ಪುಟ:ಅರಮನೆ.pdf/೬೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬ ೨೫ ಗುಂಡಲಹಳ್ಳಿ ರಾಜ ಹಂಗಜ್ಜನೂ, ಆಜಡ್ಲುವಿನ ರಾಜ ನನ್ನಲುಪಾಲನಾಯಕ, ದೂಪದಳ್ಳಿಯ ರಾಜ ಜುಮ್ಲಾನಾಯಕ, ಖುದ್ದ ಹಸ್ತಾಕ್ಷರದ ನಿರೂಪವನ್ನು ಸಂಗಾಟ ತಂದಿದ್ದ ರಾಯಭಾರಿ ರೊಟ್ಟಿಲುಕಾಲಂ ಯಿವರೇ ಮೊದಲಾದವರಿದ್ದರು. ಯಿಂಥ ಸ್ಥಿತಿ ನಡುವೆಯೂ ಪರಸ್ನರ ದ್ರುಸ್ಟಿಯುದ್ದ ಮಾಡುತ ತಮ್ಮ ತಮ್ಮ ಕಿವಿಗಳನ್ನು ಅರಮನೆ ವುದ್ದಗಲಕ್ಕೂ ಚಾಚಿ ಬೆಕ್ಕುಗಳ ವಾವ್.. ಮ್ಯಾಮ್.. ಕುರಿಮೇಕೆಗಳ ಮಹೆಹೆಹೆ.. ಗಿಳಿಗಳ ಚುವ್.. ಚುವ್.. ಕೋಳಿಗಳ ಕೊ, ಕ್ರೋ.. ಕೋ... ಬಳೆಗಳ ಫಿಲ್.. ಘಲ್.. ಕಾಲುಗೆಜ್ಜೆಗಳ ಘಲ್.. ಘಲ್.. ಸೆರಗುಗಳ ಸೆರಕ್.. ಸೆರಕ್.. ಹಸುಗೂಸುಗಳ ಅವ್ವವ್ವಾ. ಗಂಟೆಯ ಗಣಗಣಲ್.. ಯವೇ ಮೊದಲಾದ ಸಬುಧಗಳನ್ನಾಲಿಸುತಲಿದ್ದರು. ತಮ್ಮ ತಮ್ಮ ಕಣ್ಣುಗಳನ್ನು ತೂರಾ ಪುಟ್ಟಿ ಗಾತುರಕ್ಕಗ್ಗಲಿಸಿ ಹರುಕು ಮುರುಕು ಸುಣ್ಣ ಬಣ್ಣದ ಗೋಡೆಗಳನ್ನೂ.. ಗೋಡೆಗಳಿಗಂಟಿದ್ದ ಸೋಮ ವಮುಸದ ರಾಜ ಮಾರಾಜರ, ಪಾಂಡವರು ಕವುರವರು ಜೂಡಾಡುತ್ತಿರುವ, ದ್ರವುಪದಿಯ ವಸ್ತರಾಪಹರಣದ.. ನಳದಮಯಂತಿಯರ ಯಿವೇ ಮೊದಲಾದ ತಯ್ದವಲ್ಲದ ಚಿತ್ರಗಳನ್ನೂ.. ಬಗೆಬಗೆ ಯಿನ್ಯಾಸದ ಲಾಂದರಗಳನ್ನೂ.. ಮಲೆ ಮೂಲೆಯೊಳಗೆ ಯಣಕಂಡಿದ್ದ ಜೇಡರ ಬಲೆಗಳ ಕಲಾಕ್ರುತಿ ಗಳನ್ನೂ ಆಸ್ವಾದಿಸುತಲಿದ್ದರು.. ಆಗೋಮ್ಮೆ ಯಿಗೊಮ್ಮೆ ಪ್ರಹರಿ ಬಂದು ರಾಜನ ನಿತ್ಯಕರುಮ ಗಳನ್ನು ಯಿವರಿಸಿ ಹೋಗುತಲಿದ್ದನು. ವಂದುಗಳಿಗೆ ಆತು, ಯರಡುಗಳಿಗೆ ಆತು, ಬರೋಬ್ಬರಿ ಮೂರುಗಳಿಗೆ ಆತು ಯಂಬುವಷ್ಟರಲ್ಲಿ ಪರಿಚಾರಕನೋವ್ವ ಬಂದು ಸಿಮ್ಮಾಸನದ ಮ್ಯಾಲ ಮೆತ್ತೆ ಹಾಸಿ ಹಿಂದಕ ಮುಂದಕ ಹೊಳ್ಳಾಡಿಸಿ, ಅದರ ಕಾಲುಗಳ ಗಟ್ಟಿತನವನ್ನು ಪರೀಕ್ಷಿಸಿ, ಹೋದ ಸೊಲುವ ಹೊತ್ತಿಗೆ.. ಅಂತಾಪದ ದ್ವಾರದ ಜಾಗಟೆ ಢಣೀರೆಂದು ಭಾರಿಸಿದ ಸೋಲುಪ ಹೊತ್ತಿಗೆ.. ರಾಜು ಯಂಬ ಹೊಗಳು ಭಟ್ಟಾರಕನು ಬಂದು ಅಂತಸಹಾಯಸೂರಾss ಸಣಿವಾರ ಸಿದ್ದಿ, ಮಿಂಚೇರಿ ಗಿರಿದುರ ಮಲ್ಲ....ಛಲದಂಕಮಲ್ಲss ಸಮಾಧಿಗತ ಪಂಚಮಹಾಸ ಮಹಾಮಂಡಲೇಶ್ವರ.. ಮಿಂಚೇರಿ ಪುರಾದೀಸss.. ಸೋಮ ವಂಸ ಕುಲತಿಲಕss.. ವಸುಧಾಕರ ಚಕ್ರಕೂಟ.. ಕೋಟಿ... ಯಿಯಿಧ ಯಿಧಾನ.. ರಿಪುಜಲಧಿ.. ಬಡಬಾನಳss.. ಸವುರ ಮುಗರಾಜಕುಲಪಾಲನ.. ವಜ್ರದಂಡss.. ಮಲೆ ಪರೊಳ ಗಂಡss.. ಯಿಯಿಧ ಯಾಚಕ ಜನಯ್ಯ ಚಿಂತಾಮಣಿ.. ಸಮ್ಯಕ್ಷ ಚೂಡಾಮಣಿ.