ಪುಟ:ಅರಮನೆ.pdf/೬೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮ ಅರಮನೆ ದೇವಾಲಯದೊಳಗೆ ತನ್ನನ್ನು ಯಚ್ಚರಿಸುವವರ ಸಲುವಾಗಿ ಕಾಯುತ್ತ ಮಲಗೇ ಯಿರುವ ಸ್ತ್ರೀರಂಗನಾಥ, ನೂರಾರು ಮುಗ್ಗರ ಮರಣ ದಂಡನೆಗೆ ಮಾಧ್ಯಮವಾಗಿದ್ದ ಹಾದಿ ಯಿಕ್ಕೆಲದಲ್ಲಿ ಸಾಲು ಸಾಲು ಮರಗಳು.. ಯುದ್ದದ ನೆನಪುಗಳನ್ನು ಮೆಲುಕು ಹಾಕುತ್ತಿರುವ ಜನ ಅಗೋ ಅಲ್ಲಿ... ಯಗೋ ಯಿಲ್ಲಿ. ಕಣ್ಣಾರೆ ಯುದ್ಧವನ್ನು ನೋಡಿದ ಪರಿಣಾಮವಾಗಿ ಹುಚ್ಚರಾಗಿರುವ ಜನ ಅಗೋ ಅಲ್ಲಿ... ಯಗೋ ಯಿಲ್ಲಿ... ಸತ್ತು ಗೆದ್ದ ಟಿಪ್ಪು ಅಗೋ ಅಲ್ಲಿ? ಯಿಗೋ ಯಿಲ್ಲಿ... ತನ್ನನ್ನು ಗುರುತಿಸಲು? ಗುರುತಿಸಿ ಕೊರಳಪಟ್ಟಿ ಹಿಡಿಯಲು, ಹಿಡಿದು ತನ್ನ ಕಪಾಳಕ್ಕೆ ನಾಲ್ಕು ಭಾರಿಸಲು, ಭಾರಿಸಿ ತನ್ನ ಮುಖಕ್ಕೆ ವುಗಿಯಲು, ವುಗಿದು ನಿನ್ನಂಥೋರು ಸುಖವಾಗಿರಧಂಗ ಶ್ರೀರಂಗನಾಥನೇ ನೋಡ್ಕೊತಾನೆ.. ಯಂದು ಛೀಮಾರಿ ಹಾಕಲೋಸುಗ ಕಾಯುತ್ತಿರುವವರು ಅಗೋ ಅಲ್ಲಿ? ಯಿಗೋ ಯಿಲ್ಲಿ.. ನೀವೆಲ್ಲ ಸೊಂಟೀಸ್ ಪಯ್ದಟನ ವಾರಸುದಾರರು ಯಂದು ಸಾರಿಸಾರಿ ಹೇಳುತ್ತಿರುವ ಕರುಣಾಮಯಿ ಮೇರಿಯಮ್ಮ ಅಗೋ ಅಲ್ಲಿ.. ಯಿಗೋ ಯಿಲ್ಲಿ...ತನ್ನ ದೇಹದಿಂದ ಯಿಂಡಿಯಾದ ನೆತ್ತರನ್ನು ಹನಿಯುತ್ತಿರುವ ಗಾಯಸ್ಥ ಯೇಸುಪ್ರಭುನ ದೇಹ ಅಗೋ ಅಲ್ಲಿ.. ಯಗೋ ಯಿಲ್ಲಿ.. ಗೋಲ್ಗೊಥಾ ಬೆಟ್ಟಗಳು ಅಗೋ ಅಲ್ಲಿ. ಯಿ ಯಿಲ್ಲಿ..... ವಾಸಿಯಾಗದ ಸಹಸ್ತಸಹಸ್ತಗಾಯಗಳ ಆಭರಣಗಳನ್ನು ಧರಿಸಿರುವುದು ಸ್ತ್ರೀರಂಗಪಟ್ಟಣವಲ್ಲ.. ಬೆಣ್ಣೆಂ, ಜೆರೂಸಲೇಂ.. ಬಚ್ಚಲ್.. ಹೆಜ್ಜೆ ಹೆಜ್ಜೆಗೆ ಕತ್ತು ಹಿಡಿದು ನೂಕುತ್ತಿರುವಂಥ ಅನುಭವವಾಗಲು ಥಾಮಸ್ ಮನ್ನೇ ತನ್ನ ಬಿಡಾರಕ್ಕೆ ಆಗಮಿಸಿದ. ಯೇಸು ಪ್ರಭುವಿನ ಮೂರಿಯದುರು ದೀಪ ಬೆಳಗಿಸಿ ಯಷ್ಟೋ ಹೊತ್ತಿನವರೆಗೆ ಮಂಡಿ ಮರಿ ಕುಳಿತೇಯಿದ್ದ. ಕೊನೆಗೆ ಯೇನನ್ನು ತಾನು ನಿವೇದಿಸಿಕೊಂಡನೆಂದರೆ “ಮಹಾಪ್ರಭು.. ನನ್ನನ್ನು ನೀನು ಕ್ಷಮಿಸಬಹುದಿತ್ತಲ್ಲವೆ.” ತಾನು ಡುಬಾಯಿಸ್‌ರವರನ್ನು ಕಾಣಬೇಕೆಂದು ನಿರರಿಸಿ ಗಂಜಾಂ ಕಡೆ ನಡೆದ ಹಾದಿಯ ಯಡ ಬದಿಯಲ್ಲಿದ್ದ ಯಗಚ್ಚಿಯಲ್ಲಿ ಫಾದರ್ ಯಿರಲಿಲ್ಲ. ಸಿಡುಬು ಕಾಯಿಲೆ ಪೀಡಿತರಿಗೆ ಚುಚ್ಚುಮದ್ದು ಹಾಕಿಸಲು ಪಕ್ಕದ ಹಂಗರವಳ್ಳಿಗೆ ಹೋಗಿರುವುದಾಗಿ ಪರಿಚಾರಕ ಹೇಳಿದ. ಯಿಗಡ್ಡಿಯ ಆವರಣದಲ್ಲಿದ್ದ ಅನಾಥ ಮಕ್ಕಳ ಶಾಲೆಗೆ ಭೇಟಿ ನೀಡಿದನು. ಅತ್ತ ಕುಂದುಕ್ಷಿ ವೆಲ್ಕುರಿಗಳ ವಳಿತದಲ್ಲಿದ್ದ ಸುಡುಗಾಡಿನೊಳಗೆ ಬಾದಾಮಿ,