮಾನವರೊಂದೇ ಯಾಕ ಅಡಡವಿಗಳಲ್ಲಿನ ಪಸುಪಚ್ಚಿಗಳೂ, ಪರುವತ ತಪ್ಪಲಲ್ಲಿ ತಪೋನಿರತ ತಾಪಸಿಗಳೂ ಸಿಲಾವಿಗ್ರಹಗಳಂತಾಗಿ ಬಿಟ್ಟರಂತೆ...ಗುಡಿಗಳೊಳಗ ಗಂಟೆ ಜಾಗಟೆಗಳನ ಭಾರಿಸವರಿಲ್ಲ ದಾಂಗಾಯಿತಂತೆ.. ಅಶ್ವಕರು ಆದಿವಾಸಿಗಳಂತಾಗಿ ಬಿಟ್ಟರಂತೆ.. ಯಿದರ ತಿಕ್ಕಡಿ ಗಂಧಯ್ಯ ಕಿನ್ನರ, ಕಿಂಪುರುಸರಿದ್ದ ಲೋಕಗಳನ್ನೂ ಬಿಡಲಿಲ್ಲವಂತೆ.. ಯಿಂದನ ಅಂಬ್ರಾವತಿ ಪಟ್ಟಣದೊಳಗ ಸಂಗೀತದ ವಾದ್ಯಗಳು ನುಡಿಸುವವರಿಲ್ಲದೆ ಕಸಭಾರಿಗೆಗಳಿಗಿಂತ ಕಡೆಯಾಗಿ ಬಿಟ್ಟವಂತೆ ಸಿವನೇ, ರಂಭೆ, ಮೂರೈಸಿ, ತಿಲೋತ್ತಮೆಯರೇ ಮೊದಲಾದ ಸುಂದರಾಂಗಿಯರು ಕುಣಿಯಲಾಗದೆ ಕುಂಟು ಬಿದ್ದರಂತೆ ಸಿವನೇ...