ಪುಟ:ಅರಮನೆ.pdf/೬೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೪ ಅರಮನೆ ಕಲೆಕ್ಟರು ಸಾಹೇಬಗೆ ಮನವರಿಕೆ ಮಾಡಿದ್ದುಂಟು. ತಿಯ ಕೆಲವು ಮುಖ್ಯ ಶ್ಲೋಕಗಳ ಅಗ್ಗವನ್ನು ತಮ್ಮ ಹರಕು ಮುರುಕು ಇಂಗಲೀಸುಗುಂಟು ಯಿವರಿಸಿರುವುದೂ ವುಂಟು? ಆದರೇನು ವುಪಯೋಗ? ತಮ್ಮ ಕಿವಿ ತಮಟೆ ಮ್ಯಾಲೆ ಬರೆ ಹಾಕಿದಂತೆ ಜಾತಿ ಯಿನಾಸದ ಬಗ್ಗೆ ಮಾತಾಡುತ್ತಿರುವನಲ್ಲ.. ಕ್ಷುದ್ರದೇವತೆಗಳನ್ನೂ ಅವುಗಳ ಕಿಲುಬು ವಾರಸುದಾರರನ್ನೂ ತನ್ನ ಬಳಿ ಸುಳಿಯಲು ಆಸುಪದ ಮಾಡಿಕೊಟ್ಟು ಹೆಗಲೇರಿಸಿ ಕೊಳ್ಳುವ ವುಪದ್ರಕ್ಕೆ ತೊಡಗಿರುವನಲ್ಲ... ಯೋಚಿಸುತ್ತಾ? ಯೋಚಿಸುತ್ತಾ ಸಾಸ್ತಿದ್ವಯರು ಕುಂತಲ್ಲಿ ಕುಂದರಧಾಂಗಾಗಿದ್ದರು ಸಿವನೇ.. ನಿಂತಲ್ಲಿ ನಿಂದುರದಂಗಾಗಿದ್ದರು ಸಿವನೇ.. ಅವರಿಗೆ ಮನೋ ಹಿಂದೂ ಧರುಮಕ್ಕೆ ಮತಾಂತರವಾಗುವುದು ವತ್ತಟ್ಟಿಗಿರಲಿ.. ಅವರ ಚಿಂತೆ ಯೇ ತೆರನಿದ್ದರೆ.. ಅವರ ಕಯ್ಯಲ್ಲಿದ್ದ ರಾಣಿಯು ತನ್ನ ಪ್ರಿಯತಮ ಗರುಡನಿಗಾಗಿ ಯದುರು ನೋಡುತಲಿತ್ತು. ಅತ್ತ ಗರುಡ ಬಡಗಣಾಭಿಮುಖಿ ಯಾಗಿ ಹಾರುತಾರುತಾ ಹೋಗುತ್ತಿರಬೇಕಾದರೆss... ಬಂತುಲು ತುಂಬುವ ಬರಲು ಬಿಸಿಲ ಗುದುರೆಗಳ ಆಡೊಂಬಲವಾಗಿತ್ತು? ನೆಳ್ಳುಯಂಬುದು ಭಾಗ್ಯವಾಗಿತ್ತು? ದಣುವಿನ ತವರು ಮನೆಯಾಗಿತ್ತು? ಸಚರಾಚರಗಳು ಸುಟ್ಟು ಕರಕಲಾಗತೊಡಗಿದ್ದವು. ಹಾರುವ ರೆಕ್ಕೆಯೊಳಗೆ ಕಾಣಿಸಿಕೊಂಡ ದಣುವಿನ ಪರಿಹಾರಾರವಾಗಿ ಗರುಡ ತಾನೆಲ್ಲಾದರೂ ವಂಚೂರು ಮಿಶ್ರಮಿಸಿಕೊಂಡು ಹೊತ್ತಿಳಿಯುತ್ತಲೇ ಪ್ರಯಾಣ ಮುಂದುವರಿಸಿದರಾಯಿತೆಂದು ನಿಶ್ಚಯಿಸಿ ಸುಯ್ಯಂತ ಧರೆಗಿಳಿಯಿತು. ಯಲ್ಲಯ್ತಪ್ಪಾ ಎಂದು ಮರ? ಯಲ್ಲಯ್ಯಪ್ಪ ವಂದು ಗಿಡ..? ಕುಡಿದು ಬಾಯನ್ನು ವದ್ದೆ ಮಾಡಿಕೊಳ್ಳಲಕ ಯಲ್ಲದವೆ ಎಂದು ಬೊಗಸೆ ನೀರು? ತಿಂದು ಹಸುವು ತೀರಿಸಿಕೊಳ್ಳಲಕ ಯಲ್ಲದವೆ ಕಾಳು ಕಡಿ, ಹುಳುಪ್ಪಡಿ? ಅದುಂಟೆಂತೆಂದರೆ ಯಿದಿಲ್ಲ.. ಯಿದುಂಟೆಂತಂದರೆ ಅದಿಲ್ಲ? ಹುಡುಕ್ಕೋತ ಹುಡುಕ್ಕೋತ ಅಲೆದಾಡಲಾರಂಭಿಸಿತು. ಚಾವತ್ತು ಕೂಕಂಡು ದಣುವಾರಿಸಿಕೊಳ್ಳಲಕ ವಂಚೂರು ನೆಳ್ಳು ಕೊಡವ್ವಾ.. ಪುಣ್ಯ ಬರತಯೆಯಂದಿದು ಕೇಳಿದ್ದಕ್ಕೆ ಆ ಕಾಕವ್ವ ನೀನು ಬಂಗಾರ ಕೊಡುತೀನಂದರೆ ನೆಳ್ಳು ಕೊಡಲ್ಲಪ್ಪಾ.. ನಮದೇ ನಮಗ ಮತ್ತು ಆಗಯ್ತಿ ಮುಂದಕ ಹೋಗಪ್ಪಾ” ಯಂದು ಹೇಳಿದಳು.. ಅದು ಹಾಂಗ ಮುಂದಕ ಹೋಗಿ “ಬಾಯಿ ತ್ಯಾವ ಮಾಡಿಕೊಳ್ಳಲಕ ವಂದುಗುಟುಕು ನೀರು.. ನಮಲಲಕ ವಂದು ತುತ್ತು ಪರಸಾದ ಕೊಡುತಿ ಯೇನವ್ವಾ ಪುಣ್ಯ ಬರುತಯ್ದೆ”