ಪುಟ:ಅರಮನೆ.pdf/೬೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರುದ್ಧ ಸಿಪಾಯಿಯು ಆಗಂತುಕರು ಕುದುರೆಡವು ಮೂಲದವರೆಂದು ಕೇಳಿ ತಿಳಿದು ಸರೀರ ಸವುಷವ ಮಾತ್ರದಿಂದ ತಾನು ವಹಿಸಿದ್ದು ಖರೇವಾಯಿತೆಂದು ತನಗೆ ತಾನೇ ವುಬ್ಬುತ್ತ ಅರಮನೆಯಂ ಮೊಕ್ಕು ನಿಮ್ಮ ನಿಮ್ಮ ಶಕ್ತಾನುಸಾರವಾಗಿ ಅರಸನನ್ನು ಹುಡುಕಿಕೊಳ್ಳಬೌದೆಂದು ಹೇಳಿ ಅವರ ಪಾಡಿಗೆ ಅವರನ್ನು ಬಿಟ್ಟನು. ಸಮಾಧಾನದ ವುಸುರು ಬಿಡುತ್ತ ಅವರು ಅರಮನೆಯ ರುಗ್ಧದ್ವಾರವನ್ನು ತಲುಪಲಾಗಿ ಕಾಪಲಿದ್ದ ಮಂದಿ ತಡೆಯಲು ತಾವು ಫಲಾನ ಯಂಥವರೆಂದೂ, ಅರಸನ ದರುಸನಾಕಾಂಕ್ಷಿಗಳಾಗಿ ಬಂದಿರುವುದಾಗಿ ಹೇಳಿದರು. ಪ್ಲಾಂ.. ಕುದುರೆಡವಿನವರೇನು? ಯಂದು ಅಭಿಮಾನ ತಳೆದನು. ಅನುಮತಿ ಪಡೆದು ಬರುವುದಾಗಿ ಹೇಳಿ ವಳ ಹೋದನು. ವಂದು ಗಳಿಗೆ ಆತು.. ಯರಡು ಗಳಿಗೆ ಆತು? ಬರೋಬ್ಬರಿ ಮೂರು ಗಳಿಗೆ ಯಂಬುವಷ್ಟರೊಳಗೆ ಆ ಸಿಪಾಯಿಯು ಬಂದು ನೋಡಿರೆಜಮಾನರುಗಳಿರಾ........ ನಮ್ಮ ರಾಜನ ಪ್ರಸ್ತುತಿ ಬಲು ಚೂಚುಮ ಅಯ್ಕೆ.. ಆತ ದುರುಗುಟ್ಟಿ ನೋಡಿದರೆ ತಡಕಳ್ಳಂಗಿಲ್ಲ... ಗಟ್ಟಿಯಾಗಿ ಮಾತಾಡಿದರ ತಡಕಳ್ಳಂಗಿಲ್ಲ... ವುಸುರು ಬಡಿಯುವಂಗ ಸನೀಪ ನಿಂತರ ತಡಕಳ್ಳಂಗಿಲ್ಲ... ಅದಕ ಬಲು ಹುಷಾರಿರಬೇಕು. ಅವುರೀಕಲೆ ನೋಡಬೇಕು, ಮಾತಾಡಬೇಕು, ಕೇಳಬೇಕು.ಹತ್ತು ಮಾತೊಳಗೇಳುವುದನ್ನು ಯಲ್ಲೇ ಮಾತುಗಳಲ್ಲಿ ಹೇಳಬೇಕು.” ಯಂದು ಮಾತಿನ ಕರಾರು ಯಿಧಿಸಿದನು. ಅದಕ್ಕಿವರು ಅನುಮೋದಿಸಿದರು. ತದನಂತರ ವಳೀಕ್ಕೆ ಹೋಗಲು ಪರವಾನಿಗಿ ಕೊಟ್ಟನು. ವಳ್ ಪಜೀತಿ ಆತಲ್ಲ ಅಂತ ಯಿವರು ದ್ವಾರದ ತಲಬಾಕಲಿಗಿದ್ದ ಗಜಲಕ್ಷಿಯಿಗ್ರಹಕ್ಕೆ ಸಣುಮಾಡಿ ಹೆಜ್ಜೆಕಿತ್ತು ವಳಗೆ ಯಿಟ್ಟು... – ನಡಕೋತ ಹೋಗುತ್ತಾರೆ.. ನೋಡಿಕೋತ ನಡೆಯುತ್ತಾರೆ? ಹೋಗುತ? ನಡೆಯುತ ಪಂಚರು ಯಿರುವಾಗ್ಗೆ.. ಯಿನ್ನೋಲ್ವ ಯ್ಯಕ್ತಿ ಬಂದು ಎಂದು ಹಜಾರ ಅಂದರ ಹಜಾರಕ್ಕೆ ಕರೆದೊಯ್ದು ಯದೇ ರಾಜಾಸ್ಥಾನ ಯಂದೂ ಹೇಳಿ ಕಲ್ಲಿನ ಬುಗುಟಿಗಳನ್ನೇ ಆಸನಗಳೆಂದು ಭಾವಿಸಿ ಕುಳಿತುಕೊಂಡು ರಾಜನ ಆಗಮನಕ್ಕಾಗಿ ಕಾಯಬೇಕೆಂದೂ ಹೇಳಿ ಹೋದನು. ಅವರು ಅದರಂಗೆ ಕೂಕಂಡು ಮಿಕಿ ಮಿಕಿ ನೋಡಲಿಕ್ಕೆ ಹತ್ತಿದರು. ರಾಜನ ಆಗಮನಾಕಾಂಕ್ಷಿಗಳಾಗಿ ತಾವಂದೆ ಅಲ್ಲದೆ ಯನ್ನು ಕೆಲವರಿದ್ದರು. ಅವರು ಯಿವರನ್ನು, ಯಿವರು ಅವರನ್ನು ಸುಮ್ ಸುಮ್ಮಕ ರಾಜರೆಂದು ಅನ್ಯಥಾ ಭಾವಿಸಿಕೊಳ್ಳುತಲಿದ್ದರು. ಹಂಗ ಭಾವಿಸಿಕೊಳ್ಳುತಲಿದ್ದುದು ಖರೆ ಯಿರದಿದ್ದರೂ ಸುಳ್ಳಂತು ಯಿರಲಿಲ್ಲ.