ಪುಟ:ಅರಮನೆ.pdf/೬೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೦೭ ನೋಡಲಾಗುತ್ತಿದೆ.. ಸಿಂಗಮನಾಯಕನ ದೇಹಾಂತ್ಯದ ನಂತರದ ವರುಷಗಳಲ್ಲಿ ಹಿಂದಿನ ಬಿಗುವು ವುಳಿಯಲಿಲ್ಲ. ನಗದು ಬಹುಮಾನ ಪ್ರಸಸ್ತಿಗಳ ದುರಾಸೆ ಯಿಂದಾಗಿ ಗಡ್ಡ ಮೀಸೆಗಳನ್ನು ವುಪಾಯಾಂತರದಿಂದ ಕದಿಯುವವರ, ಲಂಚರುಷುವತ್ತು ನೀಡಿ ತಮ್ಮ ವಂದು ಮೊಳ ಗಡ್ಡಕ್ಕೆ ಮೂರು ಮೊಳಯಂದು ನ್ಯಾಯಾಧೀಶರಿಂದ ಪ್ರಮಾಣ ಪತ್ರತರುವವರ ಹಾವಳಿ ಯಿತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅಪಾತ್ರರೂ, ಅಯೋಗ್ಯರೂ ಯಿಜ್ರಂಭಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿರುವುದು. ವಂದು ವುದಾಹರಣೆ ಹೇಳಲಕಂದರೆ ತಾನು ಪ್ರಧಾನಮಂತ್ರಿಗುರುವಯ್ಯನ ಮೊಮ್ಮಗಯಂಬ ಕಾರಣದಿಂದ ಸತ್ಯರಾಜು ತನ್ನ ಕ್ರುತಕ ಗಡ್ಡ ಮೀಸೆ ಗೆ ಚಿನ್ನದ ಪದಕ ಮತ್ತು ಹತ್ತು ಸಹಸ್ರಗದ್ಯಾಣಗಿಟ್ಟಿಸಿಕೊಂಡ ಯಂದರೆ ನೀವೇ ಊಹಿಸಿಕೊಳ್ಳಿ. ಯಿರಲಿ.. ಯಿದೆಲ್ಲ ಹೇಳುತ್ತ ಹೋದರೆ ಮೀಸೆ ಗಡ್ಡದ್ದೇ ದೊಡ್ಡ ರಾಮಾಯಣ ಆದೀತು. ಚಿನ್ನೆಂಕಟಾಪುರದಿಂದ ಬೆಳೆಗೆ ಹೊಂಟ ಆಕಾಸರಾಮಣ್ಣಾವಧೂತರು ಅಯಿಸಲದ ಕೊಂಡಾರೆಡ್ಡಿ ಬುರುಜಿನ (ಕೊಂಡಾರೆಡ್ಡಿ ಯೀ ಬುರುಜು ಕಟ್ಟಿಸಿದ್ದರ ಹಿಂದೆ ಬಹುದೊಡ್ಡ ಕಥೆ ಯಿರುವುದು... ನನಿಹಕ್ಕೆ ಬಂದಾಗ ಮಟಮಟ ಮದ್ಯಾಣವಾಗಿತ್ತು. ಬೀದಿ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನೆಲವನ್ನು ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ಶ್ರೀ ಶ್ರೀ ಶ್ರೀ ಆಕಾಸರಾಮಣ್ಣಾವಧೂತ ಮಹರಾಜರಿಗೆ ಸುಸ್ವಾಗತ ಎಂಬ ತ್ರಿವರಕ್ಕಸರಗಳಿದ್ದ ಪಲಕಗಳನ್ನು ಯಲ್ಲಂದರಲ್ಲಿ ತೂಗು ಬಿಡಲಾಗಿತ್ತು... ನೂರೊಂದು ತರುಣಿಯರು ತಮ್ಮ ತಮ್ಮ ತಲೆ ಮ್ಯಾಲ ದೂರ ಕುಂಭಗಳನ್ನು ಹೊತ್ತು ನಿಂತಿದ್ದರು. ಡೊಳ್ಳು ಹಲಗೆ, ತಮ್ಮಟೆ, ವಾಲಗ, ವಾದ್ಯಗಳು ವಂದೇ ಯರಡೇ ಸಿವ ಸಿವಾss.. ಪ್ರತಿಯೊಬ್ಬರ ಮುಖದ ಮ್ಯಾಲೂ ಪಯಿಪೋಟಿಗೆ ಬಿದ್ದು ಛಲದಿಂದ ಬೆಳೆ ಬೆಳೆಯುತ್ತಲೇ ಯಿರುವ ಗಡ್ಡ ಮೀಸೆಗಳು, ಅವದತರದ ಸ ಹ ಅವರಿಗಿಂತ ಕಡಿಮೆಯೇನಿರಲಿಲ್ಲ... ದಯವಾನುಗ್ರಹದಿಂದಾಗಿ ವರುಸೊಪ್ಪತ್ತಿಗೆ ಬರ ಬೇಕಾಗಿದ್ದ ಬೆಳೆ ಮೂರು ನಾಕು ತಿಂಗಳಿಗೇನೆ ಪುಷ್ಕಳವಾಗಿ, ವಯಿವಿದ್ಯಮಯವಾಗಿ ಬೆಳೆದು ಯಷ್ಟು ಸಾಧ್ಯವೋ ಅಷ್ಟನ್ನೂ ಮರೆಮಾಚಿಬಿಟ್ಟಿತ್ತು. ಆಸ್ತಿಕ ಭಾವದ ಗ್ರಾಮಸ್ಥರು ಮಂತ್ರಮುಗ್ಧರಾದರು, ಸೂಕ್ತ ಕುಂಭಗಳ ಸ್ವಾಗತ ನೀಡುತ ಕರೆದೊಯ್ದರು.. ಯೇರುಪಾಡು ಮಾಡಿದ್ದ ಬಿಡದಿ ಮನೆಗೆ...