ಪುಟ:ಅರಮನೆ.pdf/೬೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೪೩ ಬಿಟ್ಟನು.. ಯಿದು ಕನಸೋ... ವಾಸ್ತವವೋ.. ಯಿರಲಿ ಯೇನಾದರೊಂದಿರಲಿ.. ಅದೆಲ್ಲ ಸರಿ.. ಲೀಗೀ ಮಹಾನುಭಾವರು.. ವತ್ಪಾ.. ನೀನು ನಮ್ಮ ಅಗೋಚರತ್ವ ಕುರಿತು ಯೋಚಿಸುತ್ತಿರುವಿ ತಾನೆ.. ನಾವೀ ನಾಥ ಪಂಥದ ಮಠದ ಸರುವಾಂಗೀಣ ಅಭಿರುದ್ದಿಗೆ ಮುವ್ವತ್ತು ನಾಲ್ವತ್ತು ವರುಷಗಳ ದುಡಿದೆವು.. ದುಡಿಯುವ ವುತ್ಸಾಹದಲ್ಲಿ ಕೆಲವು ಸಲ ವಾಮ ಮಾರವನ್ನು ಹಿಡಿಯಬೇಕಾಯಿತು. ದಾರಿ ಹೋಕ ಅರಿಷಡ್‌ವರಗಳಿಗೆ ನಾವು ನಮ್ಮ ಸರೀರವನ್ನು ಬಿಡದಿ ಕೊಡುತ್ತಿದ್ದುದೇ ಅಪಚಾರವಾಗಿ ಪರಿಣಮಿಸಿತು ವತ್ಪಾ.. ನಾವು ಸುಷುಪ್ತಿಯಿದ್ದಲ್ಲಿಗೆ ಬಂದು ಗೋರಖನಾಥರು ಪದೇ ಪದೆ ಯಚ್ಚರಿಸುತಲಿದ್ದರು. ಅದಕಿದ್ದು ನಾವು ವುಜ್ಜಯಿನಿಗೆ ಹೋಗಿ ಸ್ತ್ರೀ ಕಾಳ ಕಾಳೇಶ್ವರ ಲಿಂಗಕ್ಕೆ ಚಿತಾಭಸುಮಾಭಿಷೇಕವನ್ನು ಮಾಡಿಸಿ ಸೊಯ ಮಾನ್ವಿತ ಪಾಪಗಳನ್ನು ನರುಮದೆಯಲ್ಲಿ ಯಿಸಲ್ಪಿಸಬೇಕೆಂದು ನಿಶ್ಚಯಿಸಿ ಫಲಾನ ದಿವಸದಂದು ಯಿಲ್ಲಿಂದ ಪ್ರಂರಾಣ ಬೆಳೆಸಿದೆವು.. ಹಾದಿ ಮದ್ಯೆ ಇಂಬಕೇಸ್ವರದಲ್ಲಿ ಯಿಸ್ರಮಿಸಿಕೊಂಡಿರುವಾಗ್ಗೆ.. ಘಟಸರುಪಮೊಂದು ಯದುರಿಗೆ ಬಂದು ಸಿಂಬಿ ಸುತ್ತಿಕೂತಿತು. ನಾವು ಗಾಬರಿಗೊಳ್ಳದೆ ನಾಗರಾಜ ನೀನು ಯಾರಪ್ಪ ಯಂದು ಕೇಳಿದೆವು. ಅದಕಿದ್ದು ಆ ವುರಗವು “ನಾವು ಮಾನ್ಯರ ಮಸಲವಾಡ ನಾಥಮಠದ ಮೂಲನಾಥರು ಕಣಪ್ಪಾ... ನಮ್ಮ ಹೆಸರು ಮಚ್ಚೆಂದ್ರನಾಥರು” ಯಂದು ಹೇಳಲು ನಾವು ಭಕುತಿ ಪೂರೈಕವಾಗಿ ನಮಸ್ಕರಿಸಿದೆವು. ಆಗಿದ್ದು ವುರಗ ರೂಪಿ ನಾಥರು “ವತ್ಪಾ. ಯಲ್ಲಿಗೆ ಪ್ರಯಾಣ ಹೊಂಟಿರುವಿ? ಯದಕ ಹೊಂಟಿರುವಿ?” ಯಂದು ಕೇಳಲಾಗಿ ನಾವು ಯಿದ್ದ ಸಮಾಚಾರವ ಯಿದ್ದಂಗೆ ಅರಕೆ ಮಾಡಿಕೊಂಡೆವು. ಅದಕಿದ್ದು ಆ ತೂರಿಕರು ಮಾಡಿದ ಪಾಪದಿಂದ ಮಯ್ಲಿಗೆಯಾಗಿರುವ ಆತುಮದ ಮಝಗೇನ ತೊಡೆಯಬೇಕು ಮಗನೇ.. ಅದಕ್ಕೆ ಪ್ರಥಮ ಸೋಪಾನವಾಗಿ ನೀನು ನಿನ್ನ ಸರೀರವನ್ನು ತ್ಯಜಿಸಬೇಕಪ್ಪಾ.. ಸೊಂಯಂ ನೀನೇ ತ್ಯಜಿಸಬೇಕೆಂಬುದು ಗೋರಖರ ಯಿಚ್ಚೆ.. ಯೇನಂತೀಯಾ? ಯಂದು ಕೇಳಲು ನಾವು ಹೆದರಿದೆವು. ಹೆದರಿ “ನಾನು ನನ್ನ ಸರೀರವನ್ನು ತ್ಯಜಿಸಿ ಕೊಲೆಗಾರನಾಗಲಾರೆ' ಯಂದು ಹೇಳಿದೆವು.. ಆಗಿದ್ದು ಅವರು 'ಮರುಳೇ... ನೀನು ಯಾವತ್ತು ಗರದಾನದಂಥ ಪಾಪ ಕ್ರುತ್ಯ ಆರಂಭ ಮಾಡಿದೆಯೋ.. ಆಗಲೇ ನೀನು ನಿನ್ನ ಸರೀರವನ್ನು ಹತ್ಯೆ ಮಾಡಿಬಿಟ್ಟೆ. ನಾಥ ಮವುಲ್ಯಗಳಿಗೆ ಅಪಚಾರ ಮಾಡುತ ನಿನ್ನನ್ನು ನೀನು ಕೊಂದುಕೊಂಡಿರುವಿ.. ಯೀಗ ಸಾವುದು ಕೇವಲ ನೆಪಕ್ಕೆ ಮಾತ್ರಯಂದು