ಪುಟ:ಅರಮನೆ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨ ಅರಮನೆ ನನ್ನಿಂದ ದೂರ ಮಾಡಿಬಿಟ್ಟೆಲ್ಲಾ... ಮುಂದ ನಿನಗೂ ಯಿಂಥ ರಾಗ ಬಂದು ನಿನ್ನೆಂಡ್ನನಿನ್ನಿಂದ ದೂರಾಗ್ಲಿ” ಯಂದು ದೂರುವಾಸ ಮುನಿಯಂತೆ ಸಾಪ ಹಾಕಿದನೇ ಹೊರತು ತನ್ನ ಹೆಂಡರನ್ನು ವಾಚಾಮಗೋಚರವಾಗಿ ಬಯ್ಯುವ ಸಾಹಸಕ್ಕೆ ಮಾತ್ರಹೋಗಲಿಲ್ಲ. ರಾಜಸತ್ತೆ ನಷ್ಟಗೊಂಡ ಮ್ಯಾಲ ಅವರು ತಮ್ಮ ತಮ್ಮ ತವರುಮನೆಗಳಿಂದ ವಂದಲ್ಲಾ ಎಂದು ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದುದೇ ಕಾರಣ. ದೋಪರಯುಗದಲ್ಲಿ ದ್ರವುಪದಿಗೆ ಅಯ್ದು ಮಂದಿ ಗಂಡರಿದ್ದರೆ ಕಲಿಯುಗದಲ್ಲಿ ತನಗೆ ಅಚ್ಚು ಮಂದಿ ಹೆಂಡತಿಯರಿರುವ ಕಾರಣಕ್ಕೆ ತನ್ನನ್ನು ತಾನು ಪಂಚಾಲನೆಂದು ಕರೆಯಿಸಿಕೊಳ್ಳುತ್ತಿದ್ದ ಆತನು ಮುಂದೊಂದು ದಿವಸ ಪಗಡೆಯಾಟ ಆಡಲಕೆಂದು ಸಿಂಗನಮಲ ಯಂಬ ಗ್ರಾಮಕ್ಕೆ ಹೋಗಿದ್ದನು. ಅಲ್ಲಿ ಕುಂತಲ ಸೀಮೆ ಮಟ್ಟದ ಪಗಡೆ ಪಂದ್ಯಾಟವು ಯೇರು ಪಾಟಾಗಿತ್ತು. ಕುಶಲ ಆಟಗಾರನಾದ ಪಾಂಚಾಲನ ಯದುರಾಳಿಯು ತನ್ನ ಸೊಂಟದಿಂದ ವಂದು ಪಾತ್ರೆತೆಗೆದು ಪಣ ವಡ್ಡಿದನು. ಅದನ್ನು ನೋಡಿ ನಗಾಡುತ ಪಂಚಾಲನು “ಯಿದ್ಯಾವ ಸೀಮೇದು” ಯಂದು ಕೇಳಿದ್ದಕ್ಕೆ “ಯಿದು ಸಾಮಾನ್ಯ ಪಾತ್ರೆಯಲ್ಲ... ಯಿದು ಕುತಯುಗ ಕಾಲದಲ್ಲಿ ಹರಿಶ್ಚಂದ್ರನು ಶವುಚಕ್ಕೆ ಬಳಸುತ್ತಿದ್ದ.. ತ್ರೇತಾಯುಗದಲ್ಲಿ ರಾಮನೂ, ದ್ವಾಪರದಲ್ಲಿ ಕವುರವರೂ ತಮ್ಮ ಶವುಚ ಕಾರಕ್ಕೆ ಬಳಸುತ್ತಿದ್ದರು, ಕಲಿಯುಗದಲ್ಲಿ ಗಂಗ, ಕದಂಬ, ಚಾಲುಕ್ಯರಿಂದ ಹಿಡಿದು ವಿಜಯನಗರವನ್ನಾಳಿದ ರಾಜರು ಯದರೊಳಗಿನ ನೀರಿನಿಂದ ತಮ ತಮ್ಮ ದ್ವಾರಗಳನ್ನು ತೊಳೆದುಕೊಂಡು ಆರೋಗ್ಯ ಸಂಪಾದಿಸಿ ಕೊಂಡಿದ್ದಾರೆ. ಯೇನೆಂದು ತಿಳಿದುಕೊಂಡಿರುವಿ ಮೂಢಾs” ಯಂದು ಜಯುನಿವರೆಗೆ ಮೋದಿಕೊಂಡಿದ್ದ ಆತನು ಯಿವರಿಸಿದನು. ಆಗಿದ್ದು ಯೀತನು “ಸರೆ ಹಂಗಯೇನು ಯಿದ್ರಸಮಾಸ್ಕಾರss... ಯಿದು ನಿನ್ನತ್ರಹೆಂಗ ಬಂತು?” ಯಂದು ಪ್ರಶ್ನೆ ಹಾಕಿದ್ದಕ್ಕಾತನು ನಮ್ಮ ಮನೆತನ ಯಂಥಾದ್ದು? ಯೇನುಕಥೆ? ನಾವು ಗುರೂಂ ಮನೆತನದವರು. ನಮ್ಮ ಗಿರಿ ಮುತ್ತಾತ ಹಯವದನನು ದೂರ ದೂರದ ದೇಶಗಳಿಂದ ಸಾವಿರ ಗಟಲೆ ಜಾತಿ ಕುದುರೆಗಳನ್ನು ತರಿಸಿ ಮೋರಂಗಲ್ಲನ್ನಾಳುತ್ತಿದ್ದ ಕಾಕತೀಯ ರಾಜರಿಂದ ಹಿಡಿದು ದಖ್ಯನದ ಮಲಬಾರಿ ಅರಸರವರೆಗೆ ಸರಬರಾಜು ಮಾಡುತ್ತಿದ್ದನು. ಪತ್ತಿಕೊಂಡವನ್ನಾಳುತ್ತಿದ್ದ ವೀರಾಜು ಪಾರಿತೋಷಕ ರೂಪದಲ್ಲಿ ಹೊದನ್ನು ಕೊಟ್ಟಿದ್ದನು.. ತಿಳಿತಾ... ನೀನು ನಗಾಡಿದಲ್ಲಿ mದರೊಳಗಿರುವ ಶಕ್ತಿ ಮಾಯವಾದೀತು, ಯಚ್ಚರಿಕೆ, ಹೊದರೊಳಗೆ ಮಾಂಯರೂಪದಲ್ಲಿ ವಾಸಿಸುತ್ತಿರುವ ಅಶ್ವಿನಿ ದೇವತೆಗಳ ಕೋಪಕ್ಕೆ