ಪುಟ:ಅರಮನೆ.pdf/೬೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯೨ ಅರಮನೆ ಸಂಬಂಧಿಸಿದಂಥ ಭಾವನೆಗಳೂ ಬಂದು ಬಿಟ್ಟಿದ್ದವಷ್ಟೆ.. ಅವು ಯೇನು ಮಾಡಿದಪ್ಪಾ ಅಂದರ ಖಾಲಿವುಳುಕೊಂಡಿದ್ದ ಆಕಾಸರಾಮಣ್ಣನ ಸರೀರದೊಳಗೆ ಹೊಕ್ಕೊಂಡು ಬಿಟ್ಟವಂತೆ.. ಮತ್ತೆ ಆಕಾಶರಾಮಣ್ಣಗ ಸಂಬಂಧಿಸಿದ ಕಳುವಿನ ಭಾವನೆಗಳು ಮಲ್ಲಿಗೆ ಹೋದವಪ್ಪಾ ಯಾರ ಸರೀರದೊಳಗೆ ಆಶ್ರಯ ಪಡಕೊಂಡು ಬಿಟ್ಟವಪ್ಪಾ ಅಂದರ... ಅದೆಲ್ಲ ಮುಂದಿನ ಕಥೆ... ಯೀಗ್ಯಾಕ? ಯಲ್ಲಾ ಪ್ರಕೊರಚರಟ್ಟಿ ಹತ್ತನೇ ದಿವಸಕ್ಕೆ ಯಾಕ, ಬರೋಬ್ಬರಿ ಹನ್ನೊಂದನೇ ದಿವಸಕ ಪುಟ್ಟಂದೂರಿ ಸೊಸ್ಥಿತಿಗೆ ಮರಳಿತು.. ಅರಂಬರಕ್ಕೆ ಮಾತು ನಿಲ್ಲಿಸಿದ್ದರಲ್ಲಿ ಸಂಭುಗ, ಸರಭರೇ ಮೊದಲಾದವರು.... “ನೋಡಿದ್ಯಾ ಯಜಮಾನ.. ನಮ ದ್ಯಾವರು ಪೋಲಾರಮ್ಮ ಕೆರಳಿ ಮಾಡಿದ ಅನಾವುತಾನ. ಅದಕ ನಾವು ಹೇಳುವುದಪ್ಪಾ ನಮ ಕಸುಬನ್ನ ಯಟ್ಟೆ ಪರಿಸ್ತಿತಿಯಲ್ಲೂ ಬಿಡೋದು ಥರವಲ್ಲ. ಜೋರಾಮ್ಮನೇ ಬೆಂಗಾವಲಿರುವಾಗ ತಿರುಕಪ್ಪಗವುಡನೊಂದೇ ಅಲ್ಲ, ಕಲೆಟ್ಟರು ಸಾಹೇಬನೂ ನಮಗ ಯೇನೂ ಮಾಡಲಕ ಆಗುವುದಿಲ್ಲ.. ಯಟ್ಟಿ ಪರಿಸ್ತಿತಿಯಲ್ಲೂ ನಮ್ಮಮ್ಮ ನಮ್ಮನ್ನ ಕಾಪಾಡುತಾಳ, ಮುಖಾ ಮಾರೀನ ಗಡಕ್ಕಂಡು ವುಂಡು ಗಿಂಡು ಸಜ್ಜಾಗು. ನಾವು ಕಳುವಿಗ ಹೋಗದ ಬಾಳೋಸು ದಿವಸಾಗೇವ. ನಮ್ಮೆಲ್ಲರ ಕಯ್ಯ ಸುಟು ಸುಟು ಅನಲಕ ಹತ್ಯಾವ.. ಕುದುರಡವು ಸೀಮೆಯಿಂದ ವದು ವರಮಾನ ಬಂದಯ್ಕೆ... ಅಲ್ಲಿ ತಿರುಪಾಲಯ್ಯನೆಂಬ ಕೋಮಟಿಗನ ಮನೆವಳಗೆ..” ಯಂದು ಹೇಳುವಷ್ಟರಲ್ಲಿ ಆಕಾಶ ರಾಮಣ್ಣನು ತನ ಕಲ್ಲೊಂದು ತಂಬೂರಿಯನ್ನು ಹಿಡಕೊಂಡು ಬಿಟ್ಟಿದ್ದನು. ಟೆವ್ವ ಟೆವ್ವ ಅಂತ ಮೀಟಲಕ, ಗಂಟಲನ ಸ್ತುತಿ ಸರಿಪಡಿಸಿಕೊಳ್ಳಲಕ ಹತ್ತಿದ್ದನು.. ಯಿದ್ದಕ್ಕಿದ್ದಮೋಲು ಆತನು.. 'ಕಳುವು ಗಿಳವು ಮಾಡಬ್ಯಾಡಿರಣ್ಣಾ... ಮಾಡಿದರಾಕ ಮಾಡುವಲ್ಲಿರಿ ಹರಿಯ ನಾಮವ ಕಳುವು ಮಾಡಿರಣ್ಣಾ” ಯಂದು ಸುಸ್ರಾವ್ಯವಾಗಿ ಹಾಡಲಕ ತೊಡಗಿಬಿಡಲು..... ಅದನು ಕೇಳುತಲೆ ಯಲ್ಲಾರು ಅಡಲಾಗಿ ಹೋಗಿಬಿಟ್ಟರು. ತಾನಿನ್ನು ಮುಂದಕ ಆಕಾಸ ರಾಮಣ್ಣಾವ ಧೂತನೆಂದೂ.. ಚಂಚಲವೂ, ಅಸ್ಥಿರವೂಆದ ರೊಕ್ಕ ವಡವೆ ವಸ್ತರಕ್ಕೆ ಬದಲಾಗಿ ಸುಸ್ಥಿರಮ, ಮೋಕ್ಷ ಪ್ರದಾಯಕವೂಆದ ಭಕುತಿಂರುನ್ನೇ ಕಳುವು ಮಾಡಿ ಯುದೆಂದು ತಿಜೋರಿಯನ್ನು ತುಂಬಿಕೊಳ್ಳಬೇಕೆಂದೂ ಹೇಳಿಬಿಡಲು.... ಹುಂಚಿ, ಜಾಲಿಮರಗಳು ತಳುಕು ಹಾಕ್ಕೊಂಡಿದ್ದ ಜೋಡು ಬೊಡ್ಡೆಯ