ಪುಟ:ಅರಮನೆ.pdf/೬೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೦೩ ಸಾಧ್ಯಯಿರಲಿಲ್ಲ ಅಂಥಾದ್ದರಾಗ ಮಂಗಣ್ಣವು ಅಗೋ ಅಲ್ಲಿ ಮನದನ್ನೆ... ಪ್ರಿಯತಮೆಯು ಯಂದು ವುದ್ದರಿಸಿದ್ದೂ ಅಲ್ಲದೆ ಜಿಗಿದಾಕೆಗೆ ಅಂಟರುಗಾಲನ ಹಾಕಿ ಅಂಟರು ಪುಳುಕಿ ಹಾಂಗ, ಜೀವಾತುಮಪರಮಾತುಮಗಳು ತಮಗ ತಾವ ಅಯಿಕ್ಯಗೊಂಡಂಗ.. ಆದರ ವಟ್ಟಿನಾಗ ಪ್ರೇಕ್ಷಕ ರುಂದದೊಳಗ ಅಪಾರ ಸಂಖೆಯಲ್ಲಿದ್ದ ಆಸ್ತೀಕರಿಗೆ, ಅದರಲ್ಲೂ ಮುಖ್ಯವಾಗಿ ಆಂಜನೇಯ ಸ್ವಾಮಿಯ ಪರಮ ಭಕುತಾದಿಗಳಿಗೆ, ಆ ದ್ರುಶ್ಯ ವನ್ನು ತಮ್ಮ ಕಣ್ಣುಗಳಿಂದ ಅರಗಿಸಿಕೊಳ್ಳಲಾಗಲಿಲ್ಲ.. ಆ ಸುದ್ದಿಯನ್ನು ಕಿವಿಗಳಿಂದರಗಿಸಿಕೊಳ್ಳ ಲಾಗಲಿಲ್ಲ.. ಅಖಂಡ ಬ್ರ ಮಾಚಾರಿಯೂ, ಶ್ರೀರಾಮದೇವರ ಪ್ರಾಣದೇವರೂ ಆದಂಥ ತಮ್ಮ ಭಜರಂಗ ಬಲಿಯು ಯಕಃಶ್ಚಿತ್ ಚಿನ್ನಾಸಾನಿಗೆ ಮನಸೋತು ಬಿಟ್ಟಿತಲ್ಲಾ... ತಮ್ಮ ನಂಬಿಕೆ ಮಣ್ಣುಗೂಡಿ ತಲ್ಲಾ... ಯಂದು ಹಲುಬುತಿದ್ದುದ್ದು ಸಾಮಾನ್ಯ ದ್ರುಶ್ಯವಾಗಿತ್ತು. ಅವರ ಯದೆಯೊಳಗಿದ್ದ ಭಕುತಿಯು ಕೋಪದ ಕಿರೀಟ ಧರಿಸಿತ್ತು... ಯಲಾ ಹಿಂದೂ ಧರುಮ ದ್ರೋಹಿಗಳಾದ ವಪ್ಪತ್ತಯ್ಯಾ.. ತಿಕ್ಕಡಾss ಯಂದು ಕೋಪಾಯೇಸದಿಂದ ಕೂಗುವಂತೆ ಮಾಡಿತ್ತು (ತಮ್ಮ ಆರಾಧ್ಯದವರ ಪ್ರಾಣಿ ರೂಪಕ್ಕೆ ಹೆನ್ರಿಯಂಬ ಕಿರಸ್ಕಾನನ ಹೆಸರನ್ನು ಯಿಡುವುದೆಂದರೇನು ರಾಮ.. ರಾಮಾ... ಆ ನಂತರವೇ.. ಅವರೆಲ್ಲ ಕೋಪದ ಭರದಲ್ಲಿ ಯೇನೇನು ಮಾಡಿದರಪ್ಪಾ.. ಸಿವ ಸಿವಾ.. ಅವರೆಲ್ಲ ಮಾಡಿದ ದಾಂಧಲೆಯು ಅಸಾಧಾರಣವಾಗಿತ್ತು. ಪ್ರಾಯೋಜಕ ವಪ್ಪತ್ತಯ್ಯನನ್ನು, ಮಾಲಕ ತಿಕ್ಕಡ ದಂಪತಿಗಳನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಲ್ಲದೆ ತಾವೇ ಪಂಚಾತಿ ಮಾಡಿ ತಪ್ಪುದಂಡ ಕಟ್ಟಿಸಿಕೊಂಡು ಅವರನ್ನು ಮೂರು ಬಿಡಿಸಿದರು. ಅವರೊಳಗ ವಡಕರಾಯಗೋಪುರ ಜೀರೋದ್ದಾರ ಸಮಿತಿಯೂ ವಂದಿತ್ತಲ್ಲ.. ಅವರು ದಯದ ಸೇವಾಕಯಂಕಯ್ಯಾರವಾಗಿ ತಾಯಕ್ಕನ ಮನೆಗೆ ಹೋಗಿ ಯಿಂಥಿಷ್ಟು ರೊಕ್ಕ ಪಾವತಿಮಾಡಿ ರಸೀದಿ ಪಡೆಯಬೇಕು, ಯಿಲ್ಲವಾದಲ್ಲಿ ಮಂಗಣ್ಣನನ್ನು ತಮಗೆ ತಪ್ಪಿಸಬೇಕೆಂದು ಜಬರದಸ್ತಿನಿಂದ ಕೇಳಿದರು. ವಗಿವಗಿಹೇಳಿ ರೂಪಾಯಿ ಕೊಡುವಲ್ಲಿ ಹತ್ತಾಣೆ ಭಾಗದಷ್ಟು ಕೊಟ್ಟು ಕಳುಹಿಸುವಲ್ಲಿ ಯಶಸ್ವಿಯಾದಳು ಸಿವನೇ.... - ಸದರಿ ಪಟ್ಟಣದಲ್ಲಿ ಚಿನ್ನೋಬುಳ ನರಸಿಂಹ ಸ್ವಾಮಿಯೇ ಯಂದು ಯಂಕೋಬಸಾಸ್ತ್ರಿಗಳು ಸಾಲಿಗ್ರಾಮವನ್ನು ಮುಟ್ಟಿ ನಮಸ್ಕರಿಸುವುದಕ್ಕೂ ಹಂದರಾವಳಿತದಲ್ಲಿದ್ದ ತಮ್ಮ ದೀನ ಬಂಧು ವೆಂಪಾಟಿ ಯವರಿಂದ ವಂದು