ಪುಟ:ಅರಮನೆ.pdf/೬೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೦ ಅರಮನೆ ಕಂಡು ಮಣ್ಣೂ ಹಿಂಗ ಸಚರಾಚರವು ಸಕಾರಣವಾಗಿಯೋ, ಯಿನಾ ಕಾರಣ ವಾಗಿಯೋ ಭಯವನ್ನು ಬಿತ್ತಿ ಭಯವನ್ನು ಬೆಳೆಯ ತೊಡಗಿದ್ದರ ಕುರುತು ಯೇನು ಹೇಳಲಿ ಸಿವನೇ.... ಮನೋ ಸಾಹೇಬನು ವರಮಾನಕ್ಕಿಂತ ಭೂತಕಾಲವನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದೆಂದೂ ತಾನು ನಂಬಿದ್ದ ಜನರನ್ನು ವರಮಾನದ ಕಡೇಕ ಪ್ರಜೆಗಳ ಮುಖವನ್ನು ತಿರುಗಿಸಲಕೆಂದೇ ತಾನು ಹಿಂದೆ ಹಲವು ಸಲ ಕಠೋರ ನಿಲ್ದಾರ ಕಮ್ಮಿಕೊಂಡಿರುವುದುಂಟು. ಪ್ರಜೆಗಳು ವಯಗ್ರಾನಿಕವಾಗಿ ಆಲೋಚಿಸುವಂತೆ ಮಾಡಲು ತಾನು ಅನೇಕಾನೇಕ ಕಾರಕ್ರಮಗಳನ್ನು ಕಮ್ಮಿಕೊಂಡಿರುವುದೂ ವುಂಟು. ಸಮುದ್ರದೊಳಗೆ ಪ್ರಯಾಣ ಮಾಡಿರುವ ತಾನೇ ಸದರಿ ಯಿಂಡಿಯಾದ ಅಸ್ಪ ಶ್ಯರಿಗೇ ಅಸ್ಪ ಶ್ಯನು ಯಂದ ಬಳಿಕ ವುಳಿದವರ ಪಾಡೇನು?.. ಸದರಿ ಯಿಂಡಿಯಾ ವನ್ನು ಭೂತಗನ್ನಡಿಯ ಮೂಲಕ ನೋಡಿದರೇನೇ ಛಂದ ಯಂದು ತಾನು ನಿರರಿಸಿದ್ದೇನೋ ವುಂಟು. ಆದರೆ ಕುಂಪಣಿ ಸರಕಾರದ ಪ್ರಭುತಿಗಳು ಸುಮ್ಮನಿರಬೇಕಲ್ಲ.. ತಾನು ತನ್ನ ಅಭಿಪ್ರಾಯವನ್ನು ಅಯಿಫಿನ್ ಸೈನ್ ಸಾಹೇಬನ ಯದುರಾಗಲೀ, ರೀಡನ ಯದುರಾಗಲೀ ಯ್ಯಕ್ತಪಡಿಸಲು ಯಂದೂ, ಯಾವತ್ತೂ ಹಿಂಜರಿದುದಿಲ್ಲ. ವಟ್ಟಿನಲ್ಲಿ ಬಂಕಿಂಗ್ ಹ್ಯಾಮ್ ಅರಮನೆಯ ವಂದು ಮೂಲೆಯು.. ಕೇಳೀರಿ ಕಿವಿಗೊಟ್ಟು ಕೇಳಿರಿ, ಪವುರಾತ್ಯ ದೇಸಗಳ ತೂಕ ವಂದೇ.. ಯಿಂಡಿಯಾದ ತೂಕವಂದೇ.. ಭೂತಕಾಲವನ್ನು ಮೂಲೋತ್ಪಾಟನ ಮಾಡಿದಾಗಲೇ, ವರಮಾನ ಪ್ರಜ್ವಲಿಸಿದಾಗಲೇ ಯಿಂಡಿಯಾಕ್ಕೆ ಕುಂಪಣಿ ಸರಕಾರದ ಮ್ಯಾಲ ಪ್ರೀತಿ ಬರಲಕ ಸಾಧ್ಯ. ಆದ್ದರಿಂದಾಗಿ ಯಲೈ ಅಧಿಕಾರಿಗಳೇ ಭೂತಕಾಲದ ಕುರುಹುಗಳನ್ನು ನಿಶ್ಚಿಡೆಯಿಂದ ಹೊಸಕಿ ಹಾಕಿರಿ, ಸೋಮಪಾನ ಮತ್ತು ಮದ್ಯಪಾನದ ನಡುವಿನ ಯತ್ಯಾಸವನ್ನು ಸಮಾನ್ಯ ಪ್ರಜೆಗಳಿಗೆ ಅಲ್ಲ ಮಾಡಿಕೊಡಬೇಕು. ವಾಮಮಾರ ಹಿಡಿದಾದರೂ ನೀವು ಬ್ರಿಟೀಷ್ ಜೀವನ ಸಯ್ದೆಯನ್ನು ಯಿಂಡಿಯಾದ ಮ್ಯಾಲ ಯಷ್ಟು ಸಾಧ್ಯವೋ ಅಷ್ಟು ಹೇರಬೇಕು. ತಪ್ಪು ಅಥವಾ ಪಾಪಮಾಡಿದಲ್ಲಿ ಕ್ಷಮಿಸಲಕೆಂದೇ ಯೇಸುಕ್ರಿಸ್ತ ಅದಾನೆ. ಆದ್ದರಿಂದ ಪಾಪ ಪುಣ್ಯಗಳ ಕುರಿತು ಯೋಚಿಸಬ್ಯಾಡಿರಿ, ಯಂದು ಮುಂತಾಗಿ ಭಿತ್ತರ ಮಾಡಿ ಬಿಡಬೇಕೆ? ಆ ನಿರಂಕುಸರಿಗೇನು ಗೊತ್ತು ಯಿಂಡಿಯಾ ಅಂದರೇನೆಂಬುದು? ಯಿಂಡಿಯಾದೊಳಗೆ ಮನುಕುಲವು ನಿಸರದೊಂದಿಗೆ