ಪುಟ:ಅರಮನೆ.pdf/೬೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೪ ಅರಮನೆ ಸುದೀರ ಪತ್ರವನ್ನು ಹೊತ್ತು ಗರುಡ (ಪಾರಿವಾಳವದರ ಹೆಸರು) ಹಾರಿಬಂದು ತಮ್ಮೆದುರು ಕೊಡುವುದಕ್ಕೂ ಸರಿಹೋಯಿತು. ಲಗು ಬಗೆಯಿಂದ ಬಿಚ್ಚಿಕೊಂಡರು... ಕಣ್ಣೆದುರಿಗೆ ಹರಡಿ ಹಿಡಿದುಕೊಂಡರು. ಕಯ್ಯಬರಹದ ಸುದೀರ ವಕ್ಕಣಿಕೆ ಅದರಲ್ಲಿತ್ತು. ಯಿಲ್ಲಿ ಯೇನು ಜರುಗಿತ್ತೋ ಅದು ಅಲ್ಲೂ ಜರುಗಿತ್ತು. ಥಾಮಸು ಮನೋ ಮುಂದೊಂದಿವಸ ಶ್ರೀವಯಿಷ್ಣವ ಧರುಮಕ್ಕೆ ಮತಾಂತರಗೊಳ್ಳಲಿರುವನೆಂಬ ಸೂಚನೆಯೂ ಅದರಲ್ಲಿತ್ತು. ವೆಂಪಾಟೆಯವರು ಮನೋನು ಜನುಮ ತಾಳಿರ ಬೌದಾದ ನಕ್ಷತ್ರತಿಥಿ ವಾರ ಕರಣಗಳನ್ನು ಮೋಹಿಸಿ ಯಿಂಥ ಅಲ್ಲೋಲ ಕಲ್ಲೋಲದಾಯಕ ನಿಲ್ಲಯಕ್ಕೆ ಬಂದಿದ್ದರು. ಮತಾಂತರ ಸಂಬಂಧೀ ಯಿದಿ ಯಿಧಾನ, ಸಾಧಕ ಬಾಧಕಗಳ ಬಗ್ಗೆ ಯಿವರಣೆ ಆಪೇಕ್ಷಿಸಿದ್ದರು. ಯಿಂಥದ್ದೊಂದು ಅತಿಮಾನುಷವೂ, ಅಲವುಕಿಕವೂಆದ ಘಟನ ಕುಂತಳ ಪ್ರಾಂತದಲ್ಲಿ ನಡೆಯಿತೇ? ನಡೆದಿದ್ದಲ್ಲಿ ಸಾಮಾಜಿಕರ ಸ್ಥಿತಿಗತಿಗಳೇನು? ಹೆನ್ರಿಯ ಯಕ್ತಿತ್ವದಲ್ಲಿ ಹಿಂದೂ ಪರ ವಲವುಗಳು ಗೋಚರವಾಗಿರುವವೇ? ಆಗಿದ್ದಲ್ಲಿ ಆತ ತಮ್ಮ ಸೀ ವಯಷ್ಣವ ಮತಾವಲಂಭಿಯಾಗ ಬೌದೇ? ವಯಿಷ್ಟವ ಧರುಮದ ಪುನರುತ್ಥಾನಕ್ಕೆ ಹೆನ್ರಿನೇತ್ರುತ್ವದ ಸರಕಾರ ಯಾವ ಯಾವ ಕಾಠ್ಯಕ್ರಮ ಗಳನ್ನು ಹಮ್ಮಿಕೊಳ್ಳಲಿರುವುದು.. ವಗಿವಗಿ.. - ಅತಿಮಾನುಷ ಶಕ್ತಿಯನ್ನು ವಳಗೊಳಗೇ ಶ್ಲಾಘಿಸಿದ ಸಾಸ್ತ್ರಿಗಳು ತಾವಂದು ಸುದೀಧ್ವ ಪತ್ರವನ್ನು ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು. “ಹಅಂತರತ ಮಟಸ್ಯ: ಮರಟಂತರಸ್ಯಾ ಹೆನ್ರಿ?” ಅದು ಸಾದ್ಯಂತ ಮುಂದುವರಿದಿತ್ತು. ವಾಹಕ ತರಲೆಂದು ಸೇವಕನನ್ನು ಕಳಿಸಿದರು. ಸಾಸ್ತ್ರಿಗಳ ಪತ್ರವನ್ನು ಕಾಲಿಗೆ ಕಟ್ಟಿಸಿಕೊಂಡು ಗರುಡ ರೆವ್ವನೆ ಹಾರಿತು.. ಅದು ಹಾರೂತ ಆಕಾಸದ ಹೆಬ್ಬಯಲೊಳಗ ಚುಕ್ಕಿಯಾಗಿ ಕರಗುವ ತನಕ ನೋಡೂತ ಸಾಸ್ತ್ರಿಗಳು ನಿಂತಿರುವಾಗ್ಗೆ..... ಅತ್ತ ಕಳ್ಳ ಕಾಕರ ಮುಖಂಡನಾದ ಸಂಭುಗನು ತನಗೆ ಬೇಕಾದ ಮಂದೀನ ಕರಕೊಂಡು, ಬೇಕಾದ ಹತಾರಗಳನ್ನು ತಗೊಂಡು ವಾರ ದಿನಮಾನ ಮೇದು ಬಲಿತಿದ್ದ ಕತ್ತೆಗಳ ಮ್ಯಾಲ ಕೂಕಂಡು ಪ್ರಯಾಣ ಹೊಂಟಾss ಹೊಂಟಾss ಹೊಂಟೇ ಬಿಟ್ಟನು... ಅತ್ತ ಆಕಾಸ ರಾಮಣ್ಣನು ಬಲಗಯ್ಲಿ ತಂಬೂರಿ, ಯಡಬಗಲಲ್ಲಿ ಜೋಳಿಗೆ, ಪಾದದಡಿ ಪಾವುಡ, ತಲೆ ಮ್ಯಾಲ ಪಗಡ, ಹಣೆ ಮ್ಯಾಲ