ಪುಟ:ಅರಮನೆ.pdf/೬೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೪೧ ಘನರೂಪೀ ಕಫದ ವುಂಡೆಯನ್ನು ಕಿತ್ತು ಯೆಸೆದರು.. ಅದು ಸಿವಲಿಂಗದ ರೂಪ ಪಡಿತಾ ಪಡಿತಾ ಯಿಲ್ಲಿ ಬಿದ್ದು ದೇದೀಪ್ಯಮಾನವಾಗಿ ಬೆಳಗಲಾರಂಭಿಸಿತು. ಅದನ್ನು ಉದ್ಯುಕ್ತವಾಗಿ ಪ್ರತಿಷ«ಪಿಸಿ ಪೂಜೆ ಪುನಸ್ಕಾರ ಮಾಡಿ ಮಠ ಕಟ್ಟಿದರು. ತಮ್ಮ ಬಲಮೂಗಿನಿಂದ ಆರುಮೊಳದೆತ್ತರದ ತೇಜಸ್ವೀ ಅರನಾರೀಶ್ವರನನ್ನು ಹೊರ ತೆಗೆದು ಆತಂಗೆ ಮುನ್ನುಡಿ ಮಚ್ಚೇಂದ್ರನಾಥನೆಂದು ನಾಮಕರಣಮಂ ಮಾಡಿ ತಮ್ಮ ವಾರಸುದಾರನೆಂದು ಘೋಷಿಸಿ ಮಠದ ನಾಥರನ್ನಾಗಿ ನೇಮಿಸಿ ಅಂತರಾನಗೊಂಡರು. ಅವರು ವಿಷಸ್ತಂಭನ, ಸೇನಾಸ್ತಂಭನ, ವಿದ್ವೇಷಣ, ಪಾದುಕಾಸಾಧನ ಯವೇ ಮೊದಲಾದ ತಂತ್ರಮಂತ್ರವಿದ್ಯೆಗಳನ್ನು ಜೀರಿಸಿಕೊಂಡಿದ್ದರು. ಅವರ ಯೀ ವಿದ್ಯೆಗಳಿಗೆ ಮನಸೋತೋ? ಹೆದರಿಯೋ ಪುವ್ವಲ, ಗುತ್ತಲ, ಚರ, ಚೇರ, ಪಾಂಡ್ಯ, ಸಿಂಧ, ಚಲುಕರೇ ಮೊದಲಾದ ವಮುಸಗಳ ರಾಜ ಮಾರಾಜರು ಅವರ ಸಿಸ್ಯರಾದರು. ನಾಥರು ತಮ್ಮ ಪಾದುಕಾ ಸಾಧನ ವಿದ್ಯೆಯಿಂದ ಯಿರೇಳು ಲೋಕಗಳಾದ್ಯಂತ ಸಂಚರಿಸಬಲ್ಲವರಾಗಿದ್ದರು. ಭೂತಪ್ರೇತ ಪಿಚಾಚಿಗಳನ್ನು ಮಣಿಸಿ ತಮ್ಮಕಾವಿಯೊಳಗ ಕೆಲಸ ಕಾಠ್ಯಗಳಿಗೆ ಯಿಟ್ಟು ಕೊಂಡವರಾಗಿದ್ದರು. ಯಕ್ಕೋಟಿ ಸಮಯ ಚಕ್ರವರ್ತಿ ಯಂಬ ಬಿರುದನ್ನು ಧರಿಸಿದ್ದ ತಾವು ಅದ್ರುಸ್ಯರಾಗುವುದಕ್ಕೂ ಮೊದಲು ಪಾಶುಪತನಾಥರ ಸಿಕ್ಯೂತ್ತಮರಾದ ಭೂತಭುಜಂಗನಾಥರ ಕಯ್ದ ಮಠದ ಚುಕ್ಕಾಣಿಯನ್ನು ವಪ್ಪಿಸಿದರು. ಅವರ ನೂರನೇ ತಲೆ ಮಾರಿನವರಾದ ನಮ್ಮ... ಪರಿಚಯ ನಿನ್ನ ಭವುತಿಕ ಸರೀರಕ್ಕಿಲ್ಲ. ಆದರೆ ಅಂತರಾತುಮಕ್ಕುಂಟು ವತ್ಸಾ... ಯೋಗ ಧ್ಯಾನ ಪ್ರಾಣಾಯಾಮ ಮಾಡುತ್ತಿಲ್ಲವಾದ್ದರಿಂದ ಅಂತರಾತುಮದೊಂದಿಗೆ ಸಂವಾದಿಸುವ ಶಕ್ತಿ ನಿನಗಿಲ್ಲ... ಆದ್ದರಿಂದ ನಾವೇ ಅಪ್ಪಣೆ ಕೊಡಿಸುತ್ತೇವೆ ಕೇಳುವಂಥವನಾಗು.. ನೀನು ರಾಂಪುರ ಪರಗಣದಲ್ಲಿರೋ ಕಣ ಕುಪ್ಪೆಯಂಬ ಗ್ರಾಮ ನಿನ್ನ ಸ್ವಾಸ್ಥಿ ಅವುದೋ ಅಲ್ಲವೋ.... 'ಅವುದು ಮಾಸ್ವಾಮಿ... ನಿನ್ನ ತಂದೆಯ ನಾಮಧೇಯ ಗುರುವಯ್ಯ ಅವುದೋ.. ಅಲ್ಲವೋ...? 'ಅವುದು ಮುನಿವಯ್ಯಾ...? ನಿನ್ನ ಜನನಿಯ ನಾಮಧೇಯ ಯಂಕಮಾಂಬೆ ಅವುದೋ ಅಲ್ಲವೋ...? “ಅವುದು ಮಹಾಪ್ರಭು.' ಆ ದಂಪತಿಗಳಿಗೆ ಭಾಳಾ ವರುಷಂಗಳವರೆಗೆ ಮಕ್ಕಳಾಗಿರಲಿಲ್ಲ ಅವುದೋ.. ಅಲ್ಲಮೋ.. ಅವುದು ಮುನಿಕುಲತಿಲಕ. ಪರಮ ಆಸ್ತಿಕರೂ, ವೇದೋಪನಿಷತ್ ಪುರಾಣಗಳ ಜೀಲ್ಲೋದ್ಭವರೂ ಆಗಿದ್ದ ಅವರು