ಪುಟ:ಅರಮನೆ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಆಗ ಅವರ ಬಾಯಿಯಂಬ ಬೀಜ ಮೊಳಕೆ ಹೊಡೆಯಲು ಅದರ ಸುಳಿ ವಳಗೆ ಮೋಬಯ್ಯ ಯಂಬ ಆಕ್ರುತಿಯು ರುದ್ರೋಚರವಾತು ಸಿವಸಂಕರ ಮಾದೇವಾss.. “ಹಾಂ.. ವಬ್ಬ ಯಕಃಶ್ಚಿತ್ ಪಿಕದಾನಿ ಹಿಡಿಯೋನು ರಾಜಾಗ್ನೆಯನ್ನು ದಿಕ್ಕಾರ ಮಾಡಿದನೇನು? ಅವನಿಗೆ ತಕ್ಕ ಸಾಸ್ತಿ ಮಾಡಬೇಕು” ಯಂದು ಗುಡು ಗುಡಿಸುತ್ತ ಮುಂದ ಮುಂದ ಕಾಟಯ್ಯ.. ಹಿಂದ ಹಿಂದ ಆ ಮಾನವ ರೂಪಿ ಅರಮನೆಯ ಆಧಾರ ಸ್ತಂಭಗಳು.. ಮೊದಲಿನಿಂದಲೂ ಆಟೇಯಾ, ಮೋಬಯ್ಯನು ಅವರಾರಿಗೂ ಆಗಿ ಬರಾಣಿಲ್ಲ.. ಪಿಕದಾನಿಯೇ ತನ್ನ ರುದಯ ಕಲಸ ಯಂದು ಭಾವಿಸಿ ರಾಜನಿಷೆ«ಯಿಂದ ಅರಮನೆಯ ಸೇವೆ ಮಾಡುತ್ತಿದ್ದ ಮೋಬಯ್ಯ ಯಂಬ ಪ್ರಣವಾಕ್ಷರಗಳನ್ನು ಅವರೆಲ್ಲ ತಮ್ಮ ತಮ್ಮ ಬಾಯೊಳಗೆ ಜಮಡುತ ನಮಲುತ್ತ... ಅರಮನೆಯ ದಿವಾನ ಖಾಸಾದೊಳಗ ಯಪ್ಪತ್ತೊಂಬತ್ತರ ಹರೆಯದ ರಾಜಮಾತೆಯು ಯಿಪ್ಪತ್ತರ ಹರೆಯವನ್ನು ಹಾ... ಹೂ ಅಂತ ಆವಹಿಸಿಕೊಳ್ಳುವ ಯತ್ನವ ಮಾಡುತಲಿದ್ದಾಳೆ.. ಥಳಗೇರಿಯಿಂದ ಬರುತಲಿದ್ದ ವಂದೊಂದು ವರಮಾನವು ಕಾದ ಸೀಸದೋಪಾದಿಯಲ್ಲಿ ಆಕೆಯ ಕಿವಿಯಲ್ಲಿಳಿತಾ ಅದೆ.. ರಾಜಪರಿವಾರದೋರು ಅಲ್ಲಿ, ಮಳಿಗದೋರು ಯಿಲ್ಲಲ್ಲಿ ಗಪ್ ಚುಪ್ಪಾಗಿ ನಿಂತವರೆ ಕುಂತವರೆ, ಅಲ್ಲೆ ಅನತಿ ದೂರದಲ್ಲಿದ್ದ ಸಿಮಾಸನದ ಮ್ಯಾಲ ಮಾರ್ಜಾಲ ಮೊಂದು ಹೆಬ್ಬುಲಿಯೋಪಾದಿಯಲ್ಲಿ ರಾಜನಿದುರೆ ಮಾಡುತಲಿದೆ. ಅದರ ವಡಲ ಗುರುಗುರು ನಿನಾದಕ್ಕೆ ಸಿಮಾಸನದ ಅಂಗೋಪಾಂಗಗಳು ಕಂಪಿಸುತ್ತಿವೆ. ಅವುದೋ ಅಲ್ಲವೋ ಯಂಬ ನಿಷ್ಪತ್ತಿಯಲ್ಲಿ ಅದು ಹಿಂದಕು ಮುಂದುಕು ವಾಲಾಡುತಲದೆ... ಆಕೆಯ ವುಸುರಾಟದೊಳಗೆ ಮೊಬಯ್ಯ ಮುಡು ಮುಡನೆ ಮೂಡತಲವನೆ, ಮುಳು ಮುಳುನೆ ಮುಳುಗತಲವನೆ, ಮಾತಿನ ಸಿಮುಟಿಗೆ ಸಿಲುಕದೆ ಪುಸಕ್ಕಂತವನೆ... ಅಲಲಲಾ ಮೋಬಯ್ಯ ಎಂದು ಹಲ್ಲು ಮೂಡದ ಮೊಲದಂಗಿದ್ದೆಲ್ಲಾ.. ಅರಮನೆಯ ತೊಂಬಲವ ತುಂಬಿ ಕೊಂಡಿರೋ ಸರೀರವುಳ್ಳವನೇ.. ಮಯ್ಯೋಳಗ ಎಂದು ನಮೂನಿ ಆಗತಂತ ಹೋದಾತ ಅತ್ತಾಗೆ ಹೋದೆಲ್ಲಾ... ಯಂದನಕಂತ ರಾಜಮಾತೆ ಯಲ್ಲಾರಿಗೂ ಕೇಳಿಸುವಂತೆ ಕಾಟಯ್ಯನಿಗೆ ಯೀ ಪ್ರಕಾರವಾಗಿ ಯೇನು ಹೇಳಿದಳೆಂದರೆ.... “ಅಯಾs ರಾಜಕುಮಾರಾss.. ಕುಂಪಣಿಮಂದೀಗೆ ಅರಮನೇಲಿ