ಪುಟ:ಅರಮನೆ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹುಟ್ಟಿದ ನೀವೆಲ್ಲಾರು ಅಡ್ಡಾಯ ಕೊಟ್ಟಿದ್ದಕ್ಕೆ ಮಳಿಗದ ಮಂದಿ ತಮ್ಮೋಟಕ ತಾವು ಕುಣೀಲಕ ಹತ್ಯಾರ, ನಿಮ್ಮಂಥ ರಾಜಕುಮಾರರು ಬಿಗುಸು ಯಿದ್ದರ ಹಿಂಗಾಗುತಿರಲಿಲ್ಲ. ಯೀಗ ಯೀತನು, ನಾಳೆ ಯಿನ್ನೊಬ್ಬಾತನು, ಅರಮನೆ ಅಂದರ ಯೇನಂತ ತಿಳಕೊಂಡಿರುವರೋ? ಯಿದು ಹಿಂಗss ಮುಂದೊರೆದರ ನಮ ಚಾಕರಿ ನಾವೇ ಮಾಡಬೇಕಾಗಿ ಬಂದೀತು, ಅದಕ ನೀನು ಆ ಮೋಬಯ್ಯಲ್ಲಿಗೆ ಬರೋಹಂಗ ಮಾಡು” ಯಂದು ಹೇಳಲು.. ಅದಕಿದ್ದು ಕಾಟಯ್ಯನು ಯವ್ವಾ. ನೀನೆಸನ ಮಾಡಿಕೋ ಬ್ಯಾಡ, ಮೋಬಯ್ಯನೆಂಬ ದುರುಳನಿಗೆ ನಾನು ಬುದ್ದಿ ಕಲಿಸಿ ನಿನ್ನ ಪಾದದ ಬುಡಕ ಕೆಡವುತೀನಿ” ಯಂದು ಭರವಸೆ ನೀಡಿ ತಾನು ಬಂದ ಹಜಾರವು ಪಿಸುಮಾತಿನ ಮೊಗಸಾಲೆಯಾಗಿತ್ತು. ಹಿಂದಿನ ರಾಜಮಾರಾಜರು ಯುದ್ಧ ತಂತ್ರಗಳ ನೀಲಿನಕ್ಷೆ ರೂಪಿಸುತ್ತಿದ್ದ ಜಾಗ ಅದಾಗಿತ್ತು. ತನ್ನ ಯಡ ಬಲಕ ಆಗ್ರಾಧಾರಕರಾಗಿ ನಿಂತುಕೊಂಡಿದ್ದ ರಾಜಸೇವಾಸಕ್ತರನ್ನುದ್ದೇಶಿಸಿ.... “ತಲೆಯಿರುವಾಗಲೆ ಮೊಣಕಾಲು ಚಿಪ್ಪಿಗೆ ಪಟ್ಟಕಟ್ಟುವ ಹುನ್ನಾರು ನಡದಂಗ ಕಾಣತಯ್ಕೆ, ಕಂಪಣಿ ಮಂದಿ ವಂದಪ್ಪ ಆದರ ಯೀ ಪಿಕದಾನಿ ಮೋಬಯ್ಯ ಯಿನ್ನೊಂದಪ್ಪ ಆಗ್ಯಾನ ಯೀತ ಬರಿ ಬಾಯಿ ಮಾತೀಲೆ ಬಲ್ಲೋ ಪಯ್ಕೆ ಅಲ್ಲ.. ದಂಡಂ ದಶಗುಣಂ ಭವೇತ್ ಅಂತ ನಮಗ ಸಾಲಿ ಕಲಿಸಿದ ಗುರುಗಳು ಹೇಳಿದ್ರು.. ಅವನ್ನ ವದ್ದು ಬಡೂ ಯಳಕೊಂಡು ಬರಂಥೋರು ಯಾರದಾರ.. ಯಿದರ ಕಾಲಾಗ ವಂದ್ಯಾಕ, ಯಲ್ಲು ಬೆಳ್ಳಿ ರೂಪಾಯಿ ಖರುಚಾದ್ರುಪರವಾಯಿಲ್ಲ...” ಯಂದು ರೋಸಿ ಹೇಳಿದನು. ಅದಕಿದ್ದು ರಾಜಸೇವಾಸಕ್ತರು ಪರಸ್ಪರ ಮುಖ ನೋಡಿಕೊಂಡರು. “ಹುಷಾರಾಗಿ ಕಾಲಿಡ್ರಿ.. ವೆಬಯ್ಯನ ಮನೊಳಗ ಆದಿ ಸಗುತಿಯದ್ದಂಗಯ್ಯಾಳ.. ಆಟೋರಾಜ ಮುನುಸುಕೊಂಡನಿಭಾಯಿಸಬೋದು, ಅದರ ಕಾಪಾಡೋ ದಯವ ಮುನುಸುಕೊಂಡಲ್ಲಿ ಯೇನು ಗತಿ? ತಲಿ ಗಟ್ಟಿ ಅಯ್ತಂತ ಗೋಡೆಗೆ ಹಾಯ ಬ್ಯಾಡ್ರಿ”ಯಂದು ತಮ್ಮ ತಮ್ಮ ಹೆಂಡರು ಆಡಿದ್ದ ಬುದ್ದಿವಾದ ವನ್ನು ನೆನಪಿಸಿಕೊಂಡರು. ಅದರ ಬ್ಯಾರೆ ಮೋಬಯ್ಯ ವುಂಡಮನೆಗೆ ಯರಡು ಬಗೆಯೋ ಪಯ್ಕೆ ಅಲ್ಲಯಂಬುದು ಯಲ್ಲಾರಿಗೂ ಗೊತ್ತಿರೋ ಸಂಗತಿ. ವಿರೋಧಿ ರಾಜರೇನಾದರೂ ಆತನನ್ನು ಪಗಡೆ ಕಾಯಾಗಿ ಬಳಸಿಕೊಂಡಿರಬೌದೇ?.. ಆತ ತನ್ನ ಅನುಚಿತ ವರನೆಗೆ ಕಂಡರಿಯದ, ಕೇಳರಿಯದ ಸಾಂಬವಿ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರಬೌದೇ? ತಾನು