ಪುಟ:ಅರಮನೆ.pdf/೬೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೬ ೨೭ ಅವುಗಳನ್ನು ನಿವಾರಿಸಿಕೊಳ್ಳಲು ತಾನ್ಯಾವ ಪೂಜೆ ಪುನಸ್ಕಾರ ಮಾಡುವುದೆಂದು ತನ್ನ ಆಸ್ಥಾನದ ಗುರು ರಾಜಾಚಾರನನ್ನು ಕೇಳಿದನು. ಅದಕ್ಕಿದ್ದು ಆತನು ಯಿಂಥಿಂಥ ಪೂಜಾ ಕಾರ ಮಾಡಬೇಕಾಗುವುದೆಂದು ಸಲಹೆ ನೀಡಿದನು. ಅದರ ಖಷ್ಟು ವೆಚ್ಚವನ್ನು ಕುದುರೆಡವು ಅರಮನೆಯು ವಹಿಸುವುದೆಂದು ಪಂಚರು ವಾಗ್ದಾನ ನೀಡಿದ ನಂತರ.. ಸಯ್ತಿಕನೋಲ್ಡನನ್ನು ಕಳಿಸಿ ಜಗಲೂರೆವ್ವನನ್ನು ಅರಮನೆಗೆ ಖುದ್ದ ಕರೆಯಿಸಿ ಕೊಳ್ಳಲಾಯಿತು. ನಾಯಕನು “ತಂಗೀ ಜಗಲೂರೆವ್ವ. ಗಂಡನೇ ಯಿಲ್ಲೆಂದ ಮ್ಯಾಲ ಕುಂಕುಮಟೊಟ್ಟು ತಾಳಿಸರ ಮಿಟುಕೊಂಡು ಯೇನು ಮಾಡುತೀ? ಅವರು ಕೇಳಿದ್ದನ್ನು ಕೊಟ್ಟು ಸೊರ ಪದವೀನ ಪಡಕಾ” ಯಂದೊಂದೇ ಸಾರಿಗೆ ಅಂದು ಬಿಟ್ಟನು. ರಾಜನಾದವನಿಗೆ ನಯ ನಾಜೂಕು ಯಲ್ಲಿಂದ ಬರಬೇಕು? ಯಾಕ ಬರಬೇಕು? ಅದರಿಂದ ಜಗಲೂರೆವ್ವ ಆ ಛಣ ಕೆರಳಿ ಹಂಗss ತಮಣಿಗೊಂಡಳು. ದೊರೆ ಕಡೇಕ ತಿರುಗಿ “ದೊರೆಯೇs... ಯಿನ್ನೊಂದು ಸಲ ನೀನು ಯಾರಿಗೂ ತಂಗಿ ಯಂದೆನ ಬ್ಯಾಡ”.. ಯಂದಷ್ಟೇ ಹೇಳಿದಳು, ದಯವ ಕಾರ್ ಅಂದರು.. ಸತಿಯಾದವಳ ಕೊಳ್ಳಿನಿಂದ ಮಾಂಗಲ್ಯಾನ ಸವುಭಾಗ್ಯವನ ಅಪಹರಿಸೋ ನಿಮ್ಮ ದಯವಕ್ಕೆ ಧಿಕ್ಕಾರ ಅಂದಳು.. ಹೊಲಮನಿ ಅಂದರು.. ಅವಕ್ಕೆ ಬೆಂಕಿ ಹಾಕಿರಿ ಅಂದಳು. ಸಾಂಬವಿ ಕೋಪ ಮಾಡ್ಕೊತಾಳಂದರು. ಆಕೆ ತನ್ ಕೊಳ್ಳಾಗಿನ ತಾಳೀನ ಕಿತ್ತುಕೊಡುತಾಳೇನೋ ಕೇಳಿರಿ ಮತ್ತೆ ಯಂದಳು. ಆಮ್ಯಾಕಿದ್ದು ನಾಯಕನು 'ತಾಯಿ.. ನೀನು ಬಲು ದೊಡ್ಡ ಸರಣೆ ಅದೀಯಾ . ನಿನ್ನಂಥಾಕಿ ನನ ರಾಜ್ಯದೊಳಗೆ ಯಿರುವುದೇ ಸವುಭಾಗ್ಯ.. ರಾಜನಾದೊನು ಮಾಫ್ ಕೇಳಬಾರದು. ಆದರೂ ಕೇಳಕಂತದೀನಿ.. ಮಾಫ್ ಮಾಡು ತಾಯೇ' ಯಂದು ಕಣ್ಣನ್ನು ವಜ್ಜಲು ಮಾಡಿಕೊಡನು. ಅಂಥ ಮಾತನ ಆಡಬ್ಯಾಡಣ್ಣಾ.. ಯಿದರಾಗ ಯಾರದೂ ತಪ್ಪಿಲ್ಲ.. ನನ ಕರುಮ.. ಜಗಲೂರೆನ ಪಾದ ಸೇರೋ ತನಕ ಯೇನೇನು ಅನುಭೋಸೋದಯ್ಯೋ.. ಅದನೆಲ್ಲ ಅನುಭೋಸಲಕssಬೇಕು 0ರಂದು ಕಂನ್ನು ಮುಗುದು... ಹೋಗುವಾಗ್ಗೆ “ವುಂಡ ಕಂಡು ಹೋಗುವಂತಿರಣ್ಣಾ.. ಮತ್ತೆ ಹಂಗss ಬರೀ ಹೊಟ್ಟೇಲಿ ಹೋದಿಗೀದೀರಾ” ಯಂದು ಹೇಳುವುದನ್ನು ಮರೆಯಲಿಲ್ಲ. ಆಕೆಯ ಮಾತು ಕೇಳಿದ.... ಪಂಚರಿಗೆ ಮರಳುಗಾಡೊಳಗ ಬರೀ ಬತ್ತಲೆ ನಿಂತಿರುವಂಥ