ಪುಟ:ಅರಮನೆ.pdf/೬೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅನ್ನುತ್ತಿದ್ದ.. ಹೀಗಿರುತ್ತಿರಲಾಗಿ.... ವಬ್ಬ ಪರದೇಸದವ ಸುಡುಗಾಡೆಂಭೋ ಸುಬ್ಬರಾಗಸದಲ್ಲಿ ಬಾಲದ ಚುಕ್ಕಿಹಾಂಗ ಕಾಣಿಸಿಕೊಂಡನು. ಪ್ರತಿಯೊಂದು ಸಮಾಧಿಯದುರು ತಾಸುಗಟ್ಟಲೆ ನಿಲ್ಲುವುದು.. ಯೇನೇನೋ ವಟಗುಟ್ಟುವುದು ಮಾಡುತಿದ್ದನು. ಯಾರಪ್ಪಾ ಯಂದು ಕೇಳಿದವರಿಗೆ ತನ್ನದು ದೂರದ ಕೇರಳ ದೇಸ ಯಂದು ಹೇಳುತ್ತಿದ್ದ ಯೇನು ಮಾಡಿದ್ದಿ ಅಂದವರಿಗೆ ತಾನು ಸತ್ತವರ ಕೂಡೆ ಮಾತುಕಥಿ ಮಾಡುತೀನಿ ಅಂತ ಹೇಳಿ ಆಶ್ಚಯ್ಯ ಹುಟ್ಟಿಸುತ್ತಿದ್ದನು. ಅಷ್ಟು ಬಿಟ್ಟರೆ ಮತ್ತೊಂದು ಮಾತಿರಲಿಲ್ಲ.. ಕಥಿ ಯಿರಲಿಲ್ಲ... ಮರುಗಳ ಗಮನವನ್ನು ತನ್ನ ಕಡೇಕ ಸೆಳೆಯಲಿಕ್ಕಾಗಿ ತಾನು ಮುಂದೆ ಮುಂದಕ ಯೇನು ಮಾಡಿದನೆಂದರೆ... ಅದೇ ಸುಡುಗಾಡೊಳಗ ಪುರಾತನ ಕಾಲದ್ದಾದ ಯಂಥದೋ ಎಂದು ಮರಯಿತ್ತು. ಆದರೆ ಪೊಟರೆಯೊಳಗೆ ವಂದು ಗೂಬೆ ವಾಸವಾಗಿತ್ತು. ಭಾರೀ ರೆಕ್ಕೆಯ ಅದು ರಾತ್ರಿಯಲ್ಲಿ ಹಾರಾಡಿ ಸೂರ ವುದಿಸಿದೊಡನೆ ಪೊಟರೆ ಸೇರಿಕೊಂತಿತ್ತು. ಆತನು ಮರಯೇರಿ ಪೊಟರೆಯೊಳಗ ಕಯಾಕಿ ಹಿಡಿದು ಅದರ ಕೊಳ್ಳೇಗೆ ವಂದು ಮುಷಿ« ಗಾತುರದ ಗಂಟೆಯನ್ನು ಕಟ್ಟಿ ಬಿಟ್ಟನು, ತನಗ ಯಾರೋ ಲಿಂಗಧಾರಣೆ ಮಾಡಿದರೆಂದು ಭಾವಿಸಿದ, ಸಂಭ್ರಮಿಸಿದ ಆ ನಿಶಾಚರವು ಭಲೆ ವುತ್ಸಾಹದಿಂದ ರಾತಿಂ ಆಯಿತೆಂದರೆ ಆ ನಾಕೂ ಮರುಗಳ ಯದ ಮ್ಯಾಲ ಘಲ್ ಘಲ್ ಯಂದು ಸಭದ ಮಾಡುತ ಹಾರಾಡಲಾರಂಭಿಸಿತು. ಆ ಸಬುಧ ಕೇಳಿಸಿಕೊಂಡ ಮಂದಿ ಭಯಭೀತರಾದರು. ಗಂಧರರೋ.. ಕಿನ್ನರರೋ.. ಕಿಂಪುರುಷರೋ, ಪೀಡೆ, ಪಿಚಾಚಿಯೋ, ಬೇತಾಳಮೋ.. ಯಿವುಗಳ ಪಯ್ಕೆ ಯಾದಿರ ಬೌದೆಂದು ಆತಂಕಕ್ಕೀಡಾದರು. ರಾತಿರಿ ಆಯಿತೆಂದರ ಮುಗುಲ ಬಯಲು ತುಂಬೆಲ್ಲ ಅಂಡಲೆಯುತಲಿದ್ದ ಆ ನಾದ ಆಲಿಸುತ ರೆಪ್ಪೆಗೆ ರೆಪ್ಪೆ ಅಂಟಿಸಿ ನಿದ್ದೆ ಮಾಡದಾದರು. ಅದರ ತಲಾ ವಂದೊಂದು ಅತಿಮಾನುಷವೂ, ಅಮಾನುಷವೂಆದ ಕಥೆಗಳನ್ನು ಕಟ್ಟಿದರು, ಬಿತ್ತಿದರು. ತಮಗ ಕೇಡು ಕಾದಯ್ದೆಂದು ಭಾವಿಸಿದರು. ತಮ್ಮ ಕರಿಲಿಂಗನಗವುಡ ಯಿದ್ದಲ್ಲಿಗೆ ಹೋಗಿ ಯಜಮಾನ ನೀನೇ ದಾರಿ ತೋರಿಸಬೇಕು ಯಂದು ಕೇಳಿಕೊಳ್ಳಲಕ ಹತ್ತಿದರು. ಗವುಡನು ಜೋತಿಷಿಗಳನ್ನೂ, ಮಂತರ ಮರಾಟಿಗಳನ್ನು ಕರೆಯಿಸಿಕೊಂಡು ಸಲಹೆ ಪಡೆದನು. ಅವರ ಸಲಹೆಯಂತೆ