ಪುಟ:ಅರಮನೆ.pdf/೬೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೩೧ ರಾಯಲಸೀಮೆ ವಳಿತದ ಅಗ್ರಹಾರಗಳ ಮೇಳಿಗೆಗೆ ಚ್ಯುತಿ ತಂದಿರುವ, ಹಿಂದೂ ಸಾಮುಸ್ಥಾನಿಕ ಅವನತಿಗೆ ಕಾರಕನಾಗಿರುವ, ದೇವಾನು ದೇವತೆಗಳ ಯಿನಾಮು ಭೂಮಿಯನ್ನು ಹೊಲೆಮಾದಿಗ ಸೂದ್ರರಿಗೆ ನಿರಂತರ ಹಂಚಿ ಯದೆ ಸೆಟೆಸಿ ಅಡ್ಡಾಡುವಂತೆ ಮಾಡಿರುವ, ಮಿಲಾಯಿತಿ ಭಾಷೆಯಾದ ಯಿಂಗಲೀಸು ಕಲಿಸಿ ಹಿಂದೂ ದೇಸದ ಬ್ರಾಮ್ಮಣರನ್ನು, ಭಾಷಾ ಭಷ್ಟರನ್ನಾಗಿ ಮಾಡುತ್ತಿರುವ, ಹಿಂದೂ ದೇಸದ ಪಯಿತ್ರವೇದೋಪನಿಷತ್ ಪುರಾಣಗಳನ್ನು ಮಿಲಾಯಿತಿ ಭಾಷೆಗಳಿಗೆ ತರುಮೆ ಮಾಡಿ ಅಪಚಾರವೆಸಗುತ್ತಿರುವ, ತಾನೇ ಸೋಯಂ ಪುರಾಣ ಪುಣ್ಯಕಥೆಗಳನ್ನು ಓದುತ್ತಿರುವ, ಕಲೆಟ್ಟರು ಸಾಹೇಬ ಥಾಮಸು ಮನೋಗೆ ಅಕಾಲಿಕ ಮರಣವನ್ನು ದಯಪಾಲಿಸುಯಂದು ವುಗ್ರವಗ್ರದೇವತೆಯಾದ ಲಕ್ಷ್ಮೀನರಸಿಮ್ಮ ದೇವರಿಗೆ ಯಿಸೇಸ ಪೂಜೆ ಸಲ್ಲಿಸದಿರಲಿಲ್ಲ. - ಯಿತ್ತ ವೆಲ್ಲುರಿ ಕುಂದುಕ್ಷಿ ಯಂಬಿವೇ ಮೊದಲಾದ ಸಂಯುಕ್ತಾಕ್ಕರಗಳ ಮಾಮಂಡಳದ ಸುಡುಗಾಡೊಳಗೆ ಸೀ ಸೀ ಸುಡುಗಾಡೆಪ್ಪಾವಧೂತನು ಆಶ್ರಮದ ಹೆಸರಲ್ಲಿ ಭವ್ಯಾತಿಭವ್ಯ ಬಂಗಲೆಯನ್ನೇ ಯಬ್ಬಿಸಿ ಬಿಟ್ಟಿದ್ದುದು ಸರಿಯಷ್ಟೇ... ಕಳ್ಳಕಾಕರು ಯಿಲ್ಲದ ವಂದು ಆದರ ಗ್ರಾಮದ ವುದ್ಘಾಟನೆಯನ್ನು ಶ್ರೀ ಶ್ರೀ ಆಕಾಸರಾಮಣ್ಣಾವಧೂತರಿಂದ ಮಾಡಿಸಲಕೆಂದು ನಿಚ್ಚಯಿಸಿ ಅವರನ್ನು ಹುಡುಕಿ ಕರೆತರಲೋಸುಗ ಕಟ್ಟಾಳುಗಳನ್ನು ಯಂಟರ ಮಾಲೊಂದು ದಿಕ್ಕಿಗೆ ಹರಿಯಬಿಟ್ಟಿದ್ದನಷ್ಟೇ.. ಹಂಗೆ ಹುಡುಕ್ಕೋತ ಹೋದ ಜಗ್ಗಲಿಗೆ ಜಾಗಟಯ್ಯ ಮತ್ತವನ ಸಂಗಡಿಗರು ಫಲಾನ ದಿವಸದಂದು ವುರುವಕೊಂಡ ವಳಿತದ ಯಿಡುಪನಕಲ್ಲು ಸಮುಸ್ಥಾನದ ಶಾಲಾಲಯಂಬ ಗ್ರಾಮವನ್ನು ತಲುಪಿದರು. ಯಾಕಂದರೆ ಅಲ್ಲಿ ಚೋರ ಚೋರೇಶ್ವರ ಪುರಾಣದ ವಾಚನ ಮಹೋತ್ಸವದ ಮೇರುಪಾಟಾಗಿದ್ದರು. ಛಂದಸ್ಸಲಂಕಾರಶಾಸ್ತ್ರದ ನೂರಾ ಹನ್ನೆರಡು ಪ್ರಾಕಾರಗಳಲ್ಲಿದ್ದ ಅದನ್ನು ರಚನೆ ಮಾಡಿದ್ದಾತ ಯಾರಪ್ಪ ಅಂದರೆ ಅದೇ ಅಯ್ಯಾಳೇಶ್ವರ ಮಾಕವಿಯು. ವಂದು ಕಾಲದಲ್ಲಿ ದುರೈಸೆಯಲ್ಲಿ ಹುಡುಕ್ಕೋತ ಹುಡುಕ್ಕೋತ ಸಾಬಾಲಾಕ್ಕೆ ಬಂದು ಜಮೀಂದಾರು ಬಂಡೆಪ್ಪನನ್ನು ಕಂಡು “ಸ್ವಾಮೀ ಮೂಟ ಹಾಕಿ ಪುಣ್ಯ ಬರುತಯ್ಕೆ' ಯಂದು ಹೊಟ್ಟೆ ತೋರಿಸಿದನು. ಅವಯ್ಯನನ್ನು ಅಪಾದಮಸ್ತಕ ದಿಟ್ಟಿಸಿದ ಜಮೀಂದಾರನು “ಯೇನಪ್ಪಾ..? ನಿನ್ನ ಮುಖದಲ್ಲಿ ಸರಸೋತಿದೇವಿಯು ಗ್ರುತ್ಯ ಮಾಡುತ್ತಿದ್ದಂಗಯ್ತಲ್ಲಾ.. ಯೇನು ಸಮಾಚಾರ ?” ಎಂದು ಕೇಳಿದನು. ಅದಕಿದ್ದು ಅವಯ್ಯ ತನ್ನ