ಪುಟ:ಅರಮನೆ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮೆತ್ತನ್ನ ಮೆದೆಗಳ್ಳನಾಗಿರಲೂ ಬೌದೇ? ತನ್ನೊಳಗೆ ಸಾಂಬವಿಯಿರುವಳೆಂಬುದಕ ಖಾತರಿಯೇನು? ಸಾಕ್ಷ್ಯಾಧಾರಗಳು ಯಲ್ಲವೆ? ಅರಮನೆ ತಿನಮಾಡಿದ ವುಷ್ಟು ಅವರನ್ನು ಅಡ್ಡಡ್ಡ ಯೋಚಿಸುವಂತೆ ಮಾಡಿತು. ಅಲ್ಲದೆ ಅವರು ಕಾಟಯ್ಯನ ವುಗುಳನ್ನು ಯಂದೂ ದಾಟಿದವರಲ್ಲ... ವಂದಲ್ಲಾ ವಂದಿನ ಆತನು ರಾಜ್ಯಭಾರ ಮಾಡೇ ಮಾಡುತ್ತಾನೆ ಯಂದು ನಂಬಿದ್ದರು. ಮೋಬಯ್ಯನನ್ನು ಧರಗುಟ್ಟಿಳಕೊಂಡು ಬರುವಂಥ ಶಕ್ತಿಶಾಲಿಗಳು ತಮ್ಮ ವಳಿತದೊಳಗ ಯಾರವರೆ ಯಂದು ಪಟ್ಟಿ ಮಾಡುತಾಯಿರುವಾಗ್ಗೆ ಚಿಗ್ಯಾಟಿಯಂಬ ಮಾವುಸ ಪರುವತವು ಮಾತಿನ ಗುಂಟ ತೇಲಿ ಬಂತು. ಆತ ಯಂಥವನೆಂದರೆ.. ನಾಕು ತುತ್ತಿಗೆ ವಂದು ಟಗರನ್ನು ಯರಡು ತುತ್ತಿಗೆ ಎಂದು ಕೋಳಿಯನ್ನೂ ತಿಂಬುತ್ತಿದ್ದಂಥವನು. ಬಿಚ್ಚುಗತ್ತಿಯನ್ನು ಆ ಕೂಡಲೆ ಆತನಿದ್ದಲ್ಲಿಗೆ ಕಳುವಿ ಆ ಸ್ಥಾನಕ್ಕೆ ಕರೆ ಕಳಿಸಿಕೊಂಡು ಯಿಂಥಾದ್ದು ಯೀ ಕೂಡಲೇ ಮಾಡಬೇಕೆಂದು ಹೇಳಿದರು. ವಪ್ಪಲು ಮಿಜಿ ಮಿಜಿ ಮಾಡಿದನು. ಯಲ್ಲು ಟಗರು, ನಾಕು ಕೋಳಿ ಮತ್ತು ಮಸಾಲೆ ದಿನಿಸಿಗಂತ ವಂದು ಬೆಳ್ಳಿ ರೂಪಾಯಿ ಕೊಡುವುದಾಗಿ ಹೇಳಲು ಆತನು, “ಸಾಂಬವಿ ನಮ್ಮ ಕುಲ ದ್ಯಾವತೆ ಅಯ್ಯಾಳ ತಂದೆಗೋಳಾ.. ನೀವು ಹತ್ತು ಸಾವ್ರಹೊನ್ನು ಕೊಟೂನಾನು ಮೋಬಯ್ಯನ ತಂಟ್ಯಾಕ ಹೋಗೋದಿಲ್ಲ” ಯಂದು ಹೇಳಿ ಹೋದನು. ಯಿನ್ಯಾರವರೆ ಯಂದು ಯೋಚಿಸಿ ಯೋಚಿಸಿ ಕೆಂಧೂಡಿಯನ್ನು ಕರೆಯಿಸಿಕೊಂಡರೆ ಆತನು ನೀವು ನೂರುಕೂರಿಗೆ ಹೊಲಾ ಕೊಟ್ರೋನಾನು ಮೋಬಯ್ಯನ ಸರೀರದ ತಂಟ್ಯಾಕ ಹೋಗಲಾರೆ” ಯಂದು ಖಡಾಖಂಡಿತವಾಗಿ ಹೇಳಿದನು. ಹಿಂಗೆ ಕರೆಸಿಕೊಂಡವರೆಲ್ಲ ಅರಮನೆಯಂಬ ನಾಕಕ್ಕರದ ಘನವಾದ ಸಬುದಕ್ಕೆ ಕವುಡೆ ಕಿಮ್ಮತ್ತು ಕೊಡಲಿಲ್ಲ. ನಾಯಕನು ಕಟಕಟನೆ ಹಲ್ಲು ಕಡಿಯುತ್ತಿರುವಾಗ್ಗೆ ಆತನೆಡಕಿದ್ದ ವ್ಯಕ್ತಿಯ ಜನುಮನಾಮ ಗುಡ್ಡನೆಂಬುದಾಗಿತ್ತು, ನಾಯಕನಿಟ್ಟ ಹೆಸರು ಕಳವಳ ಯಂಬುದಾಗಿತ್ತು, ಆತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಮೋಬಯ್ಯನಿಲ್ಲ, ಆತನನಂದಾಡಿ ಯೇನು ಪ್ರಯೋಜನ?” ಯಂದು ಬುದ್ದಿವಾದ ಹೇಳಿದರೆ, ಬಲಕಿದ್ದ ವ್ಯಕ್ತಿಯ ಜನುಮನಾಮ ಕೋಲ ಯಂಬುದಾಗಿತ್ತು, ಕಾಟಯ್ಯನಿಟ್ಟ ಅಡ್ಡ ನಾಮ ಗಂಧೂಡಿಯಂಬುದಾಗಿತ್ತು ಅತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಸಾಯಿರ ಗುಗ್ಗುಳಗಳಿಗೆ ಸಮಾನವಾದ ಕಾವಯ್ತಿ.. ಅದರ ತಂಟೆಗೆ ಹೋಗಬ್ಯಾಡೂರಿ” ಯಂದು ಬುದ್ಧಿ